ಕನ್ನಡಪ್ರಭ ಸಿನಿವಾರ್ತೆ ನಂದಕಿಶೋರ್ ನಿರ್ದೇಶನದ, ಶಿವಣ್ಣ ನಟನೆಯ ಚಿತ್ರದಲ್ಲಿ ನಿಖಿಲ್ ಕುಮಾರ್ ಕೂಡ ನಟಿಸಲಿದ್ದಾರೆ. ಗೌತಮ್ ರೆಡ್ಡಿ ನಿರ್ಮಿಸುತ್ತಿರುವ ಅದ್ದೂರಿ ಬಜೆಟ್‌ನ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆಗೆ ನಿಖಿಲ್ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿಖಿಲ್ ಜೊತೆಗೆ ಮಾತುಕತೆ ಯಶಸ್ವಿಯಾಗಿದ್ದು, ಈ ಹೊಸ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇಬ್ಬರ ಕಾಂಬಿನೇಶನ್‌ನ ಹೊಸ ಚಿತ್ರಕ್ಕೆ ಪ್ರಿಯದರ್ಶಿನಿ ರಾಮ್ ಅವರ ಕಥೆ ಇದೆ.