ಪುನೀತ್ ರಾಜಕುಮಾರ್ ಸಿನಿಮಾಗೆ ಹಾಡು ಹಾಡಿದ್ದ ತಮಿಳು ನಟಿ ಶ್ರುತಿ ಹಾಸನ್…. ಯಾವ ಹಾಡು ನೆನಪಿದ್ಯಾ?

Published : Nov 10, 2024, 02:03 PM ISTUpdated : Nov 10, 2024, 02:52 PM IST

ಗಾಯಕಿ ಹಾಗೂ ನಾಯಕ ನಟಿಯಾಗಿ ಗುರುತಿಸಿಕೊಂಡಿರುವ ಶ್ರುತಿ ಹಾಸನ್ ಕನ್ನಡ ಸಿನಿಮಾದಲ್ಲೂ ಹಾಡು ಹಾಡಿದ್ದಾರೆ, ಅದು ಪುನೀತ್ ರಾಜಕುಮಾರ್ ಸಿನಿಮಾಗೆ ಆ ಹಾಡು ಯಾವುದು ಗೊತ್ತಾ?   

PREV
17
ಪುನೀತ್ ರಾಜಕುಮಾರ್ ಸಿನಿಮಾಗೆ ಹಾಡು ಹಾಡಿದ್ದ ತಮಿಳು ನಟಿ ಶ್ರುತಿ ಹಾಸನ್…. ಯಾವ ಹಾಡು ನೆನಪಿದ್ಯಾ?

ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ (Shruthi Haasan) ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಗಾಯಕಿ ಮತ್ತು ನಾಯಕಿಯಾಗಿ ಗುರುತಿಸಿಕೊಂಡ ಜನಪ್ರಿಯ ನಟಿ. ಇವರು ಸಾಕಷ್ಟು ಹಿಟ್ ಸಿನಿಮಾಗಳನ್ನೂ ಕೂಡ ನೀಡಿದ್ದಾರೆ. 
 

27

ಹೇ ರಾಮ್ ಸಿನಿಮಾದಲ್ಲಿ ಬಾಲ ನಟಿಯಾಗಿ ಎಂಟ್ರಿ ಕೊಟ್ಟ ಶ್ರುತಿ ಹಾಸನ್ ಇಲ್ಲಿವರೆ ಸುಮಾರು 40 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿಯ ಕೈಯಲ್ಲಿ 4-5 ಸಿನಿಮಾಗಳು ಸಹ ಇವೆ. 
 

37

ಶ್ರುತಿ ಹಾಸನ್ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ ನಿಜಾ, ಆದರೆ ಕನ್ನಡ ಸಿನಿಮಾದಲ್ಲಿ (sung for Kannada Movie) ಒಂದು ಹಾಡು ಹೇಳಿದ್ದಾರೆ ಅನ್ನೋದು ನಿಮಗೆ ಗೊತ್ತಾ? ಅದು ಕೂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾಗೆ. 
 

47

ಹೌದು, ಶ್ರುತಿ ಹಾಸನ್ ಅವರು ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ (Puneeth Rajakumar) ಮತ್ತು ಪಾರ್ವತಿ ಮೆನನ್ ಅಭಿನಯದ ಪೃಥ್ವಿ ಸಿನಿಮಾದ ನೆನಪಿದು ನೆನಪಿದು ಕನಸಲು ಮರೆಯದ ನೆನಪಿದು ಎನ್ನುವ ಹಾಡನ್ನು ಕಾರ್ತಿಕ್ ಜೊತೆ ಶ್ರುತಿ ಹಾಸನ್ ಹಾಡಿದ್ದಾರೆ. 
 

57

2010ರಲ್ಲಿ ಬಿಡುಗಡೆಯಾದ ಪುನೀತ್ ರಾಜಕುಮಾರ್ ಡಿಸಿ ಪಾತ್ರದಲ್ಲಿ ನಟಿಸಿದ ಈ ಸಿನಿಮಾ ಹಾಗೂ ಸಿನಿಮಾ ಹಾಡುಗಳು ಸಾಕಷ್ಟು ಹಿಟ್ ಆಗಿದ್ದವು. ಅದರಲ್ಲೂ ನೆನಪಿದು ನೆನಪಿದು ಹಾಡು ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿತ್ತು. ಈ ಹಾಡನ್ನು ತಮ್ಮ ಮಾದಕ ದನಿಯಲ್ಲಿ ಹಾಡಿ ರಂಜಿಸಿದವರು ಶ್ರುತಿ ಹಾಸನ್. 
 

67

ಅದಾದ ನಂತ್ರ ಶ್ರುತಿ ಹಾಸನ್ ಕನ್ನಡದ ಬೇರೆ ಯಾವ ಹಾಡುಗಳನ್ನೂ ಕೂಡ ಹಾಡಿಲ್ಲ. ಆದರೆ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಸಾಕಷ್ಟು ಸುಮಾರು 40 ಹಾಡುಗಳನ್ನು ಹಾಡಿದ್ದಾರೆ. ಇವರ ಡಿಫರೆಂಡ್ ವಾಯ್ಸ್ ಜನರಿಗೆ ತುಂಬಾನೆ ಇಷ್ಟವಾಗುತ್ತೆ. 
 

77

ಇನ್ನು ಸಿನಿಮಾಗಳ ವಿಷ್ಯಕ್ಕೆ ಬಂದ್ರೆ ಡಕಾಯಿತ್ - ಎ ಲವ್ ಸ್ಟೋರಿ, ಕೂಲಿ , ಸಲಾರ್ ಪಾರ್ಟ್ 2, ಚೆನ್ನೈ ಸ್ಟೋರಿ ಸಿನಿಮಾಗಳಲ್ಲಿ ಶ್ರುತಿ ಹಾಸ ನಟಿಸುತ್ತಿದ್ದಾರೆ. ಇವರು ಕೊನೆಯದಾಗಿ ಸಲಾರ್ ಸಿನಿಮಾದಲ್ಲಿ ನಟಿಸಿದ್ದರು. 
 

Read more Photos on
click me!

Recommended Stories