ಆಂಟಿ ನಿಮ್ಮ ಮಗಳಿಗೆ ಮದ್ವೆ ಮಾಡಲ್ವಾ...ಓಡೋದ್ರೆ ಕಷ್ಟ?; ಫಂಕ್ಷನ್‌ಗೆ ಹೋದ್ರೂ ಶ್ರೀಲೀಲಾ ಕಾಲೆಳೆದ ನೆಟ್ಟಿಗರು!

First Published | Sep 19, 2024, 12:16 PM IST

ಬೇರೆಯವರ ಮದುವೆಗಳಲ್ಲಿ ಭಾಗಿಯಾಗುತ್ತಿರುವ ಶ್ರೀಲೀಲಾ ಯಾವಾಗ ಮದುವೆ ಆಗುತ್ತಿದ್ದಾರೆ? ನೆಟ್ಟಿಗರ ಪ್ರಶ್ನೆಗೆ ಉತ್ತರ ಬೇಕಿದೆ.....
 

2019ರಲ್ಲಿ ಕಿಸ್ ಮತ್ತು ಭರಾಟೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶ್ರೀಲೀಲಾ ಇದೀಗ ತೆಲುಗು ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದಾರೆ.

ವರ್ಷ ಪೂರ್ತಿ ಕಾಲ್‌ ಶೀಟ್ ಫುಲ್ ಮಾಡಿಕೊಂಡು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವ ಶ್ರೀಲೀಲಾ ಸತತ ಸೋಲುಗಳನ್ನು ಕಾಣುತ್ತಿರುವುದು ಬೇಸರದ ವಿಚಾರ. 

Tap to resize

ಇತ್ತೀಚಿಗೆ ಶ್ರೀಲೀಲಾ ತಮ್ಮ ಫ್ಯಾಮಿಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಲಂಗಾ ದಾವಣಿ ಧರಿಸಿ ಡಿಫರೆಂಟ್ ಫೋಸ್ ಕೊಟ್ಟಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. 

ಶ್ರೀಲೀಲಾ ತಾಯಿ ಸ್ವರ್ಣಲತಾ ಕೂಡ ಖ್ಯಾತ ಡಾಕ್ಟರ್ ಆಗಿದ್ದು ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಹೆಸರು ಮಾಡಿದ್ದಾರೆ. ಹೀಗಾಗಿ ನೆಟ್ಟಿಗರು ನೇರವಾಗಿ ಡಾಕ್ಟರ್‌ಗೆ ಪ್ರಶ್ನೆ ಮಾಡಿದ್ದಾರೆ.

ಆಂಟಿ ನಿಮ್ಮ ಮಗಳಿಗೆ ಮದುವೆ ಮಾಡಲ್ವಾ? ವಯಸ್ಸು ಎಷ್ಟಾಗಿ ಅಂತ ಗೊತ್ತಿದೆ ಅಲ್ವಾ...ಫ್ಲಾಪ್ ಸಿನಿಮಾ ಮಾಡ್ಕೊಂಡು ಫಂಕ್ಷನ್‌ಗೆ ಹೋಗ್ಕೊಂಡು ಇದ್ರೆ ಸಂಸಾರ ಶುರು ಮಾಡೋದು ಯಾವಾಗ ಎಂದು ಪ್ರಶ್ನಸಿದ್ದಾರೆ. 

ಮಾಡಲಿಂಗ್ ಮತ್ತು ಸಿನಿಮಾ ಫೋಟೋಶೂಟ್‌ಗಳಲ್ಲಿ ಬ್ಯುಸಿಯಾಗಿರುವ ಶ್ರೀಲೀಲಾ ಯಾವುದೇ ಕಾರಣಕ್ಕೂ ತಮ್ಮ ಮೆಡಿಕಲ್ ನಿಲ್ಲಿಸಬಾರದು ಎಂದು  ಪ್ರಯಾಣ ಮಾಡುವಾಗಲೂ ಓದುತ್ತಿರುತ್ತಾರೆ. 

Latest Videos

click me!