ರಾಬರ್ಟ್, ಬನಾರಸ್, ಗರಡಿ, ಶುಗರ್ ಫ್ಯಾಕ್ಟರ್, ಡಿಮೋ ಪೀಸ್ ಸೇರಿದಂತೆ ಹಲವು ಕನ್ನಡ ಮತ್ತು ತುಳು ಸಿನಿಮಾಗಳಲ್ಲಿ ಮಂಗಳೂರು ಚೆಲುವೆ ಸೋನಲ್ ಅಭಿನಯಿಸಿದ್ದಾರೆ.
ಕೆಲವು ದಿನಗಳ ಹಿಂದೆ ನಟಿ ಸೋನಲ್ ಮತ್ತು ನಿರ್ದೇಶಕ ತರುಣ್ ಸುಧೀರ್ ಮದುವೆ ಅದ್ಧೂರಿಯಾಗಿ ನಡೆಯಿತ್ತು. ಹಿಂದು ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಹಿಂದು ಸಂಪ್ರದಾಯದ ಮದುವೆ ಬೆಂಗಳೂರಿನಲ್ಲಿ ನಡೆಯಿತ್ತು ಇದು ತರುಣ್ ಆಸೆ ಪಟ್ಟಂತೆ ನಡೆಯಿತ್ತು, ಮಂಗಳೂರಿನ ಚರ್ಚ್‌ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಸೋನಲ್ ಇಷ್ಟ ಪಟ್ಟ ರೀತಿಯಲ್ಲಿ ನಡೆಯಿತ್ತು.
ಸದ್ಯ ಹನಿಮೂನ್ ಟ್ರಿಪ್ ಅಲ್ಲಿ ಇಲ್ಲಿ ಅಂತ ನವ ಜೋಡಿಗಳು ಸುತ್ತಾಡಿಕೊಂಡು ಜಾಲಿ ಮಾಡುತ್ತಿದ್ದಾರೆ. ಅಲ್ಲದೆ ಮದುವೆ ಆದ ಮೇಲೆ ದಪ್ಪ ಆಗಿದ್ದೀರಾ ಎಂದು ಪತ್ರಕರ್ತ ಕಾಲೆಳೆದಾಗ ಗಂಡ ಖುಷಿಯಾಗಿ ನೋಡಿಕೊಳ್ಳುತ್ತಿದ್ದಾರೆ ಎಂದಿದ್ದರು.
ಈ ನಡುವೆ ಸೋನಲ್ ತಮ್ಮ ಹುಟ್ಟೂರಿನಲ್ಲಿ ಇರುವ ಶ್ರೀಮಂತ ರಾಜಗುಳಿಗ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಮಂಗಳೂರಿನ ಪಚ್ಚನಾಡಿ ಗ್ರಾಮದಲ್ಲಿ ಇರುವ ದೈವದ ಆಶೀರ್ವಾದ ಪಡೆದುಕೊಂಡಿದ್ದಾರೆ.
ನಟಿಯಾಗಿ ದೊಡ್ಡ ಕುಟುಂಬಕ್ಕೆ ಸೇರಿದರೂ ತಮ್ಮ ಹುಟ್ಟೂರನ್ನು ಬಿಡದ ಸುಂದರಿ ಎಂದು ಸೋನಲ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ. ತರುಣ್ ಕೈ ಹಿಡಿದ ಮೇಲೆ ಸೋನಲ್‌ರನ್ನು ಕನ್ನಡಿಗರು ಇನ್ನು ಹೆಚ್ಚು ಒಪ್ಪಿಕೊಂಡಿದ್ದಾರೆ.