ರೆಡ್ ಶಾರ್ಟ್ ಡ್ರೆಸ್ಸಲ್ಲಿ ರಶ್ಮಿಕಾ… ಇಷ್ಟು ಅನ್‌ಕಂಫರ್ಟೇಬಲ್ ಡ್ರೆಸ್ ಬೇಕಿತ್ತಾ? ಕೇಳ್ತಿದ್ದಾರೆ ಫ್ಯಾನ್ಸ್

Published : Apr 10, 2024, 05:28 PM IST

ಕನ್ನಡದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು, ನಂತರ ತೆಲಗುನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ, ಇದೀಗ ಬಾಲಿವುಡ್‌ನಲ್ಲಿಯೂ ಬಹು ಬೇಡಿಕೆಯ ನಟಿ. ರೆಡ್ ಡ್ರೆಸ್ಸಲ್ಲಿ ನಟಿಯ ಹಳೆ ವಿಡಿಯೋ ಒಂದು ಇದೀಗ ಮತ್ತೆ ವೈರಲ್ ಆಗುತ್ತಿದ್ದು, ಜನರು ಮತ್ತೆ ಅದೇ ಅನ್ ಕಂಫರ್ಟೇಬಲ್ ಡ್ರೆಸ್ ಬಗ್ಗೆ ಕಾಮೆಂಟ್ ಮಾಡಿ, ನಟಿಗೆ ಇದೆಲ್ಲಾ ಬೇಕಿತ್ತಾ ಎಂದು ಕೇಳ್ತಿದ್ದಾರೆ.   

PREV
17
ರೆಡ್ ಶಾರ್ಟ್ ಡ್ರೆಸ್ಸಲ್ಲಿ ರಶ್ಮಿಕಾ…  ಇಷ್ಟು ಅನ್‌ಕಂಫರ್ಟೇಬಲ್ ಡ್ರೆಸ್ ಬೇಕಿತ್ತಾ? ಕೇಳ್ತಿದ್ದಾರೆ ಫ್ಯಾನ್ಸ್

ನ್ಯಾಷನಲ್ ಕ್ರಶ್ ಆಗಿ ಗುರುತಿಸಿಕೊಂಡಿರುವ ರಶ್ಮಿಕಾ ಮಂದಣ್ಣ (Rashmika Mandanna) ಸದಾ ಒಂದಲ್ಲ ಒಂದು ಕಾರಣಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ. ಕನ್ನಡದ ವಿಷ್ಯ ಮಾತ್ರ ಅಲ್ಲ, ತಮ್ಮ ಡ್ರೆಸ್ ವಿಷಯದಲ್ಲೂ ನಟಿ ಸದಾ ಟ್ರೋಲ್ ಆಗ್ತಾನೆ ಇರ್ತಾರೆ. 
 

27

ಇದೇ ಏಪ್ರಿಲ್ 5 ರಂದು ರಶ್ಮಿಕಾ ಮಂದಣ್ಣ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾ ಪೇಜ್ ಒಂದರಲ್ಲಿ ರಶ್ಮಿಕಾಗೆ ವಿಶ್ ಮಾಡಲು ಅವರ ಹಳೆಯ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಆ ವಿಡಿಯೋ ಇದೀಗ ಮತ್ತೆ ಟ್ರೋಲ್ ಆಗುತ್ತಿದೆ. 
 

37

ಇದು ಕಳೆದ ವರ್ಷದ ಜುಲೈ ತಿಂಗಳ ವಿಡಿಯೋ, ಆಗಷ್ಟೇ ಪುಷ್ಫಾ ಯಶಸ್ಸಿನ ಖುಷಿಯಲ್ಲಿ ತೇಲುತ್ತಿದ್ದ ರಶ್ಮಿಕಾ, ಬಾಲಿವುಡ್ ಗೆ ಕಾಲಿಡಲು ತಯಾರಿ ನಡೆಸಿದ್ದರು, ಈ ಸಂದರ್ಭದಲ್ಲಿ ಬಾಲಿವುಡ್ ನ ಕಾರ್ಯಕ್ರಮಕ್ಕೆ ಅವರು ಕೆಂಪು ಬಣ್ಣದ ಶಾರ್ಟ್ ಡ್ರೆಸ್(red short dress) ಧರಿಸಿದ್ದು, ತುಂಬಾನೆ ಬೋಲ್ಡ್ ಆಂಡ್ ಬ್ಯೂಟಿ ಫುಲ್ ಆಗಿ ಕಾಣಿಸುತ್ತಿದ್ದರು. 
 

47

ರಶ್ಮಿಕಾ ಮಂದಣ್ಣ ಬಾಡಿ ಹಗ್ಗಿಂಗ್, ಥೈ ಹೈ ಡ್ರೆಸ್ ನಲ್ಲಿ ತುಂಬಾನೆ ಬೋಲ್ಡ್ ಆಗಿ ಕಾಣಿಸುತ್ತಿದ್ದರು. ಇದು ವೀ ಡೀಪ್ ನೆಕ್ ಹೊಂದಿದ್ದು, ಅದಕ್ಕೆ ಹಿಂದೆ ಸೊಂಟದಿಂದ ಎಕ್ಸ್ಟ್ರಾ ಲಾಂಗ್ ವೇಲ್ ಕೂಡ ಇತ್ತು. ಒಂದು ಸಣ್ಣ ಕಿವಿಯೋಲೆ ಧರಿಸೋ ಮೂಲಕ ರಶ್ಮಿಕಾ ಮಿಂಚುತ್ತಿದ್ದರು, ಆದರೆ ಈ ಶಾರ್ಟ್ ಡ್ರೆಸ್ಸಲ್ಲಿ ರಶ್ಮಿಕಾ ತುಂಬಾನೆ ಅನ್ ಕಂಫರ್ಟೇಬಲ್ ಆಗಿದ್ದರು. 
 

57

ಈ ಸಂದರ್ಭದಲ್ಲಿ ಪಾಪಾರಾಜಿ ಅಂದರೆ ಕಾರ್ಯಕ್ರಮದಲ್ಲಿ ಹಾಜರಿದ್ದ ಫೋಟೋಗ್ರಾಫರ್ ಗಳು ರಶ್ಮಿಕಾ ಜೊತೆ ಫೋಟೋ ತೆಗೆಯಲು ಮುಂದಾದಾಗ, ರಶ್ಮಿಕಾ ತಮ್ಮ ಡ್ರೆಸ್ ನಿಂದಾಗಿ, ಎಲ್ಲರ ಮಧ್ಯ ಕುಳಿತು ಫೋಟೋ ತೆಗೆಸಿಕೊಳ್ಳಲು ತುಂಬಾನೆ ಅನ್ ಕಂಫರ್ಟೇಬಲ್ (uncomfertable) ಫೀಲ್ ಆಗುತ್ತಿರೋದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.
 

67

ರಶ್ಮಿಕಾ ಕುಳಿತುಕೊಳ್ಳುವಾಗ ತನ್ನ ಕಾಲುಗಳನ್ನು ಹೇಗೋಗೋ ಮುಚ್ಚಿಕೊಳ್ಳುತ್ತಿದ್ದು, ಕೈಗಳಿಂದ ಎದೆಯನ್ನು ಕವರ್ ಮಾಡುತ್ತಿದ್ದಾರೆ. ಇದನ್ನು ನೋಡಿ ಜನರು ಇಷ್ಟೊಂದು ಅನ್ ಕಂಪರ್ಟೇಬಲ್ ಬಟ್ಟೆ ಧರಿಸೋದಾದ್ರೂ ಯಾಕೆ ಎಂದು ಕೇಳಿದ್ದಾರೆ. ಇನ್ನು ಕೆಲವರು ಪಾಪ ಅನ್ ಕಂಫರ್ಟೇಬಲ್ ಆದ್ರೂ ಸುಮ್ಮನೆ ನಗುತ್ತಾ ಫೋಸ್ ನೀಡಬೇಕು, ನಟಿಯಾದೋರಿಗೆ ಎಂಥಾ ಕಷ್ಟ ಪಾಪ ಎಂದಿದ್ದಾರೆ. 
 

77

ಮತ್ತೊಬ್ಬರು ಕಾಮೆಂಟ್ ಮಾಡಿ ಈ ನಟಿಯರು ಫ್ಯಾಷನ್ ಹೆಸರಿನಲ್ಲಿ ಅರ್ಧಂಬರ್ಧ ಮೈ ಕಾಣುವಂತೆ ಡ್ರೆಸ್ ಧರಿಸಿ, ಸಾರ್ವಜನಿಕರ ಎದುರು ಅನ್ ಕಂಫರ್ಟೇಬಲ್ ಫೀಲ್ ಮಾಡಿಕೊಳ್ಳುತ್ತಾರೆ. ಜೊತೆಗೆ ತಮ್ಮ ದೇಹವನ್ನು ಮುಚ್ಚೋದಕ್ಕೆ ಟ್ರೈ ಮಾಡ್ತಾರೆ. ಅರೆ ನಗ್ನ ಬಟ್ಟೆ ಧರಿಸೋದಕ್ಕೆ ತಾವೇ ನಿರ್ಧರಿಸಿದ ಮೇಲೆ ಎಲ್ಲರೆದುರು ಮುಚ್ಚಿಕೊಳ್ಳುವ ನಾಟಕ ಮಾಡೋದಾದ್ರೂ ಯಾಕೆ, ಬಟ್ಟೆ ಧರಿಸಿದ್ದು ನಿಮ್ಮದೇ ಆಯ್ಕೆ ಅಲ್ವಾ? ಬಿಂದಾಸ್ ಆಗಿ ಇದ್ದು ಬಿಡಿ ಎಂದು ಸಹ ಬಿಟ್ಟಿ ಸಲಹೆ ಕೊಟ್ಟಿದ್ದಾರೆ. ಅವರ ಡ್ರೆಸ್ ಅವರ ಇಷ್ಟ ನಮಗೇನು ಅಂತ ನಾವು ಸುಮ್ನೆ ಇರ್ಬೇಕು ಅಷ್ಟೇ ಅಲ್ವಾ? ಏನಂತೀರಾ? 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories