Ganesh to Vijay Suriya: ಕಿರುತೆರೆಗೆ ಮತ್ತೆ ಕಮ್‌ಬ್ಯಾಕ್ ಮಾಡುತ್ತಿರುವ ಸೆಲೆಬ್ರಿಟಿಗಳು!

Suvarna News   | Asianet News
Published : Jan 18, 2022, 04:57 PM IST

ಹೊಸ ವರ್ಷಕ್ಕೆ ಶುರುವಾಯ್ತು ಹೊಸ ಶೋ, ಹೊಸ ಧಾರಾವಾಹಿ. ಕಮ್‌ ಬ್ಯಾಕ್ ಮಾಡುತ್ತಿದ್ದಾರೆ ಜನಪ್ರಿಯ ಸೆಲೆಬ್ರಿಟಿಗಳು....  

PREV
15
Ganesh to Vijay Suriya: ಕಿರುತೆರೆಗೆ ಮತ್ತೆ ಕಮ್‌ಬ್ಯಾಕ್ ಮಾಡುತ್ತಿರುವ ಸೆಲೆಬ್ರಿಟಿಗಳು!

ಗಣೇಶ್ : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೋಲ್ಡನ್ ಗ್ಯಾಂಗ್ ಮಾತುಕತೆ ಕಾರ್ಯಕ್ರಮದ ಮೂಲಕ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ಸೂಪರ್ ಮಿನಿಟ್ ನಂತರ ದೊಡ್ಡ ಯಶಸ್ಸು ಕಾಣುತ್ತಿದೆ ಈ ಕಾರ್ಯಕ್ರಮ.

25

ವಿಜಯ್ ಸೂರ್ಯ : ಅಗ್ನಿಸಾಕ್ಷಿ, ಪ್ರೇಮಲೋಕ ಧಾರಾವಾಹಿ ಮೂಲಕ ಹುಡುಗಿಯರ ಮನಸ್ಸು ಕದ್ದಿರುವ ಹೀರೋ ವಿಜಯ್ ಸೂರ್ಯ ಡಾಕ್ಟರ್ ಕರ್ಣ ಧಾರಾವಾಹಿ ಮೂಲಕ ಮತ್ತೆ ಕಮ್‌ ಬ್ಯಾಕ್‌ ಮಾಡುತ್ತಿದ್ದಾರೆ. ಸಿನಿಮಾ ಚಿತ್ರೀಕರಣದ ಜೊತೆ ಇದನ್ನು ಬ್ಯಾಲೆನ್ಸ್‌ ಮಾಡುವುದಾಗಿ ಹೇಳಿಕೊಂಡಿದ್ದಾರೆ. 

35

ಮಯೂರಿ ಉಪಧ್ಯಾಯ: ಕನ್ನಡ ಕಿರುತೆರೆಯಲ್ಲಿ ನಡೆಯುವ ಜನಪ್ರಿಯ ಡ್ಯಾನ್ಸ್‌ ರಿಯಾಲಿಟಿ ಶೋಗಳಲ್ಲಿ ಮೊದಲು ತೀರ್ಪುಗಾರರಾಗಿ ಕಾಣಿಸಿಕೊಳ್ಳುವುದು ಮಯೂರಿ. ನೃತ್ಯದ ಬಗ್ಗೆ ಅದ್ಭುತವಾಗಿ ಜ್ಞಾನ ಇರುವ ಮಯೂರಿ ಪ್ರತಿಯೊಬ್ಬ ಸ್ಪರ್ಧಿಗೂ ಪ್ರೋತ್ಸಾಹ ನೀಡಿ ದೊಡ್ಡ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. 

45

ಸಿರಿಜಾ: ಕನ್ನಡ ಚಿತ್ರರಂಗದಲ್ಲಿಅದ್ಭುತವಾದ ನಟಿಯಾಗಿ ಗುರುತಿಸಿಕೊಂಡಿರುವ ಸಿರಿಜಾ 'ರಾಮಚಾರಿ' ಧಾರಾವಾಹಿ ಮೂಲಕ ಕಮ್‌ ಬ್ಯಾಕ್ ಮಾಡುತ್ತಿದ್ದಾರೆ.  ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ ಆದರೆ ಇನ್ನೂ ಸಣ್ಣ ಪುಟ್ಟ ಕ್ಲಿಪಿಂಗ್ ರಿವೀಲ್ ಮಾಡಿದ್ದಾರೆ. 

55

ನಿರಂಜನ್ ದೇಶಪಾಂಡೆ: ಈ ಹಿಂದೆ ಲೂಸ್‌ ಮಾದ ಯೋಗಿ ನಡೆಸಿಕೊಡುತ್ತಿದ್ದ ಗಾನ ಬಜಾನ ಕಾರ್ಯಕ್ರಮದ ಮತ್ತೊಂದು ಸೀಸನ್‌ನ ನಿರಂಜನ್ ದೇಶಪಾಂಡೆ ನಿರೂಪಣೆ ಮಾಡುತ್ತಿದ್ದಾರೆ. ಕೊನೆಯ ಬಾರಿ 'ತುತ್ತ ಮುತ್ತ'ದಲ್ಲಿ ಕಾಣಿಸಿಕೊಂಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories