ಕಾಂತಾರ ಸಿನಿಮಾ ರಿಷಬ್ ಶೆಟ್ಟಿ ಲಕ್ ಅನ್ನೇ ಬದಲಾಯಿಸಿದ ಚಿತ್ರವಾಗಿದೆ. ಈ ಸಿನಿಮಾ ಮೂಲಕ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ರಿಷಬ್ ಪತ್ನಿ ಪ್ರಗತಿ ರಿಷಬ್ ಶೆಟ್ಟಿ ಕೂಡ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಕಾಂತಾರ ಸಿನಿಮಾದಲ್ಲಿ ಪ್ರಗತಿ ಶೆಟ್ಟಿ ರಾಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ ಸಿನಿಮಾ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಗತಿ ಕೂಡ ರಿಷಬ್ ಶೆಟ್ಟಿಯ ಅನೇಕ ಸಿನಿಮಾಗಳಿಗೂ ಅವರೆ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ.
ಇದೀಗ ಪ್ರಗತಿ ಶೆಟ್ಟಿ, ರಿಷಬ್ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬ್ಲ್ಯಾಕ್ ಅಂಡ್ ಗೋಲ್ಡ್ ಡ್ರೆಸ್‌ನಲ್ಲಿ ದಂಪತಿಗಳು ಸಖತ್ತಾಗಿ ಮಿಂಚಿದ್ದು, ಕ್ಯಾಮೆರಾಗೆ ಭರ್ಜರಿ ಪೋಸ್ ನೀಡಿದ್ದಾರೆ.
ಕನ್ನಡದ ಕಾಂತಾರ ಸಿನಿಮಾ ಇಡೀ ದೇಶದಾದ್ಯಂತ ಕಮಾಲ್ ಮಾಡಿತ್ತು. ಬಾಲಿವುಡ್ ಅಂಗಳದಲ್ಲೂ ಭರ್ಜರಿ ಪ್ರದರ್ಶನ ಕಂಡು ದಾಖಲೆ ಬರೆಯಿತು. ಸೈಮಾ ಅವಾರ್ಡ್ಸ್ 2023ರಲ್ಲಿ ಕನ್ನಡದ ಹೆಮ್ಮೆ ಸಿನಿಮಾ ಕಾಂತಾರ 10 ಪ್ರಶಸ್ತಿ ಗೆದ್ದಿದ್ದು, ರಿಷಬ್ ಶೆಟ್ಟಿ ಖುಷಿ ಹಂಚಿಕೊಂಡಿದ್ದರು.
ಕನ್ನಡ ಸೂಪರ್ ಹಿಟ್ ಸಿನಿಮಾ ಕಾಂತಾರ ಇತರ ಭಾಷೆಗಳಲ್ಲೂ ಭರ್ಜರಿ ಸದ್ದು ಮಾಡಿತ್ತು. ಈ ಸಿನಿಮಾ ರಿಷಬ್ ಲಕ್ ಅನ್ನೇ ಬದಲಿಸಿದೆ. ಕಾಂತಾರ ಸಿನಿಮಾ ಮೂಲಕ ನಟ, ನಿರ್ದೇಶಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
ಅತ್ಯುತ್ತಮ ನಟ, ನಿರ್ದೇಶಕ, ಮತ್ತು ಪಾಥ್ ಬ್ರೇಕಿಂಗ್ ಸ್ಟೋರಿಗಾಗಿ ಮೂರು ಸೈಮಾ ಪ್ರಶಸ್ತಿಗಳನ್ನು ರಿಷಬ್ ಶೆಟ್ಟಿ ಪಡೆದಿದ್ದಾರೆ. ಅವಾರ್ಡ್ ಪಡೆಯಲು ಅವರು ವೇದಿಕೆ ಮೇಲೇರಿದ್ದನ್ನು ನೋಡುವುದೇ ನನಗೆ ಅದ್ಬುತ ಕ್ಷಣ ಎಂದು ಪ್ರಗತಿ ಶೆಟ್ಟಿ ಈ ಹಿಂದೆ ಹೇಳಿದ್ದರು.