ರಶ್ಮಿಕಾ ಮಂದಣ್ಣ ಬಳಿ ಇರೋ 5 ಅತಿ ದುಬಾರಿ ಆಸ್ತಿಗಳಿವು...

First Published Apr 8, 2024, 3:03 PM IST

28 ವರ್ಷದ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ನಟಿಯಾಗಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಇವರ ಬಳಿ ಇರೋ 5 ಅತಿ ದುಬಾರಿ ವಸ್ತುಗಳ ಪಟ್ಟಿ ಇಲ್ಲಿದೆ..

ನಟಿ ರಶ್ಮಿಕಾ ಮಂದಣ್ಣ ಕೊನೆಯದಾಗಿ ರಣಬೀರ್ ಕಪೂರ್ ಜೊತೆ ಅನಿಮಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ವರ್ಷದ ಆರಂಭದಲ್ಲಿ ಫೋರ್ಬ್ಸ್ 30 ಅಂಡರ್ 30 ಪಟ್ಟಿಯಲ್ಲಿ ಹೆಸರು ಗಿಟ್ಟಿಸಿದ ನಟಿ ಅವರಾಗಿದ್ದಾರೆ.

ಸದ್ಯದ ಅತಿ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ನಟಿ ರಶ್ಮಿಕಾ ಮಂದಣ್ಣ, ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ,  45 ಕೋಟಿ ರೂಪಾಯಿಗಳ ಪ್ರಭಾವಶಾಲಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. 

ಪುಷ್ಪಾ, ಎನಿಮಲ್, ಗುಡ್‌ಬೈ, ಕಿರಿಕ್ ಪಾರ್ಟಿ ಸೇರಿದಂತೆ ಹಲವಾರು ಜನಪ್ರಿಯ ಚಿತ್ರಗಳಲ್ಲಿ ನಟಿಸಿರುವ, 28 ವರ್ಷದ ನಟಿಯ ಬಳಿ ಅದ್ದೂರಿ ಮನೆಗಳು, ದುಬಾರಿ ಕಾರುಗಳು ಮತ್ತು ಹೆಚ್ಚಿನವುಗಳಿವೆ.. ಹಾಗಿದ್ದರೆ, ರಶ್ಮಿಕಾ ಬಳಿ ಇರೋ ಅತಿ ದುಬಾರಿ ವಸ್ತುಗಳು ಯಾವೆಲ್ಲ ನೋಡೋಣ.

ಬೆಂಗಳೂರಿನಲ್ಲಿ ಅದ್ದೂರಿ ಬಂಗಲೆ
ತೆಲುಗು, ಕನ್ನಡ ಮತ್ತು ಹಿಂದಿ ಉದ್ಯಮಗಳಲ್ಲಿ ಪ್ರಮುಖ ಹೆಸರಾಗಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಪ್ರಭಾವಶಾಲಿ ರಿಯಲ್ ಎಸ್ಟೇಟ್ ಬಂಡವಾಳವನ್ನು ಹೊಂದಿದ್ದಾರೆ. ಅವರು ಬೆಂಗಳೂರಿನಲ್ಲಿ 8 ಕೋಟಿ ರೂಪಾಯಿ ಮೌಲ್ಯದ ಅದ್ದೂರಿ ಬಂಗಲೆಯನ್ನು ಹೊಂದಿದ್ದಾರೆ.

ವಿಶಾಲವಾದ ಮನೆಯು ಬೃಹತ್ ಉದ್ಯಾನ ಪ್ರದೇಶವನ್ನು ಹೊಂದಿದೆ. ಜೊತೆಗೆ, ಸುಂದರವಾಗಿ ಕೆತ್ತಿದ ಮರದ ಪೀಠೋಪಕರಣಗಳೊಂದಿಗೆ ಬಹಳ ಲಕ್ಷುರಿ ಲುಕ್ ಹೊಂದಿದೆ.
 

ಗೋವಾ, ಹೈದರಾಬಾದ್, ಮತ್ತು ಕೂರ್ಗ್‌ನಲ್ಲಿ ಐಷಾರಾಮಿ ಮನೆಗಳು
ರಶ್ಮಿಕಾ ಮಂದಣ್ಣ ಅವರು ಬೆಂಗಳೂರಿನ ತಮ್ಮ ಮನೆಯ ಹೊರತಾಗಿ ಕೂರ್ಗ್ ಮತ್ತು ಹೈದರಾಬಾದ್‌ನಲ್ಲಿ ಐಷಾರಾಮಿ ಮತ್ತು ಸುಂದರವಾದ ಆಸ್ತಿಗಳನ್ನು ಹೊಂದಿದ್ದಾರೆ.
 

ಕೆಲವು ವರ್ಷಗಳ ಹಿಂದೆ, ಅವರು ಭಾರತದ ಜನಪ್ರಿಯ ವಿಹಾರ ತಾಣವಾದ ಗೋವಾದಲ್ಲಿ ಬಂಗಲೆಯನ್ನು ಖರೀದಿಸುವ ಮೂಲಕ ತಮ್ಮ ಆಸ್ತಿ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಿದ್ದಾರೆ.

ಮುಂಬೈನಲ್ಲಿ ಅಪಾರ್ಟ್ಮೆಂಟ್
ರಶ್ಮಿಕಾ ಮಂದಣ್ಣ ಅಮಿತಾಭ್ ಬಚ್ಚನ್ ಜೊತೆಗೆ ಗುಡ್ ಬೈ (2022) ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆ ಬಳಿಕ ಹಿಂದಿ ಚಿತ್ರೋದ್ಯಮದಲ್ಲಿ ತಮಗಿರುವ ಬೇಡಿಕೆ ಕಂಡುಕೊಂಡು ಮುಂಬೈನಲ್ಲೂ ಮನೆ ಖರೀದಿಸಿದ್ದಾರೆ. 

2021ರಲ್ಲಿ ರಶ್ಮಿಕಾ ಮುಂಬೈನಲ್ಲಿ ಅಪಾರ್ಟ್‌ಮೆಂಟ್ ಖರೀದಿಸಿದ್ದು, ತನಗೆ ಈ ನಗರ, ಹವಾಮಾನ ಎಲ್ಲವೂ ಇಷ್ಟವಾಗಿದೆ. ಇಲ್ಲಿ ಹೊಸ ಜನರೊಂದಿಗೆ ಸ್ನೇಹ ಬೆಳೆಸಿದ್ದೇನೆ ಎಂದಿದ್ದಾರೆ. 

ಐಶಾರಾಮಿ ಕಾರ್‌ಗಳು
ತನ್ನ ವ್ಯಾಪಕವಾದ ರಿಯಲ್ ಎಸ್ಟೇಟ್ ಹೂಡಿಕೆಯ ಜೊತೆಗೆ, ರಶ್ಮಿಕಾ ಮಂದಣ್ಣ ಆಟೋಮೊಬೈಲ್‌ಗಳಲ್ಲಿಯೂ ಹೂಡಿಕೆ ಮಾಡಿದ್ದಾರೆ. ಅವರು ರೇಂಜ್ ರೋವರ್ ಸ್ಪೋರ್ಟ್ ಅನ್ನು ಹೊಂದಿದ್ದಾರೆ, ಇದರ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ 1.84 ಕೋಟಿ ರೂ.

ಇತರ ದುಬಾರಿ ಸವಾರಿಗಳು
ತನ್ನ ರೇಂಜ್ ರೋವರ್ ಜೊತೆಗೆ, ಮಂದಣ್ಣ ಸುಮಾರು 40 ಲಕ್ಷ ರೂ. ಮೌಲ್ಯದ ಆಡಿ ಕ್ಯೂ3 ಅನ್ನು ಸಹ ಹೊಂದಿದ್ದಾರೆ. 50 ಲಕ್ಷ ರೂ. ಬೆಲೆಯ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್, ಟೊಯೊಟಾ ಇನ್ನೋವಾ ಮತ್ತು ಹ್ಯುಂಡೈ ಕ್ರೆಟಾವನ್ನು ಹೊಂದಿದ್ದಾರೆ. 

click me!