ಫೇವರಿಟ್ ಹುಡುಗನ ಜೊತೆ ಅವಿವಾ ಅಭಿಷೇಕ್…. ರೆಬಲ್ ಸ್ಟಾರ್ ಸೊಸೆ ತುಂಬಾನೆ ಸಿಂಪಲ್

Published : Jan 23, 2025, 04:05 PM ISTUpdated : Jan 23, 2025, 04:17 PM IST

ರೆಬೆಲ್ ಸ್ಟಾರ್ ಅಂಬರೀಷ್ ಮಗ ಸೊಸೆಯ ಹೊಸ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅವಿವಾ -ಅಭಿಷೇಕ್ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.   

PREV
16
ಫೇವರಿಟ್ ಹುಡುಗನ ಜೊತೆ ಅವಿವಾ ಅಭಿಷೇಕ್…. ರೆಬಲ್ ಸ್ಟಾರ್ ಸೊಸೆ ತುಂಬಾನೆ ಸಿಂಪಲ್

ಸ್ಯಾಂಡಲ್ವುಡ್ ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ (Abhishek Ambarish), ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರೋದು ಕಡಿಮೆಯೇ, ಆದರೆ ಅವರ ಪತ್ನಿ ಹೆಚ್ಚಾಗಿ ತಮ್ಮ ರೊಮ್ಯಾಂಟಿಕ್ ಕಪಲ್ ಫೊಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. 
 

26

ಈ ಹಿಂದೆ ಸ್ನೇಹಿತೆಯ ಮದುವೆ ಸಮಾರಂಭದಲ್ಲಿ ಇಬ್ಬರು ವೈಟ್ ಆಂಡ್ ವೈಟ್ ಲುಕ್ ನಲ್ಲಿ ಸಖತ್ ಆಗಿ ಮಿಂಚಿದ್ದರು. ಇಬ್ಬರ ಈ ಮುದ್ದಾದ ಫೋಟೊವನ್ನು ಅಭಿಮಾನಿಗಳು ಸಹ ಮೆಚ್ಚಿಕೊಂಡಿದ್ದರು. ಇದೀಗ ಹೊಸ ಫೋಟೊಗಳನ್ನು ಅವಿವಾ ಶೇರ್ ಮಾಡಿದ್ದಾರೆ. 
 

36

ಇನ್’ಸ್ಟಾಗ್ರಾಂನಲ್ಲಿ ಆಕ್ಟೀವ್ ಆಗಿರುವ ಅವಿವಾ (Aviva Abhishek) ತಮ್ಮ ಜೀವನದ ವಿಶೇಷ ಕ್ಷಣಗಳ ಫೋಟೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ತಮ್ಮ ಫೋಟೊ, ಪತಿ ಜೊತೆಗಿನ ಫೋಟೊ, ಮಗುವಿನ ಗ್ಲಿಂಪ್ಸ್, ಸ್ನೇಹಿತರ ಜೊತೆಗಿನ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 
 

46

ಇದೀಗ ಅವಿವಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಅಭಿಷೇಕ್ ಜೊತೆಗಿನ ಮುದ್ದಾದ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಫೋಟೊಗಳ ಜೊತೆಗೆ ಫೇವರಿಟ್ ಹಾಡು ಹಾಗೂ ಫೇವರಿಟ್ ಹುಡುಗ ಅಂತಾನೂ ಬರೆದಿದ್ದಾರೆ. ಈ ಫೋಟೊದಲ್ಲಿ ಅಭಿಷೇಕ್ ವೈಟ್ ಶೆರ್ವಾನಿ ಧರಿಸಿದ್ದು, ಪತ್ನಿಯ ತಲೆಯ ಮೇಲೆ ಮುದ್ದಾಗಿ ಕಿಸ್ ಮಾಡಿದ್ದಾರೆ ಹಾಗೂ ಪತ್ನಿ ಜೊತೆಗೆ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. 
 

56

ಅವಿವಾ ಬೇಬಿ ಪಿಂಕ್ ಬಣ್ಣದ ಸಲ್ವಾರ್ ಸೂಟ್ ನಲ್ಲಿ ಮಿಂಚಿದ್ದಾರೆ. ಕಿವಿಗೆ ಸಿಂಪಲ್ ಆಗಿ ಒಂದು ಸ್ಟಡ್ ಹಾಗೂ ಕೈಯಲ್ಲಿ ವಾಚ್ ಧರಿಸಿದ್ದಾರೆ ಅಷ್ಟೇ. ನಿರಾಭರಣ ಸುಂದರಿಯಾಗಿ ಅವಿವಾ ಸಿಂಪಲ್ ಬ್ಯೂಟಿಯಾಗಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಅವರ ಸಿಂಪ್ಲಿಸಿಟಿಯನ್ನು ಫ್ಯಾನ್ಸ್ ಕೊಂಡಾಡಿದ್ದಾರೆ. 
 

66

ಒಂದು ಮಗುವಿನ ತಾಯಿಯಾಗಿರುವ ಅವಿವಾ, ಡೆಲಿವರಿ ಬಳಿಕವೂ ತಮ್ಮ ಫಿಟ್ನೆಸ್ ಕಾಪಾಡಿಕೊಂಡಿದ್ದು, ತೆಳ್ಳಗೆ ಬೆಳ್ಳಗಾಗಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಮಗುವಾದ ಬಳಿಕ ಅವಿವಾ ಮತ್ತಷ್ಟು ಯಂಗ್ ಹಾಗೂ ಮತ್ತಷ್ಟು ಸ್ಲಿಮ್ ಆಗಿದ್ದಾರೆ. 
 

click me!

Recommended Stories