ತಾಯಿಯಾಗುತ್ತಿರುವ ಸಂಭ್ರಮದಲ್ಲಿ ಹರ್ಷಿಕಾ ಪೂಣಚ್ಚ; ಅಕ್ಟೋಬರ್‌ಗೆ ಕಾಯುತ್ತಿರುವ ಎಂದ ಪತಿ ಭುವನ್!

First Published | Jul 2, 2024, 9:47 AM IST

ಸಿಹಿ ಸುದ್ದಿ ಹಂಚಿಕೊಂಡ ಹರ್ಷಿಕಾ-ಭುವನ್. ಕೊಡಗಿನ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿದ ಸೆಲೆಬ್ರಿಟಿ ಜೋಡಿ.....

ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ಸ್‌ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಫೋಷಕರಾಗುತ್ತಿರುವ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಕೊಡಗಿನ ಶೈಲಿಯಲ್ಲಿ ತಮ್ಮ ಹುಟ್ಟೂರಿನಲ್ಲಿ ಫೋಟೋಶೂಟ್ ಮಾಡಿಸುವ ಮೂಲಕ ಸಿಹಿ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Tap to resize

'ಗೆಳೆಯರೆ, ಇಂದಿನವರೆಗೂ ನಮ್ಮಿಬ್ಬರಿಗೆ ಸದಾ ಆಶೀರ್ವಾದಿಸುತ್ತಾ ಬಂದಿದ್ದೀರಿ, ಇನ್ನು ಮುಂದೆ ನಿಮ್ಮ ಪ್ರೀತಿ ಆಶೀರ್ವಾದ ನಮ್ಮ ಈ ಇನ್ನೊಂದು ಪುಟ್ಟ ಜೀವನದ ಮೇಲೆ ಇರಲಿ. ಅಕ್ಟೋಬರ್‌ಗೆ ಕಾತುರದಿಂದ ಕಾಯುತ್ತಿದ್ದೇವೆ' ಎಂದು ಭುವನ್ ಬರೆದುಕೊಂಡಿದ್ದಾರೆ. 

ಆಗಸ್ಟ್‌ 24, 2023ರಲ್ಲಿ ಹರ್ಷಿಕಾ ಮತ್ತು ಭುವನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿ ವರ್ಷದೊಳಗೆ ಗುಡ್‌ ನ್ಯೂಸ್‌ ಹಂಚಿಕೊಳ್ಳುತ್ತಿದ್ದಾರೆ.

ಹಲವು ವರ್ಷಗಳ ಕಾಲ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ಪ್ರೀತಿಸುತ್ತಿದ್ದರು, ಪೋಷಕರು ಒಪ್ಪಿಗೆ ಪಡೆದು ಖುಷಿ ಖುಷಿಯಾಗಿ ತಮ್ಮ ಹುಟ್ಟೂರಿನಲ್ಲಿ ಮದುವೆ ಮಾಡಿಕೊಂಡರು.

ಒಂದು ಸೆಕೆಂಡ್ ವಿಡಿಯೋ ಮಿಲಿಯನ್ ವಿಚಾರಗಳನ್ನು ರಿವೀಲ್ ಮಾಡುತ್ತದೆ. ನನ್ನ ಸಂಪ್ರದಾಯ ಪ್ರತಿನಿಧಿಸುತ್ತಿದ್ದೀನಿ, ಇದು ಕೊಡವ ಸೀರೆ...ಹೀಗೆ ಸಾಕಷ್ಟು ಇದೆ ಎಂದು ಹರ್ಷಿಕಾ ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ನೆಟ್ಟಿಗರು ಪ್ರಗ್ನೆಂಟ್ ಎಂದು ಗೆಸ್ ಮಾಡಿದ್ದರು.

Latest Videos

click me!