ಶಿವಣ್ಣ, ಉಪೇಂದ್ರ '45' ಸಿನಿಮಾ ಆ.15ರಂದು ಬಿಡುಗಡೆ ಆಗಲ್ಲ: ಇಲ್ಲಿದೆ ಕಾರಣ?

Published : Jul 10, 2025, 05:34 PM IST

ಈಗಾಗಲೇ ಆ ಎರಡು ಚಿತ್ರತಂಡಗಳ ಮಧ್ಯೆ ಥಿಯೇಟರ್‌ ಫೈಟಿಂಗ್‌ ನಡೆಯುತ್ತಿದೆ. 45 ಕೂಡ ಪ್ಯಾನ್‌ ಇಂಡಿಯಾ ಸಿನಿಮಾ ಆಗಿರುವುದರಿಂದ ಈ ಚಿತ್ರಕ್ಕೂ ಬೇರೆ ಕಡೆಗಳಲ್ಲಿ ಸೂಕ್ತ ಚಿತ್ರಮಂದಿರಗಳು ದೊರಕುವುದು ಅವಶ್ಯವಾಗಿದೆ.

PREV
15

ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್‌ ಬಿ ಶೆಟ್ಟಿ ನಟನೆಯ ‘45’ ಚಿತ್ರ ಆ.15ರಂದು ಬಿಡುಗಡೆಯಾಗುವುದಾಗಿ ಈ ಹಿಂದೆ ಘೋಷಣೆ ಆಗಿತ್ತು. ಆದರೆ ಇದೀಗ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿಕೊಂಡಿದೆ.

25

ಆ.14ರಂದು ರಜನಿಕಾಂತ್‌, ಉಪೇಂದ್ರ, ಅಮೀರ್‌ ಖಾನ್‌ ನಟಿಸಿರುವ, ಲೋಕೇಶ್‌ ಕನಗರಾಜ್‌ ನಿರ್ದೇಶನದ ‘ಕೂಲಿ’ ಮತ್ತು ಹೃತಿಕ್ ರೋಷನ್‌, ಜೂ. ಎನ್‌ಟಿಆರ್‌ ನಟಿಸಿರುವ ‘ವಾರ್‌ 2’ ಸಿನಿಮಾ ಬಿಡುಗಡೆಯಾಗುತ್ತಿದೆ.

35

ಈಗಾಗಲೇ ಆ ಎರಡು ಚಿತ್ರತಂಡಗಳ ಮಧ್ಯೆ ಥಿಯೇಟರ್‌ ಫೈಟಿಂಗ್‌ ನಡೆಯುತ್ತಿದೆ. 45 ಕೂಡ ಪ್ಯಾನ್‌ ಇಂಡಿಯಾ ಸಿನಿಮಾ ಆಗಿರುವುದರಿಂದ ಈ ಚಿತ್ರಕ್ಕೂ ಬೇರೆ ಕಡೆಗಳಲ್ಲಿ ಸೂಕ್ತ ಚಿತ್ರಮಂದಿರಗಳು ದೊರಕುವುದು ಅವಶ್ಯವಾಗಿದೆ. ಹೀಗಾಗಿ ಚಿತ್ರತಂಡ ಸಮಯೋಚಿತ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

45

ಜೊತೆಗೆ ಕೆನಡಾದಲ್ಲಿ ಚಿತ್ರಕ್ಕೆ ಸತತವಾಗಿ ಸಿಜಿ ವರ್ಕ್‌ ಕೂಡ ನಡೆಯುತ್ತಿದೆ. ಈ ಕುರಿತು ಮಾತನಾಡಿರುವ ನಿರ್ಮಾಪಕ ರಮೇಶ್‌ ರೆಡ್ಡಿ ನಂಗ್ಲಿ ಅವರು, ಕೆನಡಾ ದೇಶದಲ್ಲಿ ಚಿತ್ರಕ್ಕೆ ಸತತವಾಗಿ ಸಿಜಿ ವರ್ಕ್‌ ನಡೆಯುತ್ತಿದೆ.

55

ತಾಂತ್ರಿಕ ಕೆಲಸಗಳು ಹೆಚ್ಚು ಇರುವುದರಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಇನ್ನೊಂದು ವಾರದಲ್ಲಿ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಲಾಗುವುದು ಎಂದಿದ್ದಾರೆ.ಅರ್ಜುನ್ ಜನ್ಯ ನಿರ್ದೇಶನದ ಚಿತ್ರವಿದು.

Read more Photos on
click me!

Recommended Stories