ಸಾಮಾನ್ಯ ಜನರಂತೆ ಸೆಲಬ್ರೆಟಿಗಳು ಸೆಲ್ಫ್ ಕ್ವಾರೆಂಟೈನ್‌ನಲ್ಲಿದ್ದಾರೆ. ಕನ್ನಡ ಚಲನಚಿತ್ರೋದ್ಯಮವು ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು ಮನೆಯಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಅವರು ಮಕ್ಕಳು ಹಾಗೂ ಫ್ಯಾಮಿಲಿ ಜೊತೆ ಮನೆಗೆಲಸ, ಅಡುಗೆ, ಕ್ಲೀನ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಸ್ಯಾಂಡಲ್‌ವುಡ್ ನಟಿ ಪ್ರಿಯಾಂಕಾ ಉಪೇಂದ್ರ ಅವರು ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದು, ಮಕ್ಕಳಿಗೆ ಮನೆಗೆಲಸ ಕಲಿಸುತ್ತಿದ್ದಾರೆ. ಅವರ ಮಕ್ಕಳು ಅಡುಗೆ ಮತ್ತು ಪಾತ್ರೆ ತೊಳೆಯುವ ಫೋಟೋ ಸೋಶಿಯಲ್ ಮಿಡೀಯಾದಲ್ಲಿ ವೈರಲ್ ಆಗಿದೆ. ತಾಯಿಯ ಜವಾಬ್ದಾರಿ ನಿರ್ವಹಿಸುತ್ತಿರುವ ಪ್ರಿಯಾಂಕಗಳ ಬಗ್ಗೆ ಮೆಚ್ಚುಗೆ ನುಡಿ ಕೇಳಿ ಬರುತ್ತಿದೆ ನೆಟ್ಟಿಗರಿಂದ.