ನಟಿ ಸುಮನ್ ರಂಗನಾಥನ್ ಮೊದಲ ಮದುವೆ ಹಾಗೂ ರಿಲೆಷಮ್‌ಶಿಪ್‌ಗಳು ತುಂಬಾ ಸದ್ದು ಮಾಡಿತ್ತು. ಇಲ್ಲಿದೆ ನೋಡಿ ಡಿಟೇಲ್ಸ್.
2005ರಲ್ಲಿ ಮದುವೆಯಾದಗಿದ್ದರು ಸುಮನ್ ಮತ್ತು ಬಂಟಿ. ಒಂದು ವರ್ಷ ಒಳಗೆ ಅವರ ಜಗಳ ಮಾಧ್ಯಮಗಳ ಹೆಡ್‌ಲೈನ್‌ನಲ್ಲಿ ಕಾಣಿಕೊಳ್ಳಲಾರಂಭಿಸಿತು. 2006 ರಲ್ಲಿ, ಈ ಕಪಲ್ ಮದುವೆಯಾಗಿ ಸುಮಾರು 8 ತಿಂಗಳ ನಂತರ ಏಕ್ತಾ ಕಪೂರ್ ಪಾರ್ಟಿಯಲ್ಲಿ ಜಗಳವಾಡಿದರು. ನಂತರ ಸುಮನ್ ಬ್ಯಾಗ್ ಪ್ಯಾಕ್ ಮಾಡಿಕೊಂಡು ಬಂಟಿಯ ಮನೆಯಿಂದ ಹೊರಬಂದಿದ್ದರು.
ಪ್ಯಾಕ್ ಮಾಡಿದ ಬ್ಯಾಗ್‌ನೊಂದಿಗೆ ಪತಿ (ಈಗ ಎಕ್ಸ್) ಬಂಟಿ ವಾಲಿಯಾ ಮನೆಯಿಂದ ಹೊರಬಂದಾಗ ಸುಮನ್ ತುಂಬಾ ಸುದ್ದಿಯಲ್ಲಿದ್ದರು. ಆ ಸಮಯದಲ್ಲಿ, ಸುಮನ್ ತಮ್ಮಕಸಿನ್ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಬಂಟಿ ಆರೋಪಿಸಿದ್ದರು. ಇದು ಮಾತ್ರವಲ್ಲ, ಅವರು ಜಿಮ್ ಟ್ರೈನರ್ ಜೊತೆಯ ಸಂಬಂಧವನ್ನು ಸಹ ಬಹಿರಂಗಪಡಿಸಿದರು.
ಮೊದಲಿಗೆ, ಬಂಟಿ ಮತ್ತು ಸುಮನ್ ಇಬ್ಬರೂ ಜಗಳದ ಸುದ್ದಿಯನ್ನು ನಿರಾಕರಿಸುತ್ತಿದ್ದರು. ಆದರೆ ಸುಮಾರು ಒಂದು ವಾರದ ನಂತರ, ಬಂಟಿ ಮಾಧ್ಯಮಗಳಿಗೆ 'ನಾನು ಅವಳಿಗೆ ಪ್ರೀತಿ, ಹಣ ಮತ್ತು ಸ್ವಾತಂತ್ರ್ಯ ಎಲ್ಲವನ್ನೂ ನೀಡಿದ್ದೇನೆ, ಆದರೆ ಅವಳು ಅದನ್ನು ದುರುಪಯೋಗಪಡಿಸಿಕೊಂಡಳು' ಎಂದು ಆರೋಪಿಸಿದ್ದರು.
'ನನಗೆ ಮೋಸ ಮಾಡಿ ನನ್ನ ಕುಟುಂಬದ ಇಮೇಜ್ ಹಾಳು ಮಾಡಿದ ನಂತರ, ಜೀವನಾಂಶವಾಗಿ ಪಾಲಿ ಹಿಲ್‌ನಲ್ಲಿ ಒಂದು ಫ್ಲಾಟ್, ಒಂದು ಕಾರು ಮತ್ತು ಪ್ರತಿ ತಿಂಗಳಿಗೆ ತಿಂಗಳಿಗೆ 2 ಲಕ್ಷ ರೂ ಹಣಕ್ಕಾಗಿ ನೋಟಿಸ್ ಕಳುಹಿಸಿ ಡಿಮ್ಯಾಂಡ್ ಮಾಡಿದ್ದಾಳೆ' ಎಂದು ಬಂಟಿ ಹೇಳಿಕೆ ನೀಡಿದ್ದರು
ಸುಮನ್ ತನ್ನ ಅಲ್ಪಾವಧಿಯ ಮದುವೆಯ ಸಮಯದಲ್ಲಿ ಖರೀದಿಸಿದ್ದ ಎಲ್ಲವನ್ನೂತೆಗೆದುಕೊಂಡು ಸಂಬಂಧ ಮುರಿದುಕೊಂಡಿದ್ದಾಳೆ. ಇದರಲ್ಲಿ ಆಭರಣ ಮತ್ತು ಹಣವೂ ಸೇರಿತ್ತು, ಹಾಗೂ ಸುಮನ್ ಮನೆಯಿಂದ ಹೊರಡುವ ಮೊದಲು 24 ಬ್ಯಾಗ್‌ಗಳನ್ನು ಪ್ಯಾಕ್ ಮಾಡಿದ್ದರು ಎಂದು ನಟಿಯ ಪತಿ ಬಂಟಿ ಹೇಳಿದ್ದರು.
3 ಜೂನ್ 2019 ರಂದು ಸುಮನ್ ರಂಗನಾಥ್ ಕಾಫಿ ತಯಾರಕ ಉದ್ಯಮಿ ಸಜನ್ ಚಿನಪ್ಪ ಅವರನ್ನು ವಿವಾಹವಾದರು. ಸಜನ್ಕೊಡಗಿನಲ್ಲಿ ಸಾಕಷ್ಟು ಪ್ಲಾಂಟೇಷನ್ ವ್ಯವಹಾರವನ್ನು ಹೊಂದಿದ್ದಾರೆ.
1996 ರಲ್ಲಿ ಸುಮನ್ ಬಾಲಿವುಡ್‌ನಲ್ಲಿ ಕೆರಿಯರ್ ಶುರು ಮಾಡಲು ಹೆಣಗಾಡುತ್ತಿರುವಾಗ ರಾಹುಲ್ ರಾಯ್ ಸಹಾಯ ಮಾಡಿದರು .
ಮೊದಲ ಚಿತ್ರ 'ಫಾರೆಬ್' ನಲ್ಲಿ ಸ್ವಿಮ್ ಸೂಟ್ ಧರಿಸಬೇಕಾದಾಗ ಹಿಂಜರಿಯುತ್ತಿದ್ದ ಸುಮನ್ ರಾಹುಲ್ ಕನ್ವೀಸ್ ಮಾಡಿದ ನಂತರ ಆಕೆ ಈ ದೃಶ್ಯಕ್ಕೆ ಸಿದ್ಧರಾಗಿದಂತೆ.
ಆ ಸಮಯದಲ್ಲಿ, ರಾಹುಲ್ ರಾಯ್ ಮತ್ತು ಸುಮನ್ ರಿಲೆಷನ್‌ಶಿಪ್ ಸುದ್ದಿಯಲ್ಲಿತ್ತು. ಇಬ್ಬರೂ ಮದುವೆಯಾಗಲೂ ರೆಡಿ ಇದ್ದರು. ಆದರೆ ನಂತರ ಯಾವುದೋ ಕಾರಣದಿಂದಾಗಿ ಬ್ರೇಕಪ್ ಆಯಿತು.
ಸುಮನ್ ರಂಗನಾಥನ್ ಹಿಂದಿ ಚಿತ್ರಗಳಾದ ಗುಮ್ನಾಮ್, ಮೆಹಬೂಬಾ, ದೇವಕಿ, ಹಮ್ ತುಮ್ಹರೆ ಹೈ ಸನಮ್, ಕುರುಕ್ಷೇತ್ರ, ಆ ಅಬ್ ಲೌಟ್ ಚಲೆ ಆಂಖೇನ್ ಮೇ ತುಮ್ ಹೋ ಮತ್ತು ಫರೇಬ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಆ ಅಬ್ ಲೌಟ್ ಚಲೇ ಚಿತ್ರದಲ್ಲಿ ಐಶ್ವರ್ಯಾ ರೈ ಜೊತೆ ನಟಿಸಿದ್ದಾರೆ ಕನ್ನಡ ನಟಿ.
2016ರಲ್ಲಿ 'ನೀರ್ ದೋಸೆ' ಚಿತ್ರಕ್ಕೆ ಸೈಮಾ ಬೆಸ್ಟ್ ಸಪೋರ್ಟಿಂಗ್ ರೋಲ್ ಅವಾರ್ಡ್ ಪಡೆದಿದ್ದಾರೆ.