ಬೆಂಗಳೂರು ನಿರ್ಮಾಣಕ್ಕೆ ಕಾರಣರಾದ ಕೆಂಪೇಗೌಡರ ಜಯಂತಿ ಆಚರಣೆ ಮಾಡಲಾಗಿದೆ. ಪುತ್ಥಳಿ ಸ್ಥಾಪನೆಗೂ ಶ್ರೀಕಾರ ಬರೆಯಲಾಗಿದೆ. ಕೇಂಪೇಗೌಡರ ಜಯಂತಿಗೆ ವಿಶ್ ಮಾಡುವ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ಪ್ರಮಾದ ಮಾಡಿಕೊಂಡಿದ್ದಾರೆ. ನಟ ದರ್ಶನ್ ಕೂಡ ಟ್ವೀಟ್ ಮೂಲಕ ಕೆಂಪೇಗೌಡರ ಜಯಂತಿಗೆ ಶುಭಾಶಯ ಕೋರಿದ್ದರು. ನಾಡಪ್ರಭು ಕೆಂಪೇಗೌಡ ಜಯಂತಿಯ ಹಾರ್ದಿಕ ಶುಭಾಶಯಗಳು. ಆದಷ್ಟು ಬೇಗ ನಮ್ಮ ಬೆಂಗಳೂರು ಸಹಜ ಸ್ಥಿತಿಗೆ ಮರಳಲಿ ಎಂದು ದರ್ಶನ್ ಆಶಿಸಿದ್ದರು. ಆದರೆ ದರ್ಶನ್ ಕೆಂಪೇಗೌಡರ ಪೋಟೋದ ಬದಲು ಮದಕರಿ ನಾಯಕರ ಪೋಟೋ ಹಾಕಿ ಪ್ರಮಾದ ಮಾಡಿಕೊಂಡಿದ್ದಾರೆ. ಟ್ವೀಟ್ ಮಾಡಿದ ಕೆಲವೇ ಹೊತ್ತಿನಲ್ಲಿ ಈ ಬಗ್ಗೆ ಭಾರೀ ಚರ್ಚೆಗಳು ಆರಂಭಗೊಂಡಿವೆ. ರಾಜ ಮದಕರಿ ನಾಯಕರ ಪ್ರತಿಮೆಗೆ ಕೆಂಪೇಗೌಡರ ಪ್ರತಿಮೆ ಎಂದರೆ ಒಪ್ಪಿಕೊಳ್ಳಲು ಸಾಧ್ಯವಾ ಎಂಬ ಪ್ರಶ್ನೆ ಎದ್ದಿದೆ. ಕಣ್ಣು ತಪ್ಪಿನಿಂದ ಹೀಗೆ ಆಗಿದೆ ಇದನ್ನು ವಿವಾದ ಮಾಡಬೇಡಿ ಎಂದು ದರ್ಶನ್ ಪರ ಹಲವರು ಮಾತನಾಡಿದ್ದಾರೆ. ಕೆಂಪೇಗೌಡರ ಪೋಟೋ ಅಲ್ಲ ಇದು ಬ್ರದರ್, ದಯವಿಟ್ಟು ಗಮನಿಸಿ ಎಂಬ ಸಲಹೆಯೂ ಬಂದಿದೆ. ಕೆಂಪೇಗೌಡರ ಹಾಗೂ ವೀರ ಮದಕರಿ ನಾಯಕರ ಚಿತ್ರಗಳು ಒಂದನ್ನೊಂದು ಹೋಲುತ್ತವೆ. ಇದು ದರ್ಶನ್ ಅವರಿಗೆ ಪ್ರಮಾದ ಎಸಗಲು ಕಾರಣ ಮಾಡಿರಬಹದು. Challenging star Darshan confusion of Madakari nayaka and kempegowda ಕೆಂಪೇಗೌಡರ ಜನ್ಮದಿನ ಸಂದರ್ಭ ದರ್ಶನ್ ಪ್ರಮಾದ