ಯೋಗರಾಜ್ ಭಟ್ ನಿರ್ದೇಶನದ, ಬಿ.ಸಿ. ಪಾಟೀಲ್ ನಿರ್ಮಿಸಿ, ಪ್ರಧಾನ ಪಾತ್ರದಲ್ಲಿ ನಟಿಸಿರುವ ‘ಗರಡಿ’ ಚಿತ್ರದಲ್ಲಿ ಸೋನಲ್ ಮೊಂತೆರೋ ನಾಯಕಿಯಾಗಿ ನಟಿಸಿದ್ದಾರೆ.
ಚಂದ ಮತ್ತು ಪ್ರತಿಭೆ ಎರಡೂ ಹೊಂದಿರುವ ಸೋನಲ್ ‘ಗರಡಿ’ ಸಿನಿಮಾ ಮೇಲೆ ಬಹು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಇದು ನಟನೆಗೆ ತುಂಬಾ ಅವಕಾಶ ನೀಡಿರುವ ಸಿನಿಮಾ’ ಎನ್ನುವ ಸೋನಲ್.
‘ಭಟ್ಟರು ವಿಶಿಷ್ಟವಾಗಿ ಕಥೆ ಹೆಣೆದಿದ್ದಾರೆ. ಸಿನಿಮಾದ ಪ್ರತೀ ತಿರುವುಗಳಲ್ಲೂ ನನ್ನ ಪಾತ್ರ ಮಹತ್ವ ವಹಿಸುತ್ತದೆ. ವಿಶೇಷ ಇಂದರೆ ಈ ಚಿತ್ರದಲ್ಲಿ ಗಂಡ್ಮಕ್ಕಳೇ ಅರೆಬಟ್ಟೆಯಲ್ಲಿದ್ದಾರೆ’ ಎಂದು ನಗುತ್ತಾರೆ.
‘ನನ್ನ ಪಾತ್ರಕ್ಕೆ ಎರಡು ಶೇಡ್ ಇದೆ. ಒಂದು ಕಡೆಯಲ್ಲಿ ಆಕೆ ತುಂಬಾ ತಮಾಷೆಯ ಹುಡುಗಿ. ಆ ಹಂತ ದಾಟಿದರೆ ಆಕೆ ಘನಗಂಭೀರೆ. ಅದೆಲ್ಲಕ್ಕೂ ಕಾರಣಗಳಿವೆ. ಆ ಕಾರಣಗಳು ಕತೆಯಲ್ಲಿ ಸಿಗುತ್ತದೆ’ ಎನ್ನುವ ಸೋನಲ್
ಅವರಿಗೆ ಭಟ್ಟರ ಮೇಲೆ ಅಪಾರ ಗೌರವ. ‘ಅವರೇ ನನ್ನ ಗಾಡ್‌ಫಾದರ್. ಅವರ ಪಂಚತಂತ್ರ ಸಿನಿಮಾದಿಂದಲೇ ನನಗೆ ಹೆಚ್ಚು ಹೆಚ್ಚು ಪಾತ್ರಗಳು ಸಿಕ್ಕವು’ ಎನ್ನುತ್ತಾರೆ.
ಯಶಸ್ ಸೂರ್ಯ ನಾಯಕನಾಗಿ ನಟಿಸಿರುವ ‘ಗರಡಿ’ ನ.10ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿ, ಜನಮೆಚ್ಚುಗೆ ಗಳಿಸಿವೆ.