ಸ್ವಿಮ್ ಸೂಟ್ ಧರಿಸಿ ನೀರಿಗಿಳಿದು ಪೋಸ್ ಕೊಟ್ಟು ಪಡ್ಡೆಗಳ ಎದೆಗೆ ಬೆಂಕಿ ಹಚ್ಚಿದ ತುಪ್ಪದ ಬೆಡಗಿ

First Published | Sep 24, 2024, 1:44 PM IST

ಸ್ಯಾಂಡಲ್’ವುಡ್ ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಮತ್ತೊಮ್ಮೆ ಸ್ವಿಮ್ ಸೂಟ್ ಧರಿಸಿ ಪೂಲ್ ಗೆ ಇಳಿದು ತಮ್ಮ ಹಾಟ್ನೆಸ್ ಪ್ರದರ್ಶಿಸಿದ್ದಾರೆ. 
 

ತುಪ್ಪ ಬೇಕಾ ತುಪ್ಪ ಎನ್ನುತ್ತಾ ಪಡ್ಡೆ ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟ ನಟಿ ರಾಗಿಣಿ ದ್ವಿವೇದಿ (Ragini Dwivedi) ಇದೀಗ ಮತ್ತೊಮ್ಮೆ ತಮ್ಮ ಹಾಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಇಂಟರ್ನೆಟ್ಟಲ್ಲಿ ಕಿಡಿ ಹಚ್ಚಿದ್ದಾರೆ. 
 

ಸದ್ಯ ಸಂಜು ವೆಡ್ಸ್ ಗೀತಾ ಸಿನಿಮಾದಲ್ಲಿ ನಟಿಸುತ್ತಿರುವ ರಾಗಿಣಿ ದ್ವಿವೇದಿ, ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್. ತಮ್ಮ ವಿವಿಧ ರೀತಿಯ ಫೋಟೊಗಳನ್ನು, ವಿಡಿಯೋಗಳನ್ನು, ರೆಸಿಪಿಗಳನ್ನು ಶೇರ್ ಮಾಡ್ತಾ, ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಿರುತ್ತಾರೆ. 
 

Tap to resize

ಇದೀಗ ರಾಗಿಣಿ ದ್ವಿವೇದಿಯ ಸಖತ್ ಹಾಟ್ ಎನಿಸುವಂತಹ ಸ್ವಿಮ್ ಸೂಟ್ (Swinsuit) ಫೋಟೊಗಳು ಇಂಟರ್ನೆಟ್ಟಲ್ಲಿ ಸದ್ದು ಮಾಡ್ತಿವೆ. ಕಪ್ಪು ಬಣ್ಣದ ಸ್ವಿಮ್ ಸೂಟ್ ಧರಿಸಿ, ಪೂಲ್ ನಲ್ಲಿ ನೀರಾಟವಾಡುತ್ತಾ ನಟಿ ಸಖತ್ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. 
 

ರಾಗಿಣಿಯ ಈ ಹಾಟ್ ಫೋಟೊ ನೆಟ್ಟಿಗರ ಎದೆಗೆ ಬೆಂಕಿ ಇಟ್ಟಂತಾಗಿದ್ದು, ನಾನಾ ರೀತಿಯ ಕಾಮೆಂಟ್ ಮೂಲಕ ನಟಿಯ ಅಂದ ಚಂದವನ್ನು ಹೊಗಳಿದ್ದಾರೆ. ನಿಮ್ಮ ಹಾಟ್ನೆಸ್ ನಿಂದ ನೀರನ್ನೆಲ್ಲಾ ಬಿಸಿ ಮಾಡ್ತಿದ್ದೀರಾ? ಸೆಕ್ಸಿ, ಹಾಟಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

ಅಷ್ಟೇ ಅಲ್ಲ ಸೂಪರ್ ಹಾಟ್, ಬಾಂಬ್, ಹಾಟ್ನೆಸ್ ಓವರ್ ಲೋಡೆಡ್, ರಾಗ್ಸ್ ಆನ್ ಫೈರ್, ಸ್ಟನ್ನಿಂಗ್, ಫೈರ್, ಬ್ಯೂಟಿ, ಹಾಟಿ, ಕ್ಯೂಟಿ, ರಾಗಿಣಿಯ ಬಿಕಿನಿ ಫೋಟೊ ಶೂಟ್ ನ್ನು ಯಾರಿಗೂ ಬೀಟ್ ಮಾಡೋದಕ್ಕೆ ಸಾಧ್ಯ ಇಲ್ಲ ಅಂತಾನೂ ಹೇಳಿದ್ದಾರೆ ಜನ. 
 

ತಮ್ಮ 35ನೇ ವಯಸ್ಸಿನಲ್ಲೂ ರಾಗಿಣಿ ಇಷ್ಟೊಂದು ಫಿಟ್ ಆಗಿರೋದಕ್ಕೆ ಕಾರಣ ಅವರು ಪ್ರತಿದಿನ ಮಾಡುವಂತಹ ಯೋಗ, ಹಾಗೂ ಆಹಾರ ಕ್ರಮ. ರಾಗಿಣಿ ತಮ್ಮ ಆಹಾರದ ಬಗ್ಗೆ ತುಂಬಾನೆ ಜಾಗರೂಕರಾಗಿದ್ದಾರೆ. ಉತ್ತಮವಾಗಿ ಅಡುಗೆ ಮಾಡುವ ನಟಿ, ಹೆಚ್ಚಾಗಿ ತಾವೇ ಕುಕ್ ಮಾಡಿ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. 
 

ವೀರಮದಕರಿ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಷ್ಟ್ರಿಗೆ ಎಂಟ್ರಿ ಕೊಟ್ಟ ನಟಿ ರಾಗಿಣಿ ಕನ್ನಡ, ತಮಿಳು, ಮಲಯಾಲಂ, ಹಿಂದಿ ಸೇರಿ ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಸಂಜು ವೆಡ್ಸ್ ಗೀತಾ2, ವೃಷಭ, ಸಾರಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ತುಪ್ಪದ ಬೆಡಗಿ. 
 

Latest Videos

click me!