ಗುರು ಶಿಷ್ಯರು ಚಿತ್ರದಲ್ಲಿ ರವಿಚಂದ್ರನ್ ಅಭಿಮಾನಿಯಾಗಿ ನಿಶ್ವಿಕಾ ನಾಯ್ಡು

Published : May 19, 2021, 10:50 AM ISTUpdated : May 19, 2021, 10:51 AM IST

ನಟಿ ನಿಶ್ವಿಕಾ ನಾಯ್ಡು ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇದರ ಪ್ರಯುಕ್ತ ಶರಣ್ ನಾಯಕನಾಗಿ ನಟಿಸುತ್ತಿರುವ ‘ಗುರುಶಿಷ್ಯರು’ ಚಿತ್ರತಂಡದಿಂದ ವಿಶೇಷವಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗುತ್ತಿದೆ. ಶರಣ್ ಹಾಗೂ ತರುಣ್ ಸುಧೀರ್ ಜತೆಯಾಗಿ ನಿರ್ಮಿಸುತ್ತಿರುವ, ಜಡೇಶ್ ಕುಮಾರ್ ಹಂಪಿ ನಿರ್ದೇ ಶನದ ‘ಗುರು ಶಿಷ್ಯರು’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ನಿಶ್ವಿಕಾ ನಾಯ್ಡು ಜೊತೆ ಆರ್. ಕೇಶವಮೂರ್ತಿ ನಡೆಸಿದ ಸಂದರ್ಶನವಿದು.

PREV
110
ಗುರು ಶಿಷ್ಯರು ಚಿತ್ರದಲ್ಲಿ ರವಿಚಂದ್ರನ್ ಅಭಿಮಾನಿಯಾಗಿ ನಿಶ್ವಿಕಾ ನಾಯ್ಡು

ಗುರುಶಿಷ್ಯರು ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?: ತುಂಬಾ ಚೆನ್ನಾಗಿದೆ. ಇದುವರೆಗೂ ನಾನು ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ. ಮೊದಲ ಬಾರಿಗೆ ಇಂಥ ಪಾತ್ರ ಮಾಡುತ್ತಿದ್ದೇನೆ.

210

ಹಳ್ಳಿ ಪಾತ್ರದಲ್ಲಿ ಏನಿದೆ ವಿಶೇಷ?: ತುಂಬಾ ಬೋಲ್ಡ್ ಆಗಿ ವರ್ತಿಸುವ ಹುಡುಗಿ. ಪಾತ್ರದ ಹೆಸರು ಸುಜಾತ. ಎಲ್ಲರು ಸೂಜಿ ಅಂತ ಕರೆಯುತ್ತಾರೆ.

310

ಎಲ್ಲಕ್ಕಿಂತ ಮುಖ್ಯವಾಗಿ ನಾನು ಈಚಿತ್ರದಲ್ಲಿ ರವಿಚಂದ್ರನ್ ಅವರ ಅಭಿಮಾನಿಯಾಗಿರುತ್ತಾನೆ. ಕ್ರೇಜಿಸ್ಟಾರ್ ನಟನೆಯ ಚಿತ್ರಗಳ ಡೈಲಾಗ್ ಗಳನ್ನು ಹೇಳುವುದು ನನ್ನ ಪಾತ್ರದ ಮತ್ತೊಂದು ವಿಶೇಷ.

410

ಚಿತ್ರದ ಕತೆಗೂ ನಿಮ್ಮ ಪಾತ್ರಕ್ಕೂ ಏನು ನಂಟಿದೆ? : ಇದು 90ರ ದಶಕದ ಹಿನ್ನೆಲೆಯಲ್ಲಿ ಸಾಗುವ ಕತೆ. ನನ್ನು ಪಾತ್ರ ಕೂಡ ಅದೇ ರೀತಿ ಇದೆ. ಈಗಿನ ಮಾಡರ್ನ್ ಹಳ್ಳಿ ಹುಡುಗಿ ಅಲ್ಲ ನಾನು. ತೆರೆ ಮೇಲೆ ನನ್ನ ಪಾತ್ರ ಹೇಗೆ ಕಾಣುತ್ತದೆ ಎಂದು ನಾನೂ ಕೂಡ ಕುತೂಹಲದಿಂದ ಕಾಯುತ್ತಿದ್ದೇನೆ.

510

ಬಹುಶಃ ಇಂದು (ಮೇ.19) ಬಿಡುಗಡೆಯಾಗುವ ಮೋಷನ್ ಪೋಸ್ಟರ್‌ನಲ್ಲಿಈ ಈ ಕುತೂಹಲಕ್ಕೆ ಉತ್ತರ ದೊರೆಯಬಬಹುದು ಅಂದುಕೊಳ್ಳುತ್ತೇನೆ.

610

ಗುರು ಶಿಷ್ಯರು ಶೂಟಿಂಗ್ ಅನುಭವ ಹೇಗಿತ್ತು? : ಒಂದು ಹಂತದ ಚಿತ್ರೀಕರಣ ಮುಗಿದಿದೆ. ಇಡೀ ಸೆಟ್ ಫನ್ ಆಗಿತ್ತು. ಈ ಚಿತ್ರದ ನಿರ್ದೇಶಕರ ಜತೆ ನನ್ನ ಎರಡನೇ ಸಿನಿಮಾ. ಈ ಹಿಂದೆ ಜಂಟಲ್‌ಮನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದೆ.

710

ಅದಕ್ಕೂ ಆರೂರು ಸುಧಾಕರ್ ಶೆಟ್ಟಿ ಅವರೇ ಕ್ಯಾಮೆರಾ. ತರುಣ್ ಸುಧೀರ್ ನಿರ್ಮಾಣದಲ್ಲಿ ಸಾಥ್ ನೀಡುತ್ತಿದ್ದಾರೆ.

810

ಶರಣ್ ಹೀರೋ ಎಂದ ಮೇಲೆ ಚಿತ್ರದ ಶೂಟಿಂಗ್, ತಂಡದ ಉತ್ಸಾಹ ಹೇಗಿರುತ್ತದೆ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ತುಂಬಾ ಮಜವಾಗಿತ್ತು.

910

ಈ ಚಿತ್ರದ ನಂತರ ಬೇರೆ ಯಾವ ಸಿನಿಮಾ ಇದೆ?: ಗಣೇಶ್ ಅವರ ಜತೆಗೆ ಸಕತ್ ಸಿನಿಮಾ ಶೂಟಿಂಗ್ ನಡೆಯಬೇಕಿತ್ತು. ಕೊರೋನಾ ಕಾರಣಕ್ಕೆ ಚಿತ್ರೀಕರಣ ನಿಲ್ಲಿಸಲಾಗಿದೆ.

1010

 ಗುರು ಶಿಷ್ಯರು ಕೂಡ ಆ ಕಾರಣಕ್ಕೆ ಸದ್ಯಕ್ಕೆ ಶೂಟಿಂಗ್ ನಡೆಯುತ್ತಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories