ಫ್ಯಾಷನ್ ಡಿಸೈನರ್‌ ಕೈಹಿಡಿದ ಸ್ಯಾಂಡಲ್‌ವುಡ್‌ ನಟ ಶಿಷ್ಯ ದೀಪಕ್!

Published : Nov 25, 2023, 02:04 PM IST

ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ಅನೇಕ ನಟ-ನಟಿಯರು ಹಸೆಮಣೆ ಏರಿದ್ದಾರೆ. ಈ ಸಾಲಿಗೆ ಈಗ ಶಿಷ್ಯ ಖ್ಯಾತಿಯ ನಟ ದೀಪಕ್ ಗೌಡ ಸೇರ್ಪಡೆಯಾಗಿದ್ದಾರೆ. ಅವರ ವಿವಾಹದ ಫೋಟೋಗಳು ಇಲ್ಲಿವೆ.  

PREV
18
ಫ್ಯಾಷನ್ ಡಿಸೈನರ್‌ ಕೈಹಿಡಿದ ಸ್ಯಾಂಡಲ್‌ವುಡ್‌ ನಟ  ಶಿಷ್ಯ ದೀಪಕ್!

 'ಶಿಷ್ಯ' ಖ್ಯಾತಿಯ ನಟ ದೀಪಕ್ ಗೌಡ ಅವರು ಹಸೆಮಣೆ ಏರಿದ್ದಾರೆ. ಬೆಂಗಳೂರು ಮೂಲದ ಫ್ಯಾಷನ್ ಡಿಸೈನರ್‌ ಬೃಂದಾ ಗೌಡ ಅವರನ್ನು ಕೈಹಿಡಿದಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ವೈರಲ್‌ ಆಗಿದೆ.

28

ಅರೇಂಜ್ಡ್ ಮ್ಯಾರೇಜ್ ಆಗಿದ್ದು, ಕುಟುಂಬಸ್ಥರು ನೋಡಿರುವ ಹುಡುಗಿ  ಬೃಂದಾ ಗೌಡ ಅವರನ್ನು ಹಿರಿಯರ ಸಮ್ಮುಖದಲ್ಲೊ ದೀಪಕ್ ಕೈಹಿಡಿದಿದ್ದಾರೆ. 

38

ಅದ್ಧೂರಿಯಾಗಿ ಮದುವೆಯಾಗಿದ್ದು,  ಸಂಪ್ರದಾಯಬದ್ಧವಾಗಿ, ಎಲ್ಲರ ಸಮ್ಮುಖದಲ್ಲಿ ಬೃಂದಾ ಅವರನ್ನು ದೀಪಕ್ ಪತ್ನಿಯಾಗಿ ಸ್ವೀಕರಿಸಿದ್ದಾರೆ.

48

ದೀಪಕ್-ಬೃಂದಾ ಮದುವೆ ಆರತಕ್ಷತೆಗೆ ಹೆಚ್.ಡಿ ಕುಮಾರಸ್ವಾಮಿ, ಪ್ರಜ್ವಲ್ ದೇವರಾಜ್ ಸೇರಿದಂತೆ ಅನೇಕ ಗಣ್ಯರು ಆಪ್ತರು ಆಗಮಿಸಿ ನೂತನ ಜೋಡಿಗೆ ಶುಭ ಹಾರೈಸಿದರು.
 

58

'ಬೆಳ್ಳಿ' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಜೊತೆ ಶಿವಣ್ಣ ಅವರ ಗೆಳೆಯನಾಗಿ ಅಭಿನಯಿಸಿದ್ದ ನಟ ದೀಪಕ್ ಅವರು ಸ್ವಲ್ಪ ಸಮಯ ಚಿತ್ರರಂಗದಿಂದ ದೂರ ಇದ್ದರು.
 

68

ಹಲವು ವರ್ಷಗಳ ಬಳಿಕ ಚಿತ್ರರಂಗದಿಂದ ದೂರ ಇದ್ದ ಬಳಿಕ ಮತ್ತೆ ವಿಲನ್ ಪಾತ್ರದಲ್ಲಿ ಬಣ್ಣ ಹಚ್ಚುವ ಮೂಲಕ ಬಣ್ಣದ ಬದುಕಿಗೆ ರೀ ಎಂಟ್ರಿ ಕೊಟ್ಟಿದ್ದರು.

78

ಮಾಗಡಿ ,  ಬೆಳ್ಳಿ ,  18th ಕ್ರಾಸ್ ,  ಏಕ್‌ ಲವ್ ಯಾ ,  ವೀರಂ  ಮುಂತಾದ ಚಿತ್ರಗಳಲ್ಲಿ ಮಿಂಚಿರುವ ನಟ ದೀಪಕ್‌ ಟಾಲಿವುಡ್‌ ಹಾಗೂ ಮಾಲಿವುಡ್‌ಗೂ ಕಾಲಿಟ್ಟಿದ್ದಾರೆ. ತೆಲುಗಿನಲ್ಲಿ ಎರಡು ಹಾಗೂ ಮಲಯಾಳಂನಲ್ಲಿ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ.

88

ನಿರ್ಮಾಪಕ ಭಾ.ಮ. ಹರೀಶ್‌ ಅವರ ಸಂಬಂಧಿಯಾಗಿರುವ ದೀಪಕ್‌ ಶಿಷ್ಯ ಚಿತ್ರದ ಹೀರೋ ಆದ ಬಳಿಕ   ಶಿಷ್ಯ ದೀಪಕ್‌ ಎಂದೇ ಹೆಸರು ಬಂತು. ಚಿತ್ರರಂಗದಲ್ಲಿ 18 ವರ್ಷಗಳಿಂದಲೂ ಹೆಚ್ಚಿನ ಅನುಭವ ಇವರಿಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories