Published : Feb 16, 2025, 01:43 PM ISTUpdated : Feb 16, 2025, 07:31 PM IST
ಯಶ್-ರಾಧಿಕಾ ಪಂಡಿತ್ ಜೋಡಿ ಸಿನಿಮಾ ಜೊತೆಜೊತೆಗೇ ತಮ್ಮ ಫ್ಯಾಮಿಲಿಗೆ ಕೂಡ ಸಮಯ ಮೀಸಲಿಡುತ್ತಾರೆ. ಆಪ್ತರ ಮದುವೆಗಳಿಗೆ ಈ ಜೋಡಿ ಸದಾ ಹಾಜರಿ ಹಾಕುತ್ತಾರೆ. ಜೊತೆಗೆ, ಪ್ರೇಮಿಗಳ ದಿನದಿಂದು ಪೋಸ್ಟ್ ಹಾಕಿ ಅದೇನೋ ಬರೆದುಕೊಂಡಿದ್ದಾರೆ ನೋಡಿ..
ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Yash) ಹಾಗೂ ಸ್ಯಾಂಡಲ್‌ವುಡ್ ಸಿಂಡ್ರೆಲಾ ನಟಿ ರಾಧಿಕಾ ಪಂಡಿತ್ (Radhika Pandit) ಅವರನ್ನು ಕನ್ನಡದ ಆದರ್ಶ ಜೋಡಿಗಳಲ್ಲಿ ಒಂದು ಎಂದೇ ಬಿಂಬಿಸಲಾಗುತ್ತದೆ.
213
Yash Radhika Pandit
ಮೊನ್ನೆ (16 ಫೆಬ್ರವರಿ) ಆಚರಿಸಲ್ಪಟ್ಟ 'ವ್ಯಾಲೈಂಟಿನ್ ಡೇ'ದಲ್ಲಿ ಕೂಡ ಈ ಜೋಡಿ ಸ್ಪೆಷಲ್‌ನಲ್ಲಿ ಸ್ಪೆಷಲ್ ಎನ್ನುವಂತ ಫೋಟೋ ಒಂದನ್ನು ತಮ್ಮ ಅಧೀಕೃತ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಹಂಚಿಕೊಂಡು ಸಂಭ್ರಮ ಅನುಭವಿಸಿತ್ತು.
313
Yash Radhika Pandit
ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರದು ಲವ್ ಮ್ಯಾರೇಜ್. ಮೊಗ್ಗಿನ ಮನಸ್ಸು ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ಈ ಜೋಡಿ ಅದಕ್ಕೂ ಮೊದಲು ಸೀರಿಯಲ್‌ನಲ್ಲಿ ಕೂಡ ನಟನೆ ಮಾಡಿದ್ದವರು.
413
Yash Radhika Pandit
ಸಿನಿಮಾದಲ್ಲಿ ಜೋಡಿಯಾಗಿದ್ದು ಮಾತ್ರವಲ್ಲ, ರಿಯಲ್ ಲೈಫ್‌ನಲ್ಲಿ ಕೂಡ ಅವರಿಬ್ಬರೂ ಸಾಕಷ್ಟು ಲವ್ ಹಾಗೂ ಪ್ಲಾನ್ ಬಳಿಕ ಹಸೆಮಣೆ ಏರಿದ್ದಾರೆ. ಅವರಿಬ್ಬರೂ ಈಗ ಮುದ್ದಾದ ಎರಡು ಮಕ್ಕಳ ಪೋಷಕರು.
513
Yash Radhika Pandit
ಸದ್ಯ ನಟಿ ರಾಧಿಕಾ ಪಂಡಿತ್ ಅವರು ಸಿನಿಮಾ ನಟನೆಯಿಂದ ದೂರ ಇದ್ದಾರೆ. ಆದರೆ, ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಜೊತೆಗೆ ನಟ ಯಶ್ ಅವರು ನಿರ್ಮಾಪಕರಾಗಿಯೂ ಹೆಜ್ಜೆ ಇಡುತ್ತಿದ್ದಾರೆ.
613
Yash Radhika Pandit
ಪ್ಯಾನ್ ವರ್ಲ್ಡ್ ಸಿನಿಮಾ ಟಾಕ್ಸಿಕ್ ಹಾಗೂ ಬಾಲಿವುಡ್‌ನ ಬಿಗ್ ಬಜೆಟ್ ಮೂವಿ ರಾಮಾಯಣದಲ್ಲಿ ಈಗ ನಟ ಯಶ್ ನಟಿಸುತ್ತಿದ್ದಾರೆ. ರಾಮಾಯಣ ಸಿನಿಮಾದ ನಿರ್ಮಾಣದಲ್ಲಿ ಸಹ ನಟ ಯಶ್ ಕೈಜೋಡಿಸಿದ್ದಾರೆ.
713
Yash Radhika Pandit
ಕೆಜಿಎಫ್ (KGF) ಸಿನಿಮಾ ಮೂಲಕ ಇಡೀ ಭಾರತವನ್ನೂ ಮೀರಿ ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಹೊಂದಿರುವ ನಟ ಯಶ್ ಅವರು ಈಗ ಜಗತ್ತಿನಾದ್ಯಂತ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.
813
Yash Radhika Pandit
ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಜೋಡಿಯನ್ನು ಕನ್ನಡದ ಆದರ್ಶ ದಂಪತಿಗಳು ಎಂದು ಸಿನಿಪ್ರಿಯ ಜನರು ಹೇಳುತ್ತಾರೆ. ಈ ಇಬ್ಬರೂ ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಆಕ್ವಿವ್ ಆಗಿರುತ್ತಾರೆ.
913
Yash Radhika Pandit
ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಶೂಟಿಂಗ್ ಬೆಂಗಳೂರಿನ ಹೆಚ್‌ಎಂಟಿ ಗ್ರೌಂಡ್‌ನಲ್ಲಿ ಹಾಕಲಾಗಿರುವ ಬ್ರಹತ್ ಸೆಟ್‌ನಲ್ಲಿ ನಡೆಸಲಾಗುತ್ತಿದೆ. ವಿವಾದ ಬಳಿಕ ಕ್ಲೀನ್ ಚಿಟ್ ಪಡೆದು ಈ ಚಿತ್ರದ ಟೀಮ್ ಶುಟಿಂಗ್ ಕಂಟಿನ್ಯೂ ಮಾಡಿದೆ.
1013
Yash Radhika Pandit
ನಟ ಯಶ್ ಅವರು ಸಿನಿಮಾ ಜೊತೆಜೊತೆಗೆ ತಮ್ಮ ಫ್ಯಾಮಿಲಿಗೆ ಕೂಡ ಸಮಯ ಮೀಸಲಿಡುತ್ತಾರೆ. ಸಿನಿಮಾಬಳಗದ ಹಾಗೂ ಆಪ್ತರ ಮದುವೆಗಳಿಗೆ ಈ ಜೋಡಿ ಸದಾ ಹಾಜರಿ ಹಾಕುತ್ತಾರೆ.
1113
Yash Radhika Pandit
ಇತ್ತೀಚೆಗೆ ನಡೆದ ಜಯಮಾಲಾ ಮಗಳು ಸೌಂದರ್ಯ ಹಾಗೂ ನಟ ಧನಂಜಯ್ ಮದುವೆಗೆ ಕೂಡ ಯಶ್-ರಾಧಿಕಾ ಜೋಡಿ ಹೋಗಿ ಮದುಮಕ್ಕಳಿಗೆ ಹರಸಿ, ಹಾರೈಸಿ ಬಂದಿದ್ದಾರೆ.
1213
Yash Radhika Pandit
ಅಂದಹಾಗೆ, ಯಶ್-ರಾಧಿಕಾ ಪಂಡಿತ್ ಜೋಡಿ ಪತಿ-ಪತ್ನಿ ಮಾತ್ರ ಅಲ್ಲ, ಅಮರ ಪ್ರೇಮಿಗಳೂ ಹೌದಂತೆ. 'ಇದು ನಮ್ಮ 15ನೇ ವ್ಯಾಲೆಂಟೈನ್ಸ್ ಡೇ.. ಯಾವತ್ತಿಗೂ ನನ್ನ ಪ್ರೇಮಿಯೇ ಆಗಿರುವವರ ಜೊತೆ' ಎಂದು ಬರೆದು ಪೋಸ್ಟ್ ಶೇರ್ ಮಾಡಿದ್ದಾರೆ ರಾಧಿಕಾ ಪಂಡಿತ್.
1313
Yash Radhika Pandit
ಅಂದಹಾಗೆ 'ಇದು ನಮ್ಮ 15ನೇ ವ್ಯಾಲೆಂಟೈನ್ಸ್ ಡೇ.. ಯಾವತ್ತಿಗೂ ನನ್ನ ಪ್ರೇಮಿಯೇ ಆಗಿರುವವರ ಜೊತೆ' ಎಂದು ಬರೆದು ಪೋಸ್ಟ್ ಶೇರ್ ಮಾಡಿದ್ದಾರೆ ರಾಧಿಕಾ ಪಂಡಿತ್.