ಸಿಲ್ವರ್ ಕಲರ್ ಲಾಂಗ್‌ ಗೌನ್‌ನಲ್ಲಿ 'ಕಾಟೇರ' ಬೆಡಗಿ: ಮಿಂಚು ಹುಳದಂತೆ ಮಿಂಚಿದ ಆರಾಧನಾ ರಾಮ್!

First Published | Nov 3, 2024, 8:23 AM IST

ಕಾಟೇರ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಭರ್ಜರಿಯಾಗಿ ಎಂಟ್ರಿಕೊಟ್ಟ ಕನಸಿನ ರಾಣಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಇದೀಗ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.

ಮೊದಲ ಸಿನಿಮಾದಲ್ಲೇ ದರ್ಶನ್‌ಗೆ ಜೋಡಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಆರಾಧನಾ ರಾಮ್ ಇತ್ತೀಚಿಗೆ ಸೈಮಾ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ. ಅದೇ ಖುಷಿಯಲ್ಲಿ ಹೊಸ ಲುಕ್‌ನಲ್ಲಿ ಫೋಟೋಗೆ ಫೋಸ್ ನೀಡಿದ್ದಾರೆ.

ಸಿಲ್ವರ್ ಕಲರ್ ಲಾಂಗ್ ಗೌನ್ ಧರಿಸಿಕೊಂಡು ಆರಾಧನಾ ಕ್ಯಾಮೆರಾಗೆ ಸಖತ್ತಾಗಿ ಪೋಸ್ ಕೊಟ್ಟಿದ್ದು, ಸದ್ಯ ಈ ಹೊಸ ಪೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Tap to resize

ಮಿನುಗುವ ಮಿಂಚಿನ ಸಿಲ್ವರ್ ಕಲರ್ ಡ್ರೆಸ್ ತೊಟ್ಟಿರೋ ಆರಾಧನಾ ಅವರು ವಿಶೇಷವಾಗಿಯೇ ಹೊಳೆಯುತ್ತಿದ್ದು, ಇದಕ್ಕೆ ಮ್ಯಾಚಿಂಗ್ ಆಗುವ ರೀತಿಯಲ್ಲಿಯೇ ಒಂದಷ್ಟು ಪೋಸ್‌ಗಳನ್ನು ನೀಡಿದ್ದಾರೆ.

ಆರಾಧನಾ ಅವರಿಗೆ ರಂಜಿತ್ ಮೇಕ್‌ಅಪ್ ಮಾಡಿದ್ದು, ಶಿವು ಮೇಕೋವರ್ ಹೇರ್ ಸ್ಟೈಲ್ ಮಾಡಿದ್ದಾರೆ. ಫೋಟೋ ಶೂಟ್ ಅನ್ನು ಕೃಷ್ಣ ಮಾಡಿರುವುದರಿಂದ ಈ ಪೋಟೋಶೂಟ್‌ ಅದ್ಭುತವಾಗಿ ಮೂಡಿಬಂದಿದೆ.

ಸಿಲ್ವರ್ ಕಲರ್ ಗೌನ್‌ನಲ್ಲಿ ಆರಾಧನಾರನ್ನು ನೋಡಿದ ಫ್ಯಾನ್ಸ್, ನೀವು ಬಾಲಿವುಡ್‌ ಹೀರೋಯಿನ್, ಬ್ಯೂಟಿಫುಲ್ ಬೇಬಿ, ಮಿಂಚು ಹುಳ ಮಿಂಚದಿರು.. ಮಿಂಚುತ ನೀ ಹಾರದಿರು, ಕಾಟೇರ ಪ್ರಭಾ ಸೂಪರ್ ಲುಕ್ ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ.

ಇನ್ನು ಕಾಟೇರದಂತಹ ಬ್ಲಾಕ್ ಬಸ್ಟರ್ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿರುವ ಆರಾಧನಾಗೆ ಈಗ ಅವಕಾಶಗಳು ಅರಸಿ ಬರುತ್ತಿದ್ದು, ಯಾವ ಸಿನಿಮಾಗಳನ್ನು ಅವರು ಒಪ್ಪಿಕೊಂಡಿಲ್ಲ. ಈ ಹಿಂದೆ ಬಾಲಿವುಡ್‌ನ ಫೇಮಸ್ ಫೋಟೋಗ್ರಾಫರ್ ಡಬೂ ರತ್ನಾನಿ ಬಳಿ ಆರಾಧನಾ ಫೋಟೋಶೂಟ್ ಮಾಡಿಸಿಕೊಂಡಿದ್ದರು.

Latest Videos

click me!