ಕೊಟ್ಟಿದ್ದು ಒಂದೇ ಸೂಪರ್ ಹಿಟ್, 'ಸುಸ್ತಾಗಿ ಎದ್ದು ಹೋದ್ರಾ' ಕನ್ನಡ ನಟಿಯರಿವರು!

Published : Apr 08, 2024, 05:31 PM ISTUpdated : Apr 08, 2024, 06:12 PM IST

ಮೇಲ್ನೋಟಕ್ಕೆ ಸಿಗುವ ಕೆಲವು ಕಾರಣಗಳು ಎಂದರೆ, ಈ ನಟಿಯರು ಒಂದು ಸೂಪರ್ ಹಿಟ್ ಸಿನಿಮಾ ಬಳಿಕ ಸಿನಿಮಾ ಆಯ್ಕೆಯಲ್ಲಿ ಎಡವಿದ್ದಾರೆ ಎನ್ನಬಹುದೇನೋ! ಆದರೆ, ಬಂದಿದ್ದ ಆಫರ್‌ಗಳೇ ಹಾಗಿದ್ದರೆ ಮಾಡುವುದೇನು ಎಂಬ ಪ್ರಶ್ನೆಗೆ ಯಾರೂ ಉತ್ತರಿಸಲು ಅಸಾಧ್ಯ!

PREV
110
ಕೊಟ್ಟಿದ್ದು ಒಂದೇ ಸೂಪರ್ ಹಿಟ್, 'ಸುಸ್ತಾಗಿ ಎದ್ದು ಹೋದ್ರಾ' ಕನ್ನಡ ನಟಿಯರಿವರು!

ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ತಾರೆಗಳು ಮಿಂಚಿ ಮರೆಯಾಗಿದ್ದಾರೆ. ಹಲವರು 3-4 ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗವನ್ನು ಆಳಿಯೂ ಹೋಗಿದ್ದಾರೆ. ಕೆಲವರು ಹಲವು ವರ್ಷಗಳು ಸಕ್ರಿಯರಾಗಿದ್ದು, ಚಿತ್ರರಂಗದಲ್ಲಿ ಮರೆಯಲಾಗದ ಛಾಪನ್ನು ಒತ್ತಿ ಹೋಗಿದ್ದರೆ ಇನ್ನೂ ಸ್ವಲ್ಪ ಮಂದಿ ಕೇವಲ ಒಂದೇ ಸಿನಿಮಾಗೆ ಸುಸ್ತಾಗಿ ಎದ್ದು ಹೋಗಿದ್ದಾರೆ. 
 

210

ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ದರೂ, ಸಿನಿಮಾ ಸೂಪರ್ ಹಿಟ್ ಆಗಿದ್ದರೂ ಕೆಲವರು ಮುಂದೆ ಒಂದೆರಡು ಸಿನಿಮಾಗಳಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ನಟಿಸಿ ತೆರೆಮರೆಗೆ ಸರಿದಿದ್ದಾರೆ. 

310

ಒಂದೆರಡು ದಶಕಗಳಲ್ಲಿ ಸ್ಯಾಂಡಲ್‌ವುಡ್‌ನ ಒಂದು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಬಳಿಕ ಕೇವಲ ಒಂದೋ ಎರಡೋ ಸಿನಿಮಾಗಳಲ್ಲಿ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳದ ನಟಿಯರು ಇದ್ದಾರೆ. ಅಂಥವರ ಲಿಸ್ಟ್ ತೀರಾ ದೊಡ್ಡದು ಅಲ್ಲದಿದ್ದರೂ ತೀರಾ ಚಿಕ್ಕದೇನೂ ಅಲ್ಲ. 
 

410

ಹಳೆಯ ಕಾಲದ ಅಂದರೆ 60-70ರ ದಶಕದ ನಟಿಯರನ್ನು ಬಿಟ್ಟು ಕಳೆದ ಎರಡು ದಶಕಗಳಲ್ಲಿ ಮಿಂಚಿ ಮರೆಯಾದ ನಟಿಯರ ಲಿಸ್ಟ್ ನೋಡಿ. ಅವರು ಒಂದೇ ಸೂಪರ್ ಹಿಟ್ ಚಿತ್ರದಲ್ಲಿ ನಟಿಸಿ, ಬಳಿಕ ಸಿಕ್ಕ ಅವಕಾಶದಲ್ಲಿ ನಟಿಸಿ ಆಮೇಲೆ ಅಡ್ರೆಸ್‌ಗೇ ಇಲ್ಲ ಎಂಬಂತಾಗಿ ಹೋಗಿದ್ದಾರೆ. 

510

ಅಂಥ ಸಿನಿತಾರಯರು ಅಥವಾ ನಟಿಯರ ಸಾಲಿನಲ್ಲಿ ಹಲವರನ್ನು ಹೆಸರಿಸಬಹುದು. ಥಟ್ಟನೇ ನೆನಪಿಗೆ ಬರುವವರಲ್ಲಿ ಅಂಬಾರಿ ಚಿತ್ರದ ನಾಯಕಿ ಸುಪ್ರೀತಾ ಒಬ್ಬರು. ಲೂಸ್ ಮಾದ ಖ್ಯಾತಿಯ ನಟ ಯೋಗೇಶ್ ಅಭಿನಯದ 'ಅಂಬಾರಿ' ಚಿತ್ರದ ನಾಯಕಿಯಾಗಿದ್ದ ಸುಪ್ರೀತಾ ಬಳಿಕ ತೆರೆಮರೆಗೆ ಸರಿದರು. 

610

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಸಾರಥಿ' ಚಿತ್ರದಲ್ಲಿ ನಟಿಸಿದ್ದ ದೀಪಾ ಸನ್ನಿಧಿ ಕೂಡ ಬಳಿಕ ಒಂದೆರಡು ಸಿನಿಮಾಗಳಲ್ಲಿ ನಟಿಸಿ ಮರೆಯಾದರು. ಇನ್ನು, ಮಹಾರಾಜಾ ಚಿತ್ರದಲ್ಲಿ ನಟಿಸಿ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ್ದ ನಟಿ ನಿಖಿತಾ ತುಕ್ರಾಲ್‌ ಕೂಡ ಬಳಿಕ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರಾದರೂ ಮತ್ತೆ ಟ್ರಾಕ್‌ಗೆ ಬರಲಿಲ್ಲ. 

710

ಬಿರುಗಾಳಿ ಚಿತ್ರದಲ್ಲಿ ನಟ ಚೇತನ್ ಅಹಿಂಸಾ ಜತೆ ತೆರೆ ಹಂಚಿಕೊಂಡಿದ್ದ ಸಿತಾರಾ ವೈದ್ಯ ಮತ್ತೆ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆಯೇ ಎಂಬುದನ್ನು ಗೂಗಲ್ ಸರ್ಚ್ ಮಾಡಬೇಕಷ್ಟೇ. ಅದೇ ದಾರಿಯಲ್ಲಿ ಸಾಗಿರುವ ಚಿಂಗಾರಿ ಚಿತ್ರದ ನಟಿ ದೀಪಿಕಾ ಕಾಮಯ್ಯ, ರಾಂಬೋ ಚಿತ್ರದ ಮಾಧುರಿ ಇಟಗಿ ಹಾಗೂ ಪಂಚರಂಗಿ ಚಿತ್ರದ ರಮ್ಯಾ ಬಾರ್ನಾ ಕೂಡ ಅದೇ ಲಿಸ್ಟ್ ಸೇರಿಕೊಳ್ಳುತ್ತಾರೆ. 

810

ಹಾಗಿದ್ದರೆ, ಈ ಕೆಲವೇ ಕೆಲವು ನಟಿಯರಿಗೆ ಹೀಗಾಗಲು ಕಾರಣವೇನು ಎಂದು ಕಾರಣಗಳನ್ನು ಬೆನ್ನಟ್ಟಿ ಹೊರಟರೆ, ಉತ್ತರ ಸಿಗುವುದು ಸ್ವಲ್ಪ ಕಷ್ಟವೇ ಆಗುತ್ತದೆ. ಏಕೆಂದರೆ, ಕೆಲವು ಕಾರಣಗಳನ್ನು ಊಹಿಸಲೂ ಕಷ್ಟ. ಕೆಲವನ್ನು ಹೇಳಲು ಅಸಾಧ್ಯ, ಹಲವು ಕಾರಣಗಳು ವೈಯಕ್ತಿಕವಾಗಿದ್ದರೆ ಇನ್ನೂ ಕೆಲವು ವೃತ್ತಿಜೀವನದಲ್ಲಿ ಇವೆಲ್ಲಾ ಸಹಜ ಎಂಬ ಉತ್ತರಕ್ಕೆ ಸರಿಹೊಂದುತ್ತವೆ. 

910

ಆದರೆ, ಮೇಲ್ನೋಟಕ್ಕೆ ಸಿಗುವ ಕೆಲವು ಕಾರಣಗಳು ಎಂದರೆ, ಈ ನಟಿಯರು ಒಂದು ಸೂಪರ್ ಹಿಟ್ ಸಿನಿಮಾ ಬಳಿಕ ಸಿನಿಮಾ ಆಯ್ಕೆಯಲ್ಲಿ ಎಡವಿದ್ದಾರೆ ಎನ್ನಬಹುದೇನೋ! ಆದರೆ, ಬಂದಿದ್ದ ಆಫರ್‌ಗಳೇ ಹಾಗಿದ್ದರೆ ಮಾಡುವುದೇನು ಎಂಬ ಪ್ರಶ್ನೆಗೆ ಯಾರೂ ಉತ್ತರಿಸಲು ಅಸಾಧ್ಯ!
 

1010

ಮಹಾರಾಜಾ ಚಿತ್ರದಲ್ಲಿ ನಟಿಸಿ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ್ದ ನಟಿ ನಿಖಿತಾ ತುಕ್ರಾಲ್‌ ಕೂಡ ಬಳಿಕ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರಾದರೂ ಮತ್ತೆ ಟ್ರಾಕ್‌ಗೆ ಬರಲಿಲ್ಲ. ಕೆಲವನ್ನು ಹೇಳಲು ಅಸಾಧ್ಯ, ಹಲವು ಕಾರಣಗಳು ವೈಯಕ್ತಿಕವಾಗಿದ್ದರೆ ಇನ್ನೂ ಕೆಲವು ವೃತ್ತಿಜೀವನದಲ್ಲಿ ಇವೆಲ್ಲಾ ಸಹಜ ಎಂಬ ಉತ್ತರಕ್ಕೆ ಸರಿಹೊಂದುತ್ತವೆ. 
 

click me!

Recommended Stories