ತಂಗಿ ಮದ್ವೆಯಾದ್ರೂ ತಾನೇ ವಧುವಿನಂತೆ ಮಿಂಚಿದ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ

Published : Jul 16, 2024, 04:36 PM IST

ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಸಹೋದರಿ ಮದುವೆ ಇತ್ತೀಚೆಗೆ ನಡೆದಿದ್ದು, ತಂಗಿ ಮದ್ವೇಲಿ ರಾಗಿಣಿ ಮಿಂಚಿದ್ದು ಹೀಗೆ… ಇಲ್ಲಿದೆ ನೋಡಿ ಮುದ್ದಾದ ಫೋಟೋಗಳು.   

PREV
17
ತಂಗಿ ಮದ್ವೆಯಾದ್ರೂ ತಾನೇ ವಧುವಿನಂತೆ ಮಿಂಚಿದ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ

ಕನ್ನಡ ಚಿತ್ರರಂಗದ ಡೈನಾಮಿಕ್ ಪ್ರಿನ್ಸ್ ಎಂದೇ ಖ್ಯಾತಿ ಪಡೆದಿರುವ ಪ್ರಜ್ವಲ್ ದೇವರಾಜ್ (Prajwal Devraj) ಪತ್ನಿ ರಾಗಿಣಿ ಚಂದ್ರನ್ ಅವರ ಸಹೋದರಿ ಕನಿಕಾ ಚಂದ್ರನ್ ವಿವಾಹ ಇತ್ತಿಚೆಗೆ ನಡೆದಿದ್ದು ತಂಗಿ ಮದ್ವೇಲಿ ರಾಗಿಣಿ ತಾವೇ ವಧುವಿನಂತೆ ಮಿಂಚಿದ್ದಾರೆ. 
 

27

ಜನವರಿ ತಿಂಗಳಲ್ಲಿ ಕನಿಕಾ ಮತ್ತು ಸುದರ್ಶನ್ ಜೈನ್ ನಿಶ್ಚಿತಾರ್ಥ ಸಿಂಪಲ್ ಆಗಿ, ರಾಗಿಣಿ (Ragini Chandran) ಅವರ ತವರು ಮನೆಯಲ್ಲಿ ನಡೆದಿತ್ತು. ಇದೀಗ ಜುಲೈ ತಿಂಗಳ ಆರಂಭದಲ್ಲಿ ಅದ್ದೂರಿಯಾಗಿ ಕನಿಕಾ ಮದುವೆ ನಡೆದಿದೆ. 
 

37

ಕನಿಕಾ ಮತ್ತು ಸುದರ್ಶನ್ ಅವರದ್ದು ಲವ್ ಮ್ಯಾರೇಜ್. ಇವರಿಬ್ಬರ ಮದುವೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದ್ರೆ, ರಾಗಿಣಿ ತಮ್ಮ ಮುದ್ದಾದ ಲುಕ್ ಮೂಲಕ ಮದುವೆಯಲ್ಲಿ ಸಖತ್ತಾಗಿ ಮಿಂಚಿದ್ದಾರೆ. 
 

47

ಆಫ್ ವೈಟ್ ಸಿಲ್ಕ್ ಸೀರೆಯುಟ್ಟಿರುವ ರಾಗಿಣಿ ಬಾರ್ಡರ್ ಗೆ ಮ್ಯಾಚ್ ಆಗುವಂತಹ ಪಿಂಕ್ ಬಣ್ಣದ ಡಿಸೈನರ್ ಬ್ಲೌಸ್ ತೊಟ್ಟು, ಅಭೂಷಣ್ ಜ್ಯುವೆಲ್ಲರಿಯ ಸುಂದರವಾಗಿ ಗೋಲ್ಡ್ ಮತ್ತು ಡೈಮಂಡ್ ನೆಕ್ಲೆಸ್, ಅದಕ್ಕೆ ಮ್ಯಾಚ್ ಆಗುವ ಇಯರಿಂಗ್ಸ್, ಬಳೆ ಧರಿಸಿದ್ದಾರೆ. 
 

57

ಎರಡೂ ಕೈಗಳ ತುಂಬಾ ಮೆಹೆಂದಿ, ತಲೆಯಲ್ಲಿ ಬ್ಲೌಸ್ ಗೆ ಮ್ಯಾಚ್ ಆಗುವಂತಹ ಹೂವು, ಸೊಂಟಪಟ್ಟಿ, ವಂಕಿ, ಡಾಬು ಧರಿಸಿ ಥೇಟ್ ಮದುಮಗಳಂತೆ ಮಿಂಚುತ್ತಿದ್ದಾರೆ ರಾಗಿಣಿ ಪ್ರಜ್ವಲ್. 
 

67

ರಾಗಿಣಿ ಚಂದ್ರನ್  ಡ್ಯಾನ್ಸರ್, ಕೊರಿಯೋಗ್ರಾಫರ್ (Choreographer), ವೆಡ್ಡಿಂಗ್/ ಇವೆಂಟ್ಸ್ ಮ್ಯಾನೇಜ್‌ಮೆಂಟ್‌ ಕೂಡ ನಡೆಸುತ್ತಿದ್ದು, ಜೊತೆಗೆ ಫಿಟ್ನೆಸ್ ಟ್ರೈನರ್ ಕೂಡ ಹೌದು. ರಾಗಿಣಿ ಚಂದ್ರನ್, ಕನಿಕಾ ಸೇರಿಕೊಂಡು u rhythmix ಎನ್ನುವ ಡ್ಯಾನ್ಸ್, ಫಿಟ್‌ನೆಸ್ ಅಕಾಡೆಮಿ ಕೂಡ ನಡೆಸುತ್ತಿದ್ದಾರೆ.
 

77

ಇನ್ನು ರಾಗಿಣಿ ಅದ್ಭುತ ನಟಿ ಕೂಡ ಹೌದು. ಹಲವು ಶಾರ್ಟ್ ಫಿಲಂ ಸೇರಿ, ಒಂದೆರಡು ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಸದ್ಯ ರಾಗಿಣಿ ಶಾನುಭೋಗರ ಮಗಳು ಸಿನಿಮಾದಲ್ಲೂ ನಟಿಸಿದ್ದು, ಈ ಸಿನಿಮಾದ ಲುಕ್ ಸದ್ಯ ವೈರಲ್ ಆಗಿದೆ. 
 

Read more Photos on
click me!

Recommended Stories