ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಶ್ವೇತಾ ಶ್ರೀವಾತ್ಸವ್.
ಪತಿ ಅಮಿತ್ ಶ್ರೀವಾತ್ಸವ್ ಹುಟ್ಟು ಹಬ್ಬವನ್ನು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಚರಿಸಿದ್ದಾರೆ. ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಶ್ವೇತಾ ಅವರ ಪುತ್ರಿ ಅಶ್ಮಿತಾ ಶ್ರೀವಾತ್ಸವ್ ಕೂಡ ಸ್ಟಾರ್ ಕಿಡ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ರೀಲ್ಸ್ ಮಾಡುವ ಮೂಲಕ ತಂದೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
'ಡಾರ್ಲಿಂಗ್ ಅಮಿತ್ ಶ್ರೀವಾತ್ಸವ್‌ಗೆ ಹುಟ್ಟು ಹಬ್ಬದ ಶುಭಾಶಯಗಳು. ನಮಗೆ ವಿಭಿನ್ನವಾದ ಕೇಕ್ ಮಾಡಿಕೊಟ್ಟವರಿಗೂ ಹಾಗೂ ಹೋಟೆಲ್‌ನವರಿಗೂ ಧನ್ಯವಾದಗಳು,' ಎಂದು ಶ್ವೇತಾ ಬರೆದುಕೊಂಡಿದ್ದಾರೆ.
ಪುತ್ರಿಗೂ ಇನ್‌ಸ್ಟಾಗ್ರಾಂ ಅಕೌಂಟ್ ತೆರೆದಿರುವ ಈ ಜೋಡಿ ಆಕೆ ದಿನಚರಿ ಹಾಗೂ ಮುದ್ದಾದ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಮಮ್ಮಿ ಆದರೂ ನೀವು ಇಷ್ಟೊಂದು ಎಂಗ್ ಎಂದು ಶ್ವೇತಾಗೆ ನೆಟ್ಟಿಗರು ಕಾಂಪ್ಲಿಮೆಂಟ್ ಕೊಡುತ್ತಾರೆ.
ಸದ್ಯ 'ಹೋಪ್' ಸಿನಿಮಾ ಚಿತ್ರೀಕರಣ ಮುಗಿಸಿರುವ ಶ್ವೇತಾ, ಪುತ್ರಿ ಜೊತೆ ಅನೇಕ ಫೋಟೋಶೂಟ್ ಹಾಗೂ ಖಾಸಗಿ ಸಂಸ್ಥೆ ಉದ್ಘಾಟನೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ.