ಕುರಿಗಾಹಿಗಳ ಜತೆ ಕಂಬಳಿ ಮೇಲೆ ಕೂತು ಊಟ ಮಾಡಿದ ಪುನೀತ್ ರಾಜ್‌ಕುಮಾರ್
ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ಪುನೀತ್ ರಾಜ್‌ಕುಮಾರ್ ಇಂದು (ಸೆ.05) ಭೇಟಿ ನೀಡಿದರು. ಆದರೆ, ಬೆಟ್ಟ ಬಂದ್ ಆಗಿತ್ತು. ಹೀಗಾಗಿ, ಗಂಗಾವತಿ ಸಮೀಪದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅವರು ಸುತ್ತಾಟ ನಡೆಸಿದ್ದಾರೆ. ಈ ವೇಳೆ ಕಣ್ಣಿಗೆ ಬಿದ್ದ ಕುರಿಗಾಯಿಗಳನ್ನ ಭೇಟಿ ಮಾಡಿ ಅವರ ಜೊತೆ ಕೂತು ಊಟ ಮಾಡಿದ್ದಾರೆ.
ಕುರಿಗಾಹಿಗಳ ಜತೆ ಕಂಬಳಿ ಮೇಲೆ ಕೂತು ಊಟ ಮಾಡಿದ ಪುನೀತ್ ರಾಜ್‌ಕುಮಾರ್
ಹೊಸಪೇಟೆ ಕಮಲಾಪುರ ಹತ್ತಿರವಿರುವ ಆರೆಂಜ್ ಕೌಂಟಿ ಹೋಟೆಲ್ ನಲ್ಲಿ ಚಲನಚಿತ್ರ ಚಿತ್ರೀಕರಣ ಕಾರ್ಯದಲ್ಲಿ ತೊಡಗಿದ ಪುನೀತ್ ರಾಜ್ ಕುಮಾರ್ ಭಾನುವಾರ ಬಿಡುವು ಮಾಡಿಕೊಂಡು ಅಂಜನಾದ್ರಿಯ ಶ್ರೀ ಆಂಜನೇಯ ಸ್ವಾಮಿಯ ದರ್ಶನಕ್ಕೆ ಆಗಮಿಸಿದ್ದರು. ಆದ್ರೆ, ಕೊರೋನಾ ಕಾರಣ ಸರ್ವಜನಿಕ ದರ್ಶನಕ್ಕೆ ನಿಷೇಧ ಇದ್ದಿರಿಂದ ಅವರಿಗೆ ದರ್ಶನ ಭಾಗ್ಯ ಸಿಗಲಿಲ್ಲ. ಬಳಿಕ ಅಲ್ಲಿಯೇ ಕೆಲ ಹಳ್ಳಿಗಳಲ್ಲಿ ಸುತ್ತಾಡುತ್ತಿದ್ದ ವೇಳೆ ಜಮೀನಿನಲ್ಲಿ ಕುರಿಗಾಹಿಗಳು ಹಾಕಿರುವ ಕುರಿ ಹಟ್ಟಿ ಪುನೀತ್ ಕಣ್ಣಿಗೆ ಬಿದ್ದಿದ್ದು, ಅಲ್ಲಿಗೆ ಭೇಟಿ ನೀಡಿದ್ದಾರೆ. ಖುಷಿಯಿಂದಲೇ ಕುರಿಗಾಹಿಗಳ ಜೊತೆ ಪುನೀತ್ ಮಾತುಕತೆ ನಡೆಸಿದರು.
ಕುರಿಗಾಹಿಗಳ ಜತೆ ಕಂಬಳಿ ಮೇಲೆ ಕೂತು ಊಟ ಮಾಡಿದ ಪುನೀತ್ ರಾಜ್‌ಕುಮಾರ್
ಖುಷಿಯಿಂದಲೇ ಕುರಿಗಾಹಿಗಳ ಜೊತೆ ಮಾತುಕತೆ ನಡೆಸಿದ ಪುನೀತ್, ಕಂಬಳಿ ಮೇಲೆ ಕುಳಿತು, ಅವರು ಊಟ ಮಾಡಿದ್ದಾರೆ. ಬಳಿಕ ಕುರಿಗಾಯಿಯೊಬ್ಬರು ಮಗುವಿನ ಜೊತೆಯೂ ಸಹ ತುಂಟಾಟ ಮಾಡಿದ್ದಾರೆ. ಈ ಫೋಟೋಗಳು ಅವರ ಸರಳೆತಯನ್ನು ತೋರಿಸುತ್ತವೆ.
ಕುರಿಗಾಹಿಗಳ ಜತೆ ಕಂಬಳಿ ಮೇಲೆ ಕೂತು ಊಟ ಮಾಡಿದ ಪುನೀತ್ ರಾಜ್‌ಕುಮಾರ್
ಅದೇ ರೀತಿ ಸಣಾಪೂರ ಕೆರೆ, ಸಣಾಪೂರ ಫಾಲ್ಸ್, ಕಲ್ಲಿನ ಸೇತುವೆ ಸೇರಿದಂತೆ ಇತರ ಸ್ಥಳಗಳ ವೀಕ್ಷಣೆ ಮಾಡಿದ್ದಾರೆ. ಪುನೀತ್ ಆಗಮಿಸಿದ ವಿಚಾರ ತಿಳಿದ ಅಭಿಮಾನಿಗಳು ಅಲ್ಲಿ ನೆರೆದಿದ್ದರು. ನೆಚ್ಚಿನ ನಟನ ಜತೆ ಫೋಟೋ ತೆಗೆಸಿಕೊಂಡು ಅವರು ಸಂಭ್ರಮಿಸಿದರು.
ಕುರಿಗಾಹಿಗಳ ಜತೆ ಕಂಬಳಿ ಮೇಲೆ ಕೂತು ಊಟ ಮಾಡಿದ ಪುನೀತ್ ರಾಜ್‌ಕುಮಾರ್
ಸ್ಥಳೀಯ ಪ್ರವಾಸಿ ಸ್ಥಳಗಳಾದ ಋಷಿಮುಖ ಪರ್ವತ, ಸಣಾಪೂರ, ಬಂಡಿ ಹರ್ಲಾಪೂರ, ನಾರಾಯಣ ಪೇಟೆಗಳಿಗೆ ಭೇಟಿ ನೀಡಿದ ಪುನೀತ್, ಹಾಗೇ ಸಿಕ್ಕ ಪೊಲೀಸ್ ಸಿಬ್ಬಂದಿಗಳ ಜೊತೆ ಫೋಟೋಗೆ ಫೋಸ್ ನೀಡಿದರು.
ಕುರಿಗಾಹಿಗಳ ಜತೆ ಕಂಬಳಿ ಮೇಲೆ ಕೂತು ಊಟ ಮಾಡಿದ ಪುನೀತ್ ರಾಜ್‌ಕುಮಾರ್
ಸಾರ್ವಜನಿಕರ ಪ್ರವೇಶ ನಿಷಿದ್ಧ ನಾಮಫಲಕ ವೀಕ್ಷಿಸಿ ದೇವರ ದರ್ಶನ ಪಡೆಯದೇ ವಾಪಸ್ ಹನುಮನಹಳ್ಳಿ ವಿರುಪಾಪುರ ಗಡ್ಡೆ ಸಣಾಪೂರ ಅಲ್ಲಿಯ ಲೇಕ್ ಹಾಗೂ ತುಂಗಭದ್ರಾ ಫಾಲ್ಸ್ ನ್ನು ವೀಕ್ಷಣೆ ಮಾಡಿ ಅಲ್ಲಿಯ ರೆಸಾರ್ಟ್ ಗಳಲ್ಲಿ ಚಹಾ ಕುಡಿದು ಪ್ರಕೃತಿಯ ಸೌಂದರ್ಯವನ್ನು ಸವಿದು ಒಂದು ಗಂಟೆ ವಿರಮಿಸಿ ವಾಪಸ್ ಕಮಲಾಪುರದ ಆರೆಂಜ್ ಕೌಂಟಿ ಹೋಟೆಲಿಗೆ ತೆರಳಿದ್ದಾರೆ