ಗಿಣಿ ಬಣ್ಣದ ಸೀರೆಯಲ್ಲಿ ಮಿಂಚಿದ ಅಮೃತಾ ಪ್ರೇಮ್: ನಿಮ್ಮ ತಂದೆಗೆ ವಯಸ್ಸೇ ಆಗೋಲ್ವಾ ಅನ್ನೋದಾ ನೆಟ್ಟಿಗರು!

Published : Oct 30, 2023, 12:30 AM IST

ಸ್ಯಾಂಡಲ್‌ವುಡ್‌ನ ಹೊಸ ಪ್ರತಿಭೆ ನಟಿ ಅಮೃತಾ ಪ್ರೇಮ್ ಅವರು ಆಕರ್ಷಕವಾದ ಗಿಣಿ ಹಸಿರು ಬಣ್ಣದ ಸೀರೆ ಉಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅವರ ಮುದ್ದಾದ ಫೊಟೋಸ್ ನೋಡಿ ಫ್ಯಾನ್ಸ್ ಸಖತ್ ಫಿದಾ ಆಗಿದ್ದಾರೆ.

PREV
17
ಗಿಣಿ ಬಣ್ಣದ ಸೀರೆಯಲ್ಲಿ ಮಿಂಚಿದ ಅಮೃತಾ ಪ್ರೇಮ್: ನಿಮ್ಮ ತಂದೆಗೆ ವಯಸ್ಸೇ ಆಗೋಲ್ವಾ ಅನ್ನೋದಾ ನೆಟ್ಟಿಗರು!

ಕನ್ನಡ ಚಿತ್ರರಂಗಕ್ಕೆ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಅವರು ಟಗರು ಪಲ್ಯ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದಾರೆ. ನಟಿಯ ಸಿನಿಮಾ ಬಿಡುಗಡೆಯಾಗಿ ಮೆಚ್ಚುಗೆ ಗಳಿಸುತ್ತಿದೆ. ಅಮೃತಾ ಈಗ ಎಲ್ಲರಿಗೂ ಥ್ಯಾಂಕ್ಸ್ ಹೇಳಿ ಫೋಟೋಸ್ ಶೇರ್ ಮಾಡಿದ್ದಾರೆ.

27

ಅಮೃತಾ ಪ್ರೇಮ್ ಗಿಣಿ ಬಣ್ಣದ ಹಸಿರಿನ ಸೀರೆ ಹಾಗೂ ಗಾಢ ಹಸಿರು ಬಣ್ಣದ ಬ್ಲೌಸ್ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದು ಅವರ ಫೊಟೋಗಳು ವೈರಲ್ ಆಗಿವೆ. ಅವರ ಫೋಟೋಸ್ ನೋಡಿದ ಫ್ಯಾನ್ಸ್ ಫಿದಾ ಆಗಿದ್ದಾರೆ. ಸೀರೆಯಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

37

ಸಿಂಪಲ್ ಆಗಿ ರೆಡಿಯಾದ ಅಮೃತಾ ಪ್ರೇಮ್ ಅವರು ತುಂಬಾ ಕ್ಯೂಟೆಸ್ಟ್ ಆಗಿ ಕಾಣಿಸಿದ್ದಾರೆ. ಅವರ ಫೊಟೋಗೆ ಕಮೆಂಟ್ ಮಾಡಿ ಬಹಳಷ್ಟು ಫ್ಯಾನ್ಸ್‌ ಸಿನಿಮಾದ ರಿವ್ಯೂ ಕೊಟ್ಟಿದ್ದಾರೆ. ಅಲ್ಲದೇ ನಿಮ್ಮ ತಂದೆ ಪ್ರೇಮ್‌ಗೆ ವಯಸ್ಸೇ ಆಗೋಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

47

ಅಮೃತಾ ಪ್ರೇಮ್​ ಸಿನಿಮಾ ಹೊರತಾಗಿಯು ಸಾಮಾಜಿಕ ಜಾಲತಾಣದಲ್ಲಯೂ ಅಭಿಮಾನಿಗಳನ್ನು ಹೊಂದಿದ್ದಾರೆ. ವಿಭಿನ್ನವಾದ ಫೋಟೋ ಅಪ್ಲೋಡ್​ ಮಾಡುವ ಮೂಲಕ ಅನೇಕ ಯುವಕರ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದಾರೆ. 

57

ಅಮೃತಾ ಪ್ರೇಮ್​ ಇನ್​​ಸ್ಟಾದಲ್ಲಿ ಬರೀ 88 ಪೋಸ್ಟ್​ ಮಾತ್ರ ಹಂಚಿಕೊಂಡಿದ್ದಾರೆ. ಆದರೆ ನಟಿಯ ಸೌಂದರ್ಯ ಮನಸೋತು 66.3 ಸಾವಿರಕ್ಕೂ ಅಧಿಕ ಜನರು ಅವರನ್ನು ಫಾಲೋ ಮಾಡುತ್ತಿದ್ದಾರೆ. 

67

ತುಂಬಾ ಸಿನಿಮಾಗಳನ್ನು ನೋಡುತ್ತಿದ್ದೆ. ಸಿನಿಮಾ ಎಂದರೆ ನನಗೆ ಇಷ್ಟ. ಆದರೆ ಚಿತ್ರರಂಗ ಪ್ರವೇಶಿಸುವ ನಿರೀಕ್ಷೆ ಇರಲಿಲ್ಲ. ಟಗರು ಪಲ್ಯ ಸಿನಿಮಾಗೆ ಆಯ್ಕೆಯಾಗಿದ್ದು ಅನಿರೀಕ್ಷಿತ ಎಂದು ಅಮೃತಾ ಹೇಳಿದ್ದಾರೆ.

77

ಮಟನ್ ಚಾಪ್ಸ್‌ಗೆ ಟಗರು ಪಲ್ಯ ಎಂದು ಹೇಳುತ್ತಾರೆ ಅಂತ ಗೊತ್ತಿರಲಿಲ್ಲ. ನನಗೆ ಕತೆ ತುಂಬಾ ಇಷ್ಟವಾಗಿತ್ತು. ನನ್ನ ಪಾತ್ರವೂ ಹಿಡಿಸಿತ್ತು. ಆದರೆ ಸ್ವಲ್ಪ ಸವಾಲಿನ ಪಾತ್ರ. ಹಳ್ಳಿ ಹುಡುಗಿ. ಮುಗ್ಧ ಹುಡುಗಿಯೇ ಆದರೂ ತುಂಬಾ ಸ್ಟ್ರಾಂಗ್. ಮಂಡ್ಯ ಸ್ಲ್ಯಾಂಗಿನ ಭಾಷೆ ಎಂದು ಅಮೃತಾ ತಿಳಿಸಿದ್ದಾರೆ.

Read more Photos on
click me!

Recommended Stories