ಕನ್ನಡದ ಈ ಸ್ಟಾರ್ ನಟಿಯರು ರಾಷ್ಟ್ರ ಮಟ್ಟ, ರಾಜ್ಯ ಮಟ್ಟದಲ್ಲಿ ದಾಖಲೆ‌‌ ಬರೆದ ಚಾಂಪಿಯನ್ಸ್

First Published | Sep 19, 2024, 2:15 PM IST

ಕನ್ನಡದ ಸ್ಟಾರ್ ನಟಿಯರಾದ ಸಪ್ತಮಿ ಗೌಡ, ಮಿಲನಾ ನಾಗರಾಜ್, ನಿಧಿ ಸುಬ್ಬಯ್ಯ ಸೇರಿ ಹಲವು ಸಿನಿಮಾದಲ್ಲಿ ನಾಯಕಿಯರಾಗಿ ಮಿಂಚೋದಕ್ಕೂ ಮುನ್ನ ರಾಷ್ಟ್ರಮಟ್ಟ ರಾಜ್ಯಮಟ್ಟದ ಕ್ರೀಡಾ ಕೂಡದಲಿ ಚಾಂಪಿಯನ್ ಗಳಾಗಿದ್ದರು. 
 

ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡ ಮಾಡೆಲ್ ಗಳು, ಬ್ಯೂಟಿ ಕಾಂಟೆಸ್ಟ್ ಗಳಲ್ಲಿ ಸ್ಪರ್ಧಿಸಿದ್ದ ತಾರೆಯರು ಸಿನಿಮಾಕ್ಕೆ ಬರೋದು ಕಾಮನ್. ಆದರೆ ಸ್ಫೋಟ್ಸ್ ನಲ್ಲಿ ಗುರುತಿಸಿಕೊಂಡ ನಟಿಯರು ಸಹ ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯರಾಗಿ ಗುರುತಿಸಿಕೊಂಡಿದ್ದು ಗೊತ್ತಾ? ಅದು ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಚಾಂಪಿಯನ್ ಗಳಾದ ಈ ನಟಿಯರು ಈಗ ಸ್ಯಾಂಡಲ್ ವುಡ್ ನಲ್ಲಿ (Sandalwood) ಹೆಸರು ಮಾಡಿದ್ದಾರೆ. ಅಂತಹ ನಟಿಯರು ಯಾರ್ಯಾರಿದ್ದಾರೆ ನೋಡೋಣ. 
 

ಮಿಲನಾ ನಾಗರಾಜ್  (Milana Nagaraj)
ಈಗಷ್ಟೇ ಹೆಣ್ಣು ಮಗುವಿನ ತಾಯಿಯಾಗಿರುವ ಮಿಲನಾ ನಾಗರಾಜ್‌ ಕಾಲೇಜು ದಿನಗಳಿಂದ ಸ್ವಿಮ್ಮಿಂಗ್‌ ಚಾಂಪಿಯನ್‌ ಆಗಿದ್ದವರು. ನಾಲ್ಕನೇ ವಯಸ್ಸಿನಲ್ಲಿ ಸ್ವಿಮ್ಮಿಂಗ್ ಆರಂಭಿಸಿದ ನಟಿ ಮಿಲನಾ ಕ್ರೀಡಾ ಲೋಕದಲ್ಲಿಯೇ ಮಿಂಚುವ ಯೋಚನೆ ಇತ್ತಂತೆ ಈ ನಟಿಗೆ. ಮಿಲನಾ ನಟನೆಗೆ ಬಂದಿದ್ದೇ ಆಕಸ್ಮಿಕ. 

Latest Videos


ರಾಜ್ಯಮಟ್ಟದ ಬ್ಯಾಕ್‌ಸ್ಟ್ರೋಕ್ ಸ್ವಿಮ್ಮಿಂಗ್‌ (backstroke swimming) ಸ್ಪರ್ಧೆಯಲ್ಲಿ ಭಾಗವಹಿಸಿರುವ  ಮಿಲನಾ ನಾಗರಾಜ್ ಹಲವು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಸ್ವಿಮ್ಮಿಂಗ್ ಚಾಂಪಿಯನ್ ಆಗಬಯಸಿದ್ದ ಮಿಲನಾಗೆ, 12ನೇ ತರಗತಿಯಲ್ಲಿರುವಾಗ ಅವರಿಗೆ ಆದ ಅಪಘಾತದಿಂದಾಗಿ ನಂತರ ಯಾವುದೇ ಸ್ವಿಮ್ಮಿಂಗ್ ಕಾಂಪಿಟೀಶನ್ ನಲ್ಲಿ ಭಾಗವಹಿಸಿಲ್ಲ ಇವರು. ಆದರೆ ಅವಕಾಶ ಸಿಕ್ಕಾಗಲೆಲ್ಲಾ ಸ್ವಿಮ್ಮಿಂಗ್ ಮಾಡದೇ ಇರೋದಿಲ್ಲ ಮಿಲನಾ. 

ಸಪ್ತಮಿ ಗೌಡ (Sapathami Gowda)
ಕಾಂತಾರ ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ ಲೀಲಾ ಪಾತ್ರದ ಮೂಲಕ ಮಿಂಚಿದ ಸಪ್ತಮಿ ಗೌಡ ಕೂಡ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಈಜುಗಾರ್ತಿ. ಐದನೇ ವಯಸ್ಸಿನಲ್ಲಿ ಈಜು ಕಲಿತ ಸಪ್ತಮಿ ಗೌಡ, ಒಂಬತ್ತನೇ ವಯಸ್ಸಿನಲ್ಲಿ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದಲ್ಲ.

ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲೂ ಭಾಗವಹಿಸಿದ್ದ ನಟಿ ಸಪ್ತಮಿ, ಅಲ್ಲೂ ಹಲವು ಚಿನ್ನದ ಪದಕಗಳನ್ನು (gold medal) ಮುಡಿಗೇರಿಸಿಕೊಂಡಿದ್ದಾರೆ. 2009ರಲ್ಲಿ ಸಬ್‌ ಜೂನಿಯರ್‌ ಟ್ರೈಯಥ್ಲಾನ್‌ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದರು. ಅಷ್ಟೇ ಅಲ್ಲ ಜಪಾನ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲೂ ಭಾಗವಹಿಸಿದ್ದರು. 
 

ನಿಧಿ ಸುಬ್ಬಯ್ಯ (Nidhi Subbaiah)
ಕನ್ನಡದಲ್ಲಿ ‘ಪಂಚರಂಗಿ’ ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದ ನಟಿ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ದ್ವಿತೀಯ ಪಿಯುಸಿ ಓದುವಾಗ ಸೇಲಿಂಗ್‌ (sailing) (ಹಾಯಿದೋಣಿ ಓಡಿಸುವುದು) ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಅಷ್ಟೇ ಅಲ್ಲ ವಿಶಾಖಪಟ್ಟಣ ಮತ್ತು ಒಡಿಶಾ ಚಿಲ್ಕಾ ಕೆರೆಯಲ್ಲಿ ನಡೆದ ವಾರ್ಷಿಕ ಸ್ಪರ್ಧೆಯಲ್ಲಿ ಮೂರು ಬಾರಿ ಚಿನ್ನದ ಪದಕ ಗೆದ್ದಿದ್ದಾರೆ ಪಂಚರಂಗಿ ಹುಡುಗಿ. 

ಸಂಗೀತಾ ಶೃಂಗೇರಿ (Sangeetha Sringeri)
ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಯಾಗಿ, 777 ಚಾರ್ಲಿಯಲ್ಲಿ (777 Charlie) ನಾಯಕಿಯಾಗಿ ಹಾಗೂ ಧಾರವಾಹಿಯಲ್ಲಿ ಸತಿಯಾಗಿ ಮಿಂಚಿದ ಸಂಗೀತ ಶೃಂಗೇರಿ, ಖೋ ಖೋ ಚಾಂಪಿಯನ್ ಕೂಡ ಹೌದು, ಖೋ ಖೊ ಸ್ಪರ್ಧೆಯಲ್ಲಿ ರಾಜ್ಯಮಟ್ಟ ಹಾಗೂ ರಾಷ್ಟ್ರಮಟ್ಟದಲ್ಲೂ ಕರ್ನಾಟಕ ತಂಡವನ್ನು ಸಂಗೀತಾ ಶೃಂಗೇರಿ ಸ್ಪರ್ಧಿಸಿದ್ದರು. ‘ಇಂಡಿವಿಜುವಲ್‌ ಚಾಂಪಿಯನ್‌ ಬಿರುದು ಕೂಡ ಇವರು ಪಡೆದಿದ್ದರು. 
 

click me!