ವಿವಾಹ ವಾರ್ಷಿಕೋತ್ಸವದಂದು ರಾಯಲ್ ಲುಕ್‌ನಲ್ಲಿ ಮಿಂಚಿದ ರಾಗಿಣಿ-ಪ್ರಜ್ವಲ್ ಜೋಡಿ

Published : Oct 27, 2023, 05:53 PM IST

ಸ್ಯಾಂಡಲ್ ವುಡ್ ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ತಮ್ಮ ಪತ್ನಿ ರಾಗಿಣಿ ಜೊತೆಗೆ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದು ಮತ್ತೆ ವಧು ವರರಂತೆ ಮಿಂಚುತ್ತಿದ್ದಾರೆ.   

PREV
18
ವಿವಾಹ ವಾರ್ಷಿಕೋತ್ಸವದಂದು ರಾಯಲ್ ಲುಕ್‌ನಲ್ಲಿ ಮಿಂಚಿದ ರಾಗಿಣಿ-ಪ್ರಜ್ವಲ್ ಜೋಡಿ

ಸ್ಯಾಂಡಲ್ ವುಡ್ ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Dinamic prince Prajwal Devraj)  ಮತ್ತು ಪತ್ನಿ ರಾಗಿಣಿ ಜೋಡಿ ನೋಡಿದ್ರೆ ದೃಷ್ಟಿಯಾಗೋದಂತೂ ಗ್ಯಾರಂಟಿ. ಅಂತಹ ಮುದ್ದಾದ ಜೋಡಿ ಇವರದ್ದು. ಇದೀಗ ಇಬ್ಬರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳಂತೂ ತಮ್ಮ ನೆಚ್ಚಿನ ಜೋಡಿ ಫೋಟೋ ನೋಡಿ ಖುಷಿಪಟ್ಟಿದ್ದಾರೆ. 
 

28

ತಮ್ಮ ಮದುವೆ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ರಾಗಿಣಿ - ಪ್ರಜ್ವಲ್ ಜೋಡಿ ಅಕ್ಟೋಬರ್ 25 ರಂದು ಫೊಟೋ ಶೂಟ್ ಮಾಡಿಸಿಕೊಂಡಿದ್ದು, ಕೆಲವೊಂದಿಷ್ಟು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

38

ರಾಗಿಣಿ (Ragini Chandra) ಕೆಂಪು ಬಣ್ಣದ ಲೆಹೆಂಗಾ ಧರಿಸಿದ್ದು, ಅದಕ್ಕೆ ಮ್ಯಾಚ್ ಆಗುವಂತೆ ಹೆವಿ ಜ್ಯುವೆಲ್ಲರಿ ಧರಿಸಿದ್ದಾರೆ. ಇನ್ನು ಪ್ರಜ್ವಲ್ ದೇವರಾಜ್ ಆಫ್ ವೈಟ್ ಬಣ್ಣದ ಕುರ್ತಾ ಧರಿಸಿದ್ದು, ಅದಕ್ಕೆ ಮ್ಯಾಚ್ ಆಗುವಂತೆ ಕೆಂಪು ಬಣ್ಣದ ದುಪ್ಪಟ್ಟಾ ಧರಿಸಿದ್ದು, ಮುತ್ತಿನ ಮಾಲೆ ಧರಿಸಿದ್ದಾರೆ. 
 

48

ಇಬ್ಬರೂ ರಾಯಲ್ ಲುಕ್ ನಲ್ಲಿ (royal look) ಅದ್ಭುತವಾಗಿ ಕಾಣಿಸುತ್ತಿದ್ದು, ಉತ್ತರ ಭಾರತದ ವಧು ವರರಂತೆ ತುಂಬಾನೆ ಚೆನ್ನಾಗಿ ಕಾಣುತ್ತಿದ್ದಾರೆ. ಇಬ್ಬರ ಲುಕ್ ನೋಡಿ ಅಭಿಮಾನಿಗಳು ಸಂತೋಷಪಟ್ಟಿದ್ದು, ಇಬ್ಬರಿಗೂ ವಿವಾಹ ವಾರ್ಷಿಕೋತ್ಸವದ ಶುಭ ಕೋರಿದ್ದಾರೆ. 
 

58

ರಾಗಿಣಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ (instagram account) ಮೂರು ಫೋಟೋಗಳನ್ನು ಶೇರ್ ಮಾಡಿದ್ದು, ಮತ್ತೊಂದು ವರ್ಷದ ಸೆಲೆಬ್ರೇಶನ್, ನಮ್ಮ ಲವ್ ಸ್ಟೋರಿಯನ್ನು ಎಲ್ಲಾ ಫ್ರೇಮ್ ನಲ್ಲಿ ಸೆರೆಹಿಡಿಯಲಾಗುವುದು ಎಂದು ಬರೆದುಕೊಂಡಿದ್ದಾರೆ. 
 

68

ರಾಗಿಣಿ ಮತ್ತು ಪ್ರಜ್ವಲ್ ಪ್ರೀತಿ ಮಾಡಿ ಮದುವೆಯಾಗಿದ್ದು, ಇವರದ್ದು ಸದ್ಯಕ್ಕೆ ಬರೋಬ್ಬರಿ 18 ವರ್ಷದ ಲವ್ ಸ್ಟೋರಿಯಾಗಿದೆ. ಇತ್ತೀಚೆಗೆ ಇಬ್ಬರೂ ತಮ್ಮ ಲವ್ ಆನಿವರ್ಸರಿಯನ್ನು ಸಹ ಸೆಲೆಬ್ರೇಟ್ ಮಾಡಿದ್ದರು. 
 

78

ಸ್ಯಾಂಡಲ್ ವುಡ್ ನ ಈ ಮುದ್ದಾದ ಜೋಡಿ ತಮ್ಮ ಲವ್ ಸ್ಟೋರಿ (love story) ಬಗ್ಗೆ ತುಂಬಾ ಸಲ ಹೇಳಿದ್ದರು. ಇಬ್ಬರದ್ದು ಸ್ಕೂಲ್ ಡೇಸ್ ಲವ್ ಸ್ಟೋರಿ. ಪ್ರಜ್ವಲ್ 9ನೇ ತರಗತಿ ಮತ್ತು ರಾಗಿಣಿ 6ನೇ ಕ್ಲಾಸಲ್ಲಿರೋವಾಗ್ಲೇ ಲವ್ ಮಾಡೋಕೆ ಶುರು ಮಾಡಿದ್ರಂತೆ ಈ ಜೋಡಿಗಳು. 

88

ಇಬ್ಬರು 2015 ರ ಅಕ್ಟೋಬರ್ 25 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸದ್ಯ ಪ್ರಜ್ವಲ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೆ, ರಾಗಿಣಿ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದು, ಫಿಟ್ನೆಸ್, ಟ್ರಾವೆಲ್, ಜೊತೆಗೆ ಅವರು ಸಹ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. 

click me!

Recommended Stories