ಮಗನ ಜೊತೆ ಜಿಮ್​ನಲ್ಲಿ ನಿಖಿಲ್ ವರ್ಕೌಟ್‌: ಮರಿಗೌಡ್ರಿಗೆ ಪ್ರೋಟೀನ್ ಶೇಕ್ ಕುಡಿಸ್ತೀರಾ ಎಂದ ಫ್ಯಾನ್ಸ್‌!

Published : Oct 12, 2023, 01:30 AM IST

ಸ್ಯಾಂಡಲ್‌ವುಡ್‌ನ ನಟ ನಿಖಿಲ್ ಕುಮಾರಸ್ವಾಮಿ ಇದೀಗ ಲೈಕಾ ಪ್ರೊಡಕ್ಷನ್‌ನ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಫಿಟ್ನೆಸ್‌ಗಾಗಿ ವರ್ಕೌಟ್ ಶುರು ಮಾಡಿದ್ದಾರೆ. ಜಿಮ್‌ನಲ್ಲಿ ಅವರ ಮಗ ಜೂನಿಯರ್ ನಿಖಿಲ್ ಸಾಥ್ ನೀಡಿದ್ದಾರೆ.

PREV
16
ಮಗನ ಜೊತೆ ಜಿಮ್​ನಲ್ಲಿ ನಿಖಿಲ್ ವರ್ಕೌಟ್‌: ಮರಿಗೌಡ್ರಿಗೆ ಪ್ರೋಟೀನ್ ಶೇಕ್ ಕುಡಿಸ್ತೀರಾ ಎಂದ ಫ್ಯಾನ್ಸ್‌!

ಲೋಕಸಭೆ ಹಾಗೂ ವಿಧಾನಸಭೆ ಸೋಲಿನ ಬಳಿಕ ನಿಖಿಲ್ ಸಿನಿಮಾ ಕಡೆ ಒಲವು ತೋರಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯ ಬಹುದೊಡ್ಡ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಜೊತೆ ಸಿನಿಮಾ ಮಾಡ್ತಿದ್ದಾರೆ.

26

ಸಿನಿಮಾ ನಟ ನಿಖಿಲ್ ಕುಮಾರಸ್ವಾಮಿ ಫಿಟ್ನೆಸ್ ವಿಚಾರದಲ್ಲೂ ಶಿಸ್ತು ಕಾಪಾಡಿಕೊಂಡು ಬಂದಿದ್ದು, ಇದೀಗ ನಿಖಿಲ್ ತಮ್ಮ ಮಗನ ಜೊತೆ ಜಿಮ್‌ನಲ್ಲಿ ವರ್ಕೌಟ್ ಮಾಡಿದ್ದಾರೆ.

36

ನಿಖಿಲ್ ಕುಮಾರಸ್ವಾಮಿ ಪುತ್ರ ಅವ್ಯಾನ್ ದೇವ್ ಜಿಮ್‌ನಲ್ಲಿ ಅಪ್ಪನಿಗೆ ಸಾಥ್ ನೀಡಿದ್ದಾರೆ. ಡಂಬಲ್ ಹಿಡಿದ ಅಪ್ಪನ ಜೊತೆ ಫೋಟೋಗಳಿಗೆ ಸಖತ್ತಾಗಿ ಪೋಸ್ ಕೊಟ್ಟಿದ್ದಾರೆ.

46

ಮಗನ ಜೊತೆ ಜಿಮ್‌ನಲ್ಲಿ ಕಾಲ ಕಳೆದ ಫೋಟೋಗಳನ್ನು ನಟ ನಿಖಿಲ್ ಕುಮಾರಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಫೋಟೋಗಳು ವೈರಲ್ ಆಗಿದೆ.

56

ಅಪ್ಪ-ಮಗನ ಫೋಟೋಗಳಿಗೆ ಲೈಕ್‌ಗಳ ಸುರಿಮಳೆಯಾಗಿದ್ದು, ನೆಟ್ಟಿಗರು ಸಹ ಸೂಪರ್, ನೈಸ್‌, ಸೇಮ್ ಅಪ್ಪನ ತರಹನೇ ಮಗ ಇದ್ದಾನೆ, ಮರಿಗೌಡ್ರಿಗೆ ಪ್ರೋಟೀನ್ ಶೇಕ್ ಕುಡಿಸ್ತೀರಾ ಹಾಗೂ ಫೈರ್ ಎಮೋಜಿಗಳನ್ನು ಹಾಕಿದ್ದಾರೆ.

66

ಇತ್ತಿಚೆಗಷ್ಟೇ ನಿಖಿಲ್ ಮಗ ಅವ್ಯಾನ್ ದೇವ್ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅವ್ಯಾನ್ ಅಂದ್ರೆ ವಿಷ್ಣು ದೇವರ ಹೆಸರಾಗಿದೆ. ದೇವ್ ಅಂದ್ರೆ ದೇವೇಗೌಡರು ನನ್ನ ತಾತನ ಹೆಸರು ಇಟ್ಟಿದ್ದೇವೆ ಎಂದು ನಿಖಿಲ್ ಕುಮಾರಸ್ವಾಮಿ ಈ ಹಿಂದೆ ಹೇಳಿದ್ದರು.

Read more Photos on
click me!

Recommended Stories