ʼನಟರಾಕ್ಷಸʼ ಡಾಲಿ ಧನಂಜಯ, ಧನ್ಯತಾ ಮದುವೆಯ ಅತಿ ಸುಂದರ ಫೋಟೋಗಳು ಇಲ್ಲಿವೆ

Published : Feb 16, 2025, 11:47 AM ISTUpdated : Feb 16, 2025, 06:45 PM IST

ಫೆಬ್ರವರಿ 16ರಂದು ನಟ ಧನಂಜಯ ಹಾಗೂ ಧನ್ಯತಾ ಅವರು ಮೈಸೂರಿನಲ್ಲಿ ಮದುವೆಯಾಗಿದ್ದಾರೆ. ಇವರ ಮದುವೆಯಲ್ಲಿ ಗಣ್ಯಾತಿಗಣ್ಯರು ಭಾಗವಹಿಸಿದ್ದಾರೆ. 

PREV
118
ʼನಟರಾಕ್ಷಸʼ ಡಾಲಿ ಧನಂಜಯ, ಧನ್ಯತಾ ಮದುವೆಯ ಅತಿ ಸುಂದರ ಫೋಟೋಗಳು ಇಲ್ಲಿವೆ

ನಟ ಡಾಲಿ ಧನಂಜಯ ಅವರು ಧನ್ಯತಾ ಜೊತೆಗೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಮೂರು ದಿನಗಳಿಂದ ಅರಿಷಿಣ ಶಾಸ್ತ್ರ, ಸಂಗೀತ, ಮೆಹೆಂದಿ ಕಾರ್ಯಕ್ರಮ ನಡೆದಿದೆ. ಮೈಸೂರಿನಲ್ಲಿಯೇ ಮದುವೆ ಕಾರ್ಯಗಳು ನಡೆದಿದೆ. ಲಿಂಗಾಯತ ಸಂಪ್ರದಾಯದಂತೆ ಮದುವೆ ನಡೆದಿದೆ. ಫೆಬ್ರವರಿ 15ರಂದು ಆರತಕ್ಷತೆ ನಡೆದಿದ್ದು, ಇಂದು (ಫೆಬ್ರವರಿ 16) ಮದುವೆ ನಡೆದಿದೆ.

218

ಕುಟುಂಬಸ್ಥರು, ಸ್ನೇಹಿತರು, ಚಿತ್ರರಂಗದವರು, ರಾಜಕೀಯ ಗಣ್ಯರ ಸಾಕ್ಷಿಯಾಗಿ ನಟ ಧನಂಜಯ ಹಾಗೂ ಧನ್ಯತಾ ಅವರು ಮದುವೆ ಆಗಿದ್ದಾರೆ.

318

ಧನಂಜಯ ಹಾಗೂ ಧನ್ಯತಾ ಅವರಿಗೆ ಅನೇಕರು ಶುಭಾಶಯ ತಿಳಿಸಿದ್ದಾರೆ. ಸ್ಯಾಂಡಲ್‌ವುಡ್‌ನ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ಧನಂಜಯ ಅವರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. 

418

ಧನಂಜಯ ಅವರು ಧನ್ಯತಾ ಕೊರಳಿಗೆ ಮೂರು ಗಂಟು ಹಾಕಿದ್ದಾರೆ. ಸಂಪ್ರದಾಯಬದ್ಧವಾಗಿ ಈ ಮದುವೆ ನಡೆದಿದೆ. ಕಳೆದ ಮೂರು ದಿನಗಳಿಂದ ಮದುವೆ ಪೂರ್ವ ಕಾರ್ಯಕ್ರಮಗಳು ನಡೆಯುತ್ತಿತ್ತು. 

518

ಧನಂಜಯ ಹಾಗೂ ಧನ್ಯತಾ ಅವರು ಬಂಗಾರ ಹಾಗೂ ಕೆಂಪು ಮಿಶ್ರಿತ ಉಡುಗೆಯಲ್ಲಿ ಮಿಂಚಿದ್ದಾರೆ. ಧನ್ಯತಾ ಅವರು ರಾಣಿಯಂತೆ ರೆಡಿ ಆಗಿದ್ದಾರೆ. 

618

ಮಗನ ಮದುವೆ ನೋಡಬೇಕು ಅಂತ ಡಾಲಿ ಧನಂಜಯ ತಾಯಿ ಆಸೆ ಪಟ್ಟಿದ್ದರು. ಅದರಂತೆ ಇಂದು ಕಲ್ಯಾಣ ನೆರವೇರಿದೆ. ಅನೇಕರು ಖುಷಿಯಾಗಿದ್ದಾರೆ. 

718

ಧನಂಜಯ ಮದುವೆಯಲ್ಲಿ ಅವರ ಇಡೀ ಬಳಗವೇ ನೆರವೇರಿತ್ತು. ಮದುವೆ ಶಾಸ್ತ್ರಗಳನ್ನು ಮಾಡಲು ಈ ಜೋಡಿಗೆ ನೆರವು ಕೊಟ್ಟಿದೆ. ಒಟ್ಟಿನಲ್ಲಿ ಡಾಲಿ ಮದುವೆ ಆಯ್ತು! 

818

ಕಳೆದ ಎರಡು ತಿಂಗಳಿನಿಂದ ಧನಂಜಯ ಅವರು ಚಿತ್ರರಂಗದ ಗಣ್ಯರು, ರಾಜಕೀಯ ವ್ಯಕ್ತಿಗಳಿಗೆ ಆಹ್ವಾನ ಕೊಟ್ಟಿದ್ದರು. ಬಹುತೇಕರು ಈ ಮದುವೆಗೆ ಬಂದು ಹಾರೈಸಿದ್ದಾರೆ. 

918

ಧನಂಜಯ ಹಾಗೂ ಧನ್ಯತಾ ಅವರು ವಿವಾಹ ಕಾರ್ಯಗಳನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಇರುವ ಜೋಡಿಗಳಿಗೆ ಇನ್ನೊಂದು ಜೋಡಿ ಎಂಟ್ರಿಯಾಗಿದೆ.  

1018

ಪತಿ ಧನಂಜಯ ಅವರ ಹಣೆಗೆ ಧನ್ಯತಾ ಅವರು ಮುತ್ತಿಟ್ಟ ಕ್ಷಣ ಇದು. ಪ್ರೀತಿಸಿ ಮದುವೆಯಾಗಿರುವ ಜೋಡಿ ಇದು. ಧನ್ಯತಾ ಅವರ ಸರಳತೆಗೆ ಬೆರಗಾಗಿರೋ ಡಾಲಿ 

1118

ಮದುವೆಯಾದ ಖುಷಿಯಲ್ಲಿ ನಟ ಧನಂಜಯ ಹಾಗೂ ಧನ್ಯತಾ ಅವರು ಕಂಡಿದ್ದು ಹೀಗೆ.. ಇಬ್ಬರ ಮುಖದಲ್ಲೂ ನಗುವೋ ನಗು..! ನೀವು ಹಾರೈಸಿ.. 

1218

ಧನಂಜಯ ಅವರು ಧನ್ಯತಾ ಕೊರಳಿಗೆ ತಾಳಿ ಕಟ್ಟಿದ ಕ್ಷಣ ಇದು. ಈ ಕ್ಷಣಕ್ಕಾಗಿ ಅವರ ಅಭಿಮಾನಿಗಳು, ಕುಟುಂಬಸ್ಥರು ಇಷ್ಟುದಿನಗಳ ಕಾಲ ಕಾದಿದ್ದರು. 

1318

ಮುದ್ದಿನ ಪತ್ನಿ ಧನ್ಯತಾಗೆ ಧನಂಜಯ ಅವರು ಮುತ್ತಿಟ್ಟ ಕ್ಷಣ ಇದು. ಧನಂಜಯ ಹಾಗೂ ಧನ್ಯತಾ ಅವರು ಅದ್ದೂರಿಯಾಗಿ ಮದುವೆಯಾಗಿದ್ದಾರೆ. 

1418

ಧನಂಜಯ ಹಾಗೂ ಧನ್ಯತಾ ಅವರ ಮದುವೆಗೆ ನಟ ಶಿವರಾಜ್‌ಕುಮಾರ್‌ ಅವರು ಆಗಮಿಸಿದ್ದಾರೆ. ನವಜೋಡಿಗೆ ಅವರು ಮನಸಾರೆ ಶುಭ ಹಾರೈಸಿದ್ದಾರೆ. 

1518

ಅನಾರೋಗ್ಯದ ಮಧ್ಯೆಯೂ ನಟ ಶಿವರಾಜ್‌ಕುಮಾರ್‌ ಅವರು ಧನಂಜಯ ಹಾಗೂ ಧನ್ಯತಾ ಮದುವೆಗೆ ಬಂದು ಹಾರೈಸಿದ್ದು ವಿಶೇಷವಾಗಿತ್ತು. ಡಾಲಿ ಕಂಡ್ರೆ ಅವರಿಗೆ ತುಂಬ ಇಷ್ಟ. 

1618

ಧನಂಜಯ ಹಾಗೂ ಧನ್ಯತಾ ಮದುವೆಯಲ್ಲಿ ರಾಘವೇಂದ್ರ ರಾಜ್‌ಕುಮಾರ್‌ ಪುತ್ರರಾದ ಯುವ ರಾಜ್‌ಕುಮಾರ್‌, ವಿನಯ್‌ ರಾಜ್‌ಕುಮಾರ್‌ ಕೂಡ ಭಾಗಿಯಾಗಿದ್ದಾರೆ. 

1718

ನಟಿ ರಮ್ಯಾ ಅವರು ಧನಂಜಯ, ಧನ್ಯತಾ ಮದುವೆಗೆ ಆಗಮಿಸಿದ್ದಾರೆ. ʼಉತ್ತರಾಕಾಂಡʼ ಸಿನಿಮಾದಲ್ಲಿ ಈ ಜೋಡಿ ಒಟ್ಟಿಗೆ ನಟಿಸಬೇಕಿತ್ತು. ಆದರೆ ರಮ್ಯಾ ಅವರು ಹೊರಗಡೆ ಬಂದಿದ್ದಾರೆ. 

1818

ʼಉತ್ತರಾಕಾಂಡʼ ಸಿನಿಮಾದಲ್ಲಿ ರಮ್ಯಾ ನಟಿಸದೆ ಇದ್ದರೂ ಕೂಡ ಡಾಲಿ ಧನಂಜಯ ಜೊತೆಗೆ ಉತ್ತಮ ಸಂಬಂಧ ಕಾಯ್ದುಕೊಂಡಿದ್ದಾರೆ. ಹೀಗಾಗಿ ಅವರು ಮೈಸೂರಿಗೆ ಬಂದು ಮದುವೆಯಲ್ಲಿ ಭಾಗಿಯಾಗಿದ್ದಾರೆ. 

Read more Photos on
click me!

Recommended Stories