‘ಸೂಪರ್ ಮಚ್ಚಿ’ ಚಿತ್ರದ ಶೂಟಿಂಗ್ ಆರಂಭಿಸಿದ ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್, ಹೈದರಾಬಾದ್‌ಗೆ ತೆರಳಿದ್ದಾರೆ. ಶೂಟಿಂಗ್ ಮುಗಿಸಿ ಬಂದ ಮೇಲೆ ತಮ್ಮ ಮನೆಯ ಕೆಳಗಿರುವ ರೂಂನಲ್ಲಿ 14 ದಿನಗಳ ಕಾಲ ಸೆಲ್ಫ್ಕ್ವಾರಂಟೈನ್ ಆಗುತ್ತಾರಂತೆ ಈ ನಟಿ.
ಈಗಾಗಲೇ ಐದು ದಿನಗಳ ಚಿತ್ರೀಕರಣ ಮುಗಿಸಿದ ಈ ನಟಿಗೆ ಶೂಟಿಂಗ್ ಸೆಟ್‌ನಲ್ಲಿ ಅಂಥದ್ದೇನೂ ಭಯ ಕಾಣಿಸಿಕೊಂಡಿಲ್ಲವಂತೆ. ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ, ಎನ್ನುತ್ತಾರೆ ಈ ನಟಿ.
ಚಿತ್ರೀಕರಣ ಆರಂಭವಾಗುವ ಮುನ್ನ ಇಡೀ ಶೂಟಿಂಗ್ ಸೆಟ್‌ಗೆ ಸ್ಯಾನಿಟೈಸರ್ ಮಾಡಿಸಲಾಗುತ್ತಿದೆ. ಸೆಟ್‌ನಲ್ಲಿ ಪಿಪಿ ಕಿಟ್‌ಗಳನ್ನು ಕೊಟ್ಟಿದ್ದಾರೆ. ತೆರೆ ಹಿಂದೆ ಕೆಲಸ ಮಾಡುವವರು ಶೂಟಿಂಗ್ ಮುಗಿಯುವ ತನಕ ಫೇಸ್ ಮಾಸ್ಕ್ ತೆಗೆಯುವಂತಿಲ್ಲ. ಏನೇ ಹೇಳಬೇಕು ಅಂದರೂ 10 ಮೀಟರ್ ದೂರದಲ್ಲಿ ನಿಂತು ಹೇಳಬೇಕು, ಸೆಟ್‌ನಲ್ಲಿ ಕೇವಲ 20 ಜನ ಮಾತ್ರ ಇದ್ದೇವೆ. ಸೆಟ್‌ಗೆ ಪ್ರವೇಶ ಮಾಡುವ ಮುನ್ನ ಎಲ್ಲರಿಗೂ ಥರ್ಮಲ್ ಸ್ಕಾ್ಯನ್ ಮಾಡಲಾಗುತ್ತಿದೆ, ಎನ್ನುತ್ತಾರೆ ಬುಲ್ ಬುಲ್.
ಕೇವಲ ಶೇ.10ರಷ್ಟು ಚಿತ್ರೀಕರಣ ಬಾಕಿ ಇದ್ದು, ಮುಗಿಸಬೇಕಾದ ಅನಿವಾರ್ಯತೆ ಇರುವುದರಿಂದ ಶೂಟಿಂಗ್ ಸಹ ಅನಿವಾರ್ಯವಾಗಿತ್ತು ಎನ್ನುತ್ತಾರೆ ಸೀತಾರಾಮ ಕಲ್ಯಾಣದ ಹೀರೋಯಿನ್.
ಸಿನಿಮಾ ಮೇಲಿನ ಪ್ರೀತಿ ಹಾಗೂ ನಿರ್ಮಾಪಕರು ಭರವಸೆ ಕೊಟ್ಟು, ಮನವಿ ಮಾಡಿಕೊಂಡಿದ್ದಕ್ಕೆ ಧೈರ್ಯವಾಗಿ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರಂತೆ.
ಕೊರೋನಾ ಮನೆಯಲ್ಲಿಯೇ ಇದ್ದರೂ ಬರುವ ಸಾಧ್ಯತೆ ಇದೆ. ಅಗತ್ಯವಿರುವಷ್ಟು ಸಾಮಾಜಿಕ ಅಂತರ ಕಾಯ್ದುಕೊಂಡು, ಶೂಟಿಂಗ್ ಮಾಡೋದು ಸೇಫ್ ಎನ್ನುವುದು ಈ ನಟಿಯ ಅಭಿಮತ.
ಇಲ್ಲಿಯವರೆಗೂ ಅಂಥಾ ಯಾವುದೇ ರೀತಿಯ ಕ್ಲೋಸಪ್ ದೃಶ್ಯಗಳ ಚಿತ್ರೀಕರಣ ಸರದಿ ಬಂದಿಲ್ಲ. ಒಂದು ವೇಳೆ ಕತೆಗೆ ಅಗತ್ಯ ಇದೆ, ನಾಯಕ- ನಾಯಕಿ ನಡುವಿನ ರೊಮ್ಯಾಂಟಿಕ್ ದೃಶ್ಯ ಅಥವಾ ಪೋಷಕ ಪಾತ್ರಗಳ ಜತೆಗಿನ ನನ್ನ ಪಾತ್ರ ಕ್ಲೋಸಪ್‌ನಲ್ಲಿ ಚಿತ್ರೀಕರಣ ಮಾಡಬೇಕು ಎನ್ನುವುದಾದರೆ ನಾನು ಸಿದ್ಧ, ಎನ್ನುತ್ತಾರೆ ಜಗ್ಗು ದಾದಾ ನಾಯಕಿ.
ರಚಿತಾಗೆ ರೊಮ್ಯಾಂಟಿಕ್ ಅಥವಾ ಕ್ಲೋಸಪ್ ದೃಶ್ಯಗಳಲ್ಲಿ ಪಾಲ್ಗೊಳ್ಳಲು ಭಯ ಇಲ್ವಂತೆ. ಆದರೆ, ಬೇರೆ ಕಲಾವಿದರು ತಯಾರಿದ್ದಾರೆಯೇ ಎಂಬುವುದು ಗೊತ್ತಿಲ್ಲ.
ಇನ್ನೂ ಐದಾರು ದಿನಗಳ ಚಿತ್ರೀಕರಣ ಇದೆ. ಬೆಂಗಳೂರಿನಲ್ಲೂ ಎರಡು ದಿನ ಶೂಟಿಂಗ್ ಇದೆ. ಹೀಗಾಗಿ ರೊಮ್ಯಾಂಟಿಕ್ ಅಥವಾ ಕ್ಲೋಸಪ್ ದೃಶ್ಯಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ನಿರ್ದೇಶಕರ ಮೇಲೆ ನಿಂತಿದೆ.
ಕಲಾವಿದೆಯಾಗಿ ರಚಿತಾ ಎಂಥ ರಿಸ್ಕ್ ತೆಗೆದುಕೊಳ್ಳಲೂ ಸಿದ್ಧರಂತೆ. ಇದೇ ಅಲ್ಲವೇ professionalism ಎನ್ನುವುದು.ರಿಸ್ಕ್, ಫೈಟ್ ಇಲ್ಲದೆ ಬದುಕಲು ಆಗಲ್ಲ. ಆದರೆ, ಬೇರೆಯವರ ಆರೋಗ್ಯ ದೃಷ್ಟಿಯಿಂದ ಮುನ್ನೆಚ್ಚರಿಕೆಗಳು ಅಗತ್ಯವೆನ್ನುತ್ತಾರೆ, ಸ್ಯಾಂಡಲ್‌ವುಡ್ 'ಬಜಾರಿ'.
ಲಾಕ್‌ಡೌನ್ ನಂತರ ಶೂಟಿಂಗ್‌ನಲ್ಲಿ ಕೆಲವೇ ಕೆಲವೇ ಮಂದಿ ಇರುತ್ತಾರಂತೆ. ಮೊದಲು ಇರುತ್ತಿದ್ದ ಸಂಭ್ರಮದ ವಾತಾವರಣ ಇದೀಗ ಮರೆಯಾಗಿದೆ, ಕೆಲಸವೇನೂ ಕಡಿಮೆಯಾಗಿಲ್ಲ.ಮೇಕಪ್ ಸಹ ನಟರೇ ಮಾಡಿಕೊಳ್ಳಬೇಕಂತೆ. ತೀರಾ ಅಗತ್ಯ ಇದ್ದಾಗ ಮೇಕಪ್ ಆರ್ಟಿಸ್ಟ್ ಅಲ್ಲೇ ಇರುತ್ತಾರೆ. ಸಂಭ್ರಮ ಕಡಿಮೆ ಆಗಿದೆ. ಆದರೆ, ಕೆಲಸ ಕಡಿಮೆ ಆಗಿಲ್ಲ, ಎನ್ನುತ್ತಾರೆ.
ಮೆಗಾಸ್ಟಾರ್ ಚಿರಂಜೀವಿ ಅವರ ಅಳಿಯ ಕಲ್ಯಾಣ್ ದೇವ್ ಅವರು ಜೊತೆ ರಚಿತಾ ಸೂಪರ್ ಮಚ್ಚಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.