ಮಾಸಗಳು ಕಳೆದರೂ ಮಾಸದ ಹೃದಯದೊಳಗಿನ ಮಂದಹಾಸ ನೀನು: ಪತ್ನಿ ನೆನೆದ ವಿಜಯ್ ರಾಘವೇಂದ್ರ!

Published : Oct 07, 2023, 11:59 AM IST

ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧರಾಗಿ ತಿಂಗಳುಗಳೇ ಕಳೆದು ಹೋದ್ರು ನಟ ವಿಜಯ್ ರಾಘವೇಂದ್ರ ದುಃಖದಿಂದ ಹೊರಬಂದಿಲ್ಲ. ಸ್ಪಂದನಾ ನೆನಪುಗಳು ರಾಘುವನ್ನು ಬಿಟ್ಟು ಬಿಡದೆ ಕಾಡ್ತಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸ್ಪಂದನಾ ಕುರಿತ ಪೋಸ್ಟ್ ಹಂಚಿಕೊಂಡಿದ್ದಾರೆ.

PREV
15
ಮಾಸಗಳು ಕಳೆದರೂ ಮಾಸದ ಹೃದಯದೊಳಗಿನ ಮಂದಹಾಸ ನೀನು: ಪತ್ನಿ ನೆನೆದ ವಿಜಯ್ ರಾಘವೇಂದ್ರ!

ಸ್ಪಂದನಾ ಅಕಾಲಿಕ ಮರಣ ಇಡೀ ಕುಟುಂಬವನ್ನು ದುಃಖಕ್ಕೆ ದೂಡಿದೆ. ಎರಡು ದೇಹ ಒಂದೇ ಜೀವದಂತೆ ಬದುಕುತ್ತಿದ್ದ ವಿಜಯ್ ರಾಘವೇಂದ್ರ-ಸ್ಪಂದನಾ ಬಾಳಲ್ಲಿ ವಿಧಿ ಆಟವಾಡಿದ್ದು, ಸ್ಪಂದನಾ ಬಾರದ ಊರಿಗೆ ತೆರಳಿದ್ದಾರೆ.

25

ಪತ್ನಿ ಕಳೆದುಕೊಂಡ ವಿಜಯ್ ರಾಘವೇಂದ್ರ ಸ್ಪಂದನಾ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅನೇಕ ಬಾರಿ ಸ್ಪಂದನಾ ಬಗ್ಗೆ ಮಾತಾಡುತ್ತಾ ಕಣ್ಣೀರು ಹಾಕಿದ್ದಾರೆ. ಇದೀಗ ರಾಘು ಪತ್ನಿ ಬಗ್ಗೆ ಹೊಸ ಪೋಸ್ಟ್ ಹಂಚಿಕೊಂಡಿದ್ದಾರೆ.

35

ಪತ್ನಿ ಫೋಟೋ ಹಂಚಿಕೊಂಡ ವಿಜಯ್ ರಾಘವೇಂದ್ರ 'ಮಾಸಗಳು ಕಳೆದರೂ ಮಾಸದ ಹೃದಯದೊಳಗಿನ ಈ ಮಂದಹಾಸ … I love you Chinna' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪತ್ನಿ ಜೊತೆಗಿರುವ ಪೋಟೋವನ್ನು ಹಂಚಿಕೊಂಡಿದ್ದಾರೆ.

45

ವಿಜಯ್ ರಾಘವೇಂದ್ರ ಪೋಸ್ಟ್ ನೋಡಿದ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್​ ನಟನಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಜೊತೆಗಿರದ ಜೀವ ಎಂದಿಗೂ ಜೀವಂತ ಎಂದು ಕಮೆಂಟ್ ಮಾಡ್ತಿದ್ದಾರೆ.

55

ಬ್ಯಾಂಕಾಕ್‌ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಆಗಸ್ಟ್‌ 6 ಭಾನುವಾರ ಅಲ್ಲಿನ ಹೋಟೆಲ್‌ನಲ್ಲೇ ಹೃದಯಾಘಾತದಿಂದ ನಿಧನರಾಗಿದ್ದರು. ಶಾಪಿಂಗ್‌ ಮುಗಿಸಿ ಬಂದಿದ್ದ ಸ್ಪಂದನಾ ನಿದ್ರೆ ಹೋದವರು ಮತ್ತೆ ಮೇಲೇಳಲೇ ಇಲ್ಲ ಎಂದು ಅವರ ಕುಟುಂಬದವರು ಮಾಹಿತಿ ನೀಡಿದ್ದರು.

Read more Photos on
click me!

Recommended Stories