ಜಯಮಾಲ ಪುತ್ರಿ ಸೌಂದರ್ಯ ಮದುವೆಯ ಸುಂದರ ಕ್ಷಣಗಳ ಫೋಟೊಗಳು

Published : Feb 07, 2025, 05:51 PM ISTUpdated : Feb 08, 2025, 12:26 PM IST

ಸ್ಯಾಂಡಲ್’ವುಡ್ ನಟಿ ಜಯಮಾಲ ಪುತ್ರಿ ಸೌಂದರ್ಯ ವಿವಾಹವೂ ರುಷಭ್ ಜೊತೆ ಇಂದು ಅದ್ಧೂರಿಯಾಗಿ ನಡೆದಿದ್ದು, ಮದುವೆಯ ಸುಂದರ ಕ್ಷಣಗಳ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.   

PREV
16
ಜಯಮಾಲ ಪುತ್ರಿ ಸೌಂದರ್ಯ ಮದುವೆಯ ಸುಂದರ ಕ್ಷಣಗಳ ಫೋಟೊಗಳು

ಚಂದನವನದ ಹಿರಿಯ ನಟಿ ಜಯಮಾಲ ಅವರ ಪುತ್ರಿ ಸೌಂದರ್ಯ ವಿವಾಹವು ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ಮದುವೆ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು ಭಾಗಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸೌಂದರ್ಯ ಮದುವೆ ಫೋಟೊಗಳು ವೈರಲ್ ಆಗುತ್ತಿವೆ. 
 

26

ಜಯಮಾಲ ನಟಿ ಹಾಗೂ ರಾಜಕಾರಣಿಯಾಗಿದ್ದು, ಇವರ ಪುತ್ರಿ ಸೌಂದರ್ಯ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ, ಬಳಿಕ ಸಿನಿಮಾದಿಂದ ದೂರ ಉಳಿದಿದ್ದಾರೆ. ʼಮಿಸ್ಟರ್‌ ಪ್ರೇಮಿಕುಡುʼ,  ʼಸಿಂಹಾದ್ರಿʼ, , ʼಗಾಡ್‌ ಫಾದರ್ʼ‌, ಹಾಗೂ ʼಪಾರು ವೈಫ್‌ ಆಫ್‌ ದೇವದಾಸ್ʼ‌ ಸೌಂದರ್ಯ  ನಟಿಸಿದ ಸಿನಿಮಾಗಳು. ಇದರ ನಂತರ ಸೌಂದರ್ಯ ಸಿನಿಮಾಗೆ ಗುಡ್ ಬೈ ಹೇಳಿ, ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿದ್ದರು. 
 

36

ನಟಿ ಸೌಂದರ್ಯ ಮದುವೆಯಾಗುತ್ತಿರುವ ಹುಡುಗನ ಹೆಸರು ರುಷಭ್ ಆಗಿದ್ದು, ಹುಡುಗ ಯಾರು? ಎಲ್ಲಿಯವರು? ಏನು ಕೆಲಸ ಮಾಡುತ್ತಿದ್ದಾರೆ? ಇದು ಅರೇಂಜ್ ಮ್ಯಾರೆಜ್ ಅಥವಾ ಲವ್ ಮ್ಯಾರೇಜ್ ಅನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸದ್ಯ ಅದ್ಧೂರಿ ಮದುವೆಯ ಫೊಟೊಗಳು ಸೋಶಿಯಲ್ ಮೀಡೀಯಾದಲ್ಲಿ ವೈರಲ್ ಆಗುತ್ತಿವೆ. 
 

46

ಸೌಂದರ್ಯ ತಮ್ಮ ಪತಿ ಜೊತೆ ಅರುಂಧತಿ ನಕ್ಷತ್ರ ನೋಡುತ್ತಿರುವ ಫೋಟೊಗಳು, ಕನ್ಯಾದನದ ಫೋಟೊಗಳು, ಮಂಟಪ್ಪಕ್ಕೆ ಬರುತ್ತಿರುವಂತಹ ಫೋಟೊಗಳು, ಹಾರ ಬದಲಾಯಿಸುವಂತಹ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. 
 

56

ಮದುವೆಯಲ್ಲಿ ಸೌಂದರ್ಯ ಗೋಲ್ಡನ್ ಬಣ್ಣದ ಸೀರೆಯನ್ನು ಧರಿಸಿದ್ದು, ಅದಕ್ಕೆ ಮ್ಯಾಚ್ ಆಗುವಂತೆ ಗೋಲ್ಡನ್ ಬಳೆ, ಜ್ಯುವೆಲ್ಲರಿ ಧರಿಸಿದ್ದಾರೆ. ಅವರ ಪತಿ ರುಷಭ್ ಕೂಡ ಗೋಲ್ಡನ್ ಬಣ್ಣದ ಶೆರ್ವಾನಿ ಧರಿಸಿದ್ದಾರೆ. ಈ ಜೋಡಿಗೆ ಗಣ್ಯರು, ಸೆಲೆಬ್ರಿಟಿಗಳು ಮದುವೆಯ ಶುಭಾಶಯಗಳನ್ನು ತಿಳಿಸಿದ್ದಾರೆ. 
 

66

ಸೌಂದರ್ಯ ಜಯಮಾಲ ಅವರ ಹರಶಿನ ಶಾಸ್ತ್ರ ಅದ್ಧೂರಿಯಾಗಿ ನಡೆದಿದ್ದು, ಈ ಸಮಾರಂಭದಲ್ಲಿ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ನಟಿ ಶ್ರುತಿ, ಮಾಳವಿಕಾ, ಸುಧಾರಾಣಿ ಸಂಭ್ರಮದಿಂದ ನೃತ್ಯ ಮಾಡಿದ್ದರು. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. 
 

Read more Photos on
click me!

Recommended Stories