ಮತ್ತೆ ಜೋಡಿಯಾದ ಸರ್ಕಾರಿ ಹಿ.ಪ್ರಾ ಶಾಲೆಯ ದಡ್ಡ ಪ್ರವೀಣ -ಪಲ್ಲವಿ, ನೋಡ ನೋಡ ಎಂಥ ಚಂದ ಅಲಾ! ಎಂದ ಫ್ಯಾನ್ಸ್

First Published | Jul 2, 2024, 7:26 PM IST

ರಿಷಭ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲಿ ದಡ್ಡ ಪ್ರವೀಣ ಮತ್ತು ಪಲ್ಲವಿ ಆಗಿ ನಟಿಸಿದಂತೆ ಬಾಲ ಕಲಾವಿದರು ಈಗ ಹೇಗಾಗಿದ್ದಾರೆ ನೋಡಿ. 
 

ನಟ, ನಿರ್ದೇಶಕನಾಗಿ ಜನಪ್ರಿಯತೆ ಪಡೆದಿರುವ ರಿಷಭ್ ಶೆಟ್ಟಿಯವರ ಒಂದೊಂದು ಸಿನಿಮಾಗಳು ಅದ್ಭುತ ಕಥೆಗಳನ್ನು ನೀಡಿವೆ ಅನ್ನೋದು ನಿಮಗೆ ಗೊತ್ತೇ ಇದೆ. ಅದರಲ್ಲೂ ಪುಟಾಣಿ ಮಕ್ಕಳಿಂದ ಹಿಡಿದು, ಹಣ್ಣು -ಹಣ್ಣು ಮುದುಕರವರೆಗೆ ಎಲ್ಲರನ್ನೂ ಹಿಡಿದಿಟ್ಟ ಸಿನಿಮಾ ಅಂದ್ರೆ ಅದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು (Sarkari Hiriya Prathamika shale Kasaragod). 
 

ಗಡಿನಾಡು ಕಾಸರಗೋಡಿನಲ್ಲಿ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿಗಳು ಏನಾಗುತ್ತಿದೆ ಅನ್ನೋದನ್ನು ತೋರಿಸಿಕೊಟ್ಟ ಸಿನಿಮಾ ಇದು. ಈ ಸಿನಿಮಾದಲ್ಲಿ ಬಾಲ ಪ್ರತಿಭೆಗಳಾಗಿ ಮಿಂಚಿದ ದಡ್ಡ ಪ್ರವೀಣ ಮತ್ತು ಪಲ್ಲವಿ (Praveena and Pallavi) ನೆನಪಿದ್ಯಾ ನಿಮಗೆ. ನೆನಪಿರಲೇ ಬೇಕಲ್ವಾ? ಯಾಕಂದ್ರೆ ಇವರಿಬ್ಬರು ಸಿನಿಮಾದ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ರು.
 

Tap to resize

ನಾಲ್ಕು ವರ್ಷಗಳಿಂದ ಫೇಲ್ ಆಗಿ,ಫೇಲ್ ಆಗಿ ಏಳನೇ ಕ್ಲಾಸಲ್ಲೇ ಬಾಕಿಯಾದ ಚಿಗುರು ಮೀಸೆಯ ಯುವಕ ಪ್ರವೀಣ ಆಲಿಯಾಸ್ ದಡ್ಡ ಪ್ರವೀಣ. ಆಗಷ್ಟೇ ಹದಿಹರೆಯಕ್ಕೆ ಕಾಲಿಟ್ಟ ಹುಡುಗನಿಗೆ ತನ್ನದೇ ಕ್ಲಾಸಿನ ಬ್ರಿಲಿಯಂಟ್ ಹುಡುಗಿ ಪಲ್ಲವಿ ಮೇಲೆ ಕ್ರಶ್. ಶಾಲೆಗಳಲ್ಲಿ ಸಾಮಾನ್ಯವಾಗಿ ನಡೆಯುವಂತಹ ಈ ಸಣ್ಣದಾದ ಆಕರ್ಷಣೆ ಬಗ್ಗೆ ಸಿನಿಮಾದಲ್ಲಿ ಅಮೋಘವಾಗಿ ತೋರಿಸಲಾಗಿತ್ತು.
 

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾದಲ್ಲಿ ಅಂದು ಬಾಲ ಕಲಾವಿದರಾಗಿ ನಟಿಸಿದ್ದ ಈ ನಟರು ಈಗ ಬೆಳೆದು ದೊಡ್ಡೋರು ಆಗಿದ್ದಾರೆ. ಜೊತೆಗೆ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ ಈ ನಟರು. ದಡ್ಡ ಪ್ರವೀಣ ಆಗಿ ನಟಿಸಿದ ಹುಡುಗ ರಂಜನ್ (Ranjan)  ರಿಷಭ್ ಶೆಟ್ರ ಅಪ್ಪಟ ಶಿಷ್ಯ, ಇನ್ನು ಪಲ್ಲವಿ ಆಗಿ ನಟಿಸಿದ್ದ ಬಾಲೆ ಸಪ್ತ ಪಾವೂರು. ಇಬ್ಬರು ಸದ್ಯ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿದ್ದಾರೆ. 
 

ರಂಜನ್ ರಿಷಭ್ ಶೆಟ್ರ (Rishabh Shetty) ಕಾಂತಾರ ಸಿನಿಮಾದಲ್ಲಿ ಮಿಂಚಿದ್ದರು. ಇದೀಗ ಆರಾಟ ಎನ್ನುವ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು, ಮಂಗಳೂರು ಕರಾವಳಿಯ ಸಂಪ್ರದಾಯ, ಆಚರಣೆಯ ಕಥೆಯನ್ನು ಹೇಳುವ ಈ ಸಿನಿಮಾ ಸದ್ಯ ಭಾರಿ ಸದ್ದು ಮಾಡುತ್ತಿದೆ. ಸಿನಿಮಾದಲ್ಲಿ ರಂಜನ್ ನಾಯಕರಾಗಿದ್ದು, ವೆನ್ಯಾ ರೈ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾಗೆ ಅಪಾರ ಜನಮನ್ನಣೆ ದೊರೆತಿದೆ. 
 

ಇನ್ನು ಸರ್ಕಾರಿ ಶಾಲೆಯಲ್ಲಿ ಪಲ್ಲವಿಯಾಗಿ ನಟಿಸಿದ್ದ ಸಪ್ತ ಪಾವೂರ್ (Saptha Pavoor), ಸೋಶಿಯಲ್ ಮೀಡೀಯಾದಲ್ಲಿ ಸಖತ್ ಆಕ್ಟೀವ್, ಹೆಚ್ಚಾಗಿ ರೀಲ್ಸ್ ಗಳಿಗೆ ಹೆಜ್ಜೆ ಹಾಕುತ್ತ, ವಿಡೀಯೋ ಪೋಸ್ಟ್ ಮಾಡುತ್ತಿರುವ ನಟಿ ಈಗಷ್ಟೇ ಪಿಯುಸಿ ಮುಗಿಸಿದ್ದು, ಸಯನ್ಸ್ (PCMB ) ನಲ್ಲಿ 92% ಪಡೆದು, ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗಿದ್ದಾರೆ. ಇವರಿಗೆ ವಿಶ್ ಮಾಡಿರೋ ಅಭಿಮಾನಿಗಳು ಸರ್ಕಾರಿ ಶಾಲೆಯಲ್ಲೂ ಜಾಣೆ, ನಿಜ ಜೀವನದಲ್ಲೂ ನೀವು ಜಾಣೆ ಎಂದು ಹೊಗಳಿದ್ದಾರೆ. 
 

ಇವರು ಕೂಡ ಕನ್ನಡ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಈ ಹಿಂದೆ ತನುಜಾ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ರಾಜೇಶ್ ನಟರಂಗ, ವಿಶ್ವೇಶ್ವರ್ ಭಟ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದರು. ಈ ಸಿನಿಮಾ ಚಿತ್ತಾರ ಸ್ಟಾರ್ ಅವಾರ್ಡ್ ಕೂಡ ಪಡೆದಿತ್ತು. ಶಿವರಾಜ್ ಕುಮಾರ್ ಜೊತೆ ಬೈರಾಗಿ ಸಿನಿಮಾದಲ್ಲೂ ನಟಿಸಿದ್ದರು. ಅಲ್ಲದೇ ಚೆಲ್ಲಾಪಿಲ್ಲಿ, ದ್ವೈತ, ರಿಕ್ಷಾ ಡ್ರೈವರ್ ಸಿನಿಮಾದಲ್ಲೂ ಸಪ್ತ ನಟಿಸಿದ್ದರು. 
 

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಿಲೀಸ್ ಆಗಿ 6 ವರ್ಷದ ಬಳಿಕ ಪ್ರವೀಣ -ಪಲ್ಲವಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ರಂಜನ್ ಅವರ ಆರಾಟ ಸಿನಿಮಾದ ಪ್ರೀಮಿಯರ್ ಶೋದಲ್ಲಿ ಇಬ್ಬರು ಜೊತೆಯಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಫೋಟೊ ನೋಡಿ ಫ್ಯಾನ್ ವಾವ್ ಪ್ರವೀಣ -ಪಲ್ಲವಿ ಸೂಪರ್, ಕೊನೆಗೂ ಅಕ್ಕಪಕ್ಕ ನಿಂತು ಫೋಟೋ ತೆಗೆಸಿಕೊಂಡರು, ನೋಡ ನೋಡ ಎಷ್ಟು ಚಂದ ಅಲಾ, ಇಬ್ಬರು ಜೋಡಿಯಾಗಿ ಸಿನಿಮಾ ಮಾಡಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

Latest Videos

click me!