ಬಾಲಿವುಡ್ ಸ್ಟಾರ್ ನಟ ರಣದೀಪ್ ಹೂಡ ಜೊತೆ ಶೈನ್ ಶೆಟ್ಟಿ… ಹಿಂದಿ ಸಿನಿಮಾದಲ್ಲಿ ನಟಿಸ್ತಿದ್ದಾರ ಶೈನ್?

First Published | Sep 24, 2024, 3:15 PM IST

ಬಿಗ್ ಬಾಸ್ ಸೀಸನ್ 7ರ ವಿನ್ನರ್ ಶೈನ್ ಶೆಟ್ಟಿ ಬಾಲಿವುಡ್ ಸೂಪರ್ ಸ್ಟಾರ್ ರಣದೀಪ್ ಹೂಡಾ ಜೊತೆ ಕಾಣಿಸಿಕೊಂಡಿದ್ದು, ಇಬ್ಬರು ಜೊತೆಯಾಗಿರುವ ಫೋಟೊ ಇಂಟರ್ನೆಟ್ಟಲ್ಲಿ ಹಲ್ ಚಲ್ ಸೃಷ್ಟಿಸುತ್ತಿದೆ. 
 

ಮೀರಾ ಮಾಧವ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಶೈನ್ ಶೆಟ್ಟಿ (Shine Shetty), ಬಳಿಕ ಒಂದು ತುಳು ಸಿನಿಮಾ ಸೇರಿ, ಹಲವು ಕನ್ನಡ ಸಿನಿಮಾಗಳಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡಿದ್ದರು. ಆದರೆ ಇವರಿಗೆ ಜನಪ್ರಿಯತೆ ತಂದುಕೊಟ್ಟಿದ್ದು ಬಿಗ್ ಬಾಸ್. 
 

ಬಿಗ್ ಬಾಸ್ ಸೀಸನ್ 7ರ (Bigg Boss Season 7) ಸ್ಪರ್ಧಿಯಾಗಿದ್ದ ಶೈನ್ ಶೆಟ್ಟಿ, ತಮ್ಮ ಮೋಜು, ಮಸ್ತಿ, ಎಂಟರ್’ಟೇನ್ಮೆಂಟ್ ಜೊತೆಗೆ ಟಫ್ ಸ್ಪರ್ಧೆ ನೀಡುವ ಮೂಲಕ ಸೀಸನ್ 7ರ ವಿನ್ನರ್ ಕೂಡ ಆಗಿದ್ದರು ಶೈನ್ ಶೆಟ್ಟಿ. ಇವತ್ತಿಗೂ ಜನ ಬೆಸ್ಟ್ ಸೀಸನ್ ಅಂತ ಹೇಳೋದೆ ಬಿಬಿಕೆ 7ನ್ನು. ಅದಕ್ಕೆ ಕಾರಣ ಶೈನ್ ಶೆಟ್ಟಿ ಸೇರಿ ಎಲ್ಲಾ ಕಂಟೆಸ್ಟಂಟ್ ಗಳ ನಡುವೆ ಇದ್ದ ಬಾಂಡಿಂಗ್ ಅಂದ್ರೆ ತಪ್ಪಾಗಲ್ಲ. 
 

Tap to resize

ಶೈನ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಕಾಂತಾರ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರೂ ಸಹ ಅದೊಂದು ಗಟ್ಟಿ ಪಾತ್ರವಾಗಿದ್ದು, ಜನರು ನೆನಪಿಟ್ಟುಕೊಳ್ಳುವಂತಹ ಪಾತ್ರ ಅದಾಗಿದ್ದು, ಅದಾದ ನಂತ್ರ ಮಾಫಿಯಾ, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಬ್ಯಾಚುಲರ್ ಪಾರ್ಟಿ ಸಿನಿಮಾಗಳಲ್ಲೂ ನಟಿಸಿದ್ದರು. 
 

ಇದೀಗ ಮೊದಲ ಬಾರಿಗೆ ಜಸ್ಟ್ ಮ್ಯಾರೀಡ್  (Just Married) ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಶೈನ್ ಗೆ ಅಂಕಿತಾ ಅಮರ್ ನಾಯಕಿಯಾಗಿದ್ದಾರೆ. ಇದಲ್ಲದೇ ನಿದ್ರಾದೇವಿ ನೆಕ್ಸ್ಟ್ ಡೋರ್, ಮರ್ಯಾದೆ ಪ್ರಶ್ನೆ ಸಿನಿಮಾಗಳಲ್ಲೂ ಶೈನ್ ನಟಿಸುತ್ತಿದ್ದಾರೆ. ಆದರೆ ಇವರ ಸೋಶಿಯಲ್ ಮೀಡಿಯಾ ಖಾತೆ ನೋಡಿದ್ರೆ ಇಲ್ಲಿ ಬೇರೆನೋ ನಡಿತಿದೆ ಅನಿಸುತ್ತಿದೆ. 
 

ಕಳೆದ ಕೆಲವು ದಿನಗಳಿಂದ ಶೈನ್ ಶೆಟ್ಟಿ ಹಿಮಾಲಯ ಪ್ರವಾಸದಲ್ಲಿದ್ದು, ಅಲ್ಲಿನ ಸುಂದರ ತಾಣಗಳಲ್ಲಿ ಫೋಟೊ ತೆಗೆಸಿಕೊಂಡು ಅಪ್ ಲೋಡ್ ಮಾಡುತ್ತಿದ್ದರು. ಇದೀಗ ಬಾಲಿವುಡ್ ಸೂಪರ್ ಸ್ಟಾರ್ ವೀರ ಸಾವರ್ಕರ್, ಸರಬ್ಜೀತ್ ಸಿನಿಮಾ ಮೂಲಕ ಅದ್ಭುತ ಅಭಿನಯ ನೀಡಿದ ನಟ ರಣದೀಪ್ ಹೂಡ  (Randeep Hooda) ಜೊತೆಗೆ ಫೋಟೊ ಶೇರ್ ಮಾಡಿಕೊಂಡಿದ್ದು, ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. 
 

ತಿಲಾರಿ ಡ್ಯಾಮ್ (Talari Dam) ಬಳಿ ರಣದೀಪ್ ಮತ್ತು ಶೈನ್ ಶೆಟ್ಟಿ ಜೊತೆಯಾಗಿ ಕಾಣಿಸಿಕೊಂಡಿದ್ದು, ಪ್ರಕೃತಿಯ ಮಧ್ಯದಲ್ಲಿ ಇಬ್ಬರು ಜೊತೆಯಾಗಿ ನಿಂತುಕೊಂಡು, ಎಂಜಾಯ್ ಮಾಡ್ತಿರೋ ಫೋಟೊ ಇದಾಗಿದೆ. ಇದಕ್ಕೆ ಶೈನ್ ಕ್ಯಾಪ್ಶನ್ ಕೂಡ ಕೊಟ್ಟಿದ್ದು, ಉತ್ತರ ಆದ್ರೇನೂ, ದಕ್ಷಿಣ ಆದ್ರೇನೂ, ನಾವು ಇಂಕ್ರೆಡಿಬಲ್ ಭಾರತದ ಅದ್ಭುತ ಪ್ರಜೆಗಳು ಎಂದು ಬರೆದುಕೊಂಡಿದ್ದಾರೆ. 
 

ಬಾಲಿವುಡ್ ಸೂಪರ್ ಸ್ಟಾರ್ (Bollywood star actor) ನಟನ ಜೊತೆಗೆ ಶೈನ್ ಶೆಟ್ಟಿ ಫೊಟೊ ನೋಡಿ ಅಭಿಮಾನಿಗಳು ಇಬ್ಬರು ಜೊತೆಯಾಗಿ ಸಿನಿಮಾ ಮಾಡ್ತಿದ್ದೀರಾ? ಶೈನ್ ನೀವು ಬಾಲಿವುಡ್ ಗೆ ಎಂಟ್ರಿ ಕೊಡ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ ದಿಗ್ಗಜ ನಟನ ಜೊತೆಗೆ ಅದ್ಭುತ ವ್ಯಕ್ತಿತ್ವ.. ಇಬ್ಬರನ್ನು ಜೊತೆಯಾಗಿ ನೋಡಿ ತುಂಬಾನೆ ಖುಷಿಯಾಯ್ತು ಅಂತಾನೂ ಹೇಳಿದ್ದಾರೆ. ಫೋಟೊ ನೋಡಿದ್ರೆ, ಶೈನ್ ಶೆಟ್ಟಿ ತಮ್ಮ ರಂಗಸ್ಥಳ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆಯಿಂದ ಮಾಡುವಂತಹ ಹೊಸ ಚಿತ್ರದಲ್ಲಿ ರಣದೀಪ್ ಹೂಡ ಕೂಡ ನಟಿಸುತ್ತಿದ್ದಾರೆ ಎನ್ನುವಂತಿದೆ. ಯಾವುದಕ್ಕೂ ಕಾದು ನೋಡಬೇಕು. 
 

Latest Videos

click me!