ರಾಜ್‌ಕಿರಣ್ ಚೊಚ್ಚಲ ನಿರ್ದೇಶನದ ಚಿತ್ರ ‘1980’ಯಲ್ಲಿ ಪ್ರಿಯಾಂಕಾ ಉಪೇಂದ್ರ ಕಾದಂಬರಿಕಾರ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
undefined
1980ರಲ್ಲಿ ನಡೆಯುವ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಇದಾಗಿದೆ. ಚಿತ್ರದ ಟೀಸರ್ ಲಾಂಚ್ ವೇಳೆ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, ‘ಕತೆ, ಪಾತ್ರದಲ್ಲಿ ಹೊಸತನ ಇರಬೇಕು ಅಂತ ಬಯಸುವವಳು ನಾನು ಎಂದಿದ್ದಾರೆ.
undefined
ಈ ಚಿತ್ರದಲ್ಲಿ ಒಬ್ಬ ಕಾದಂಬರಿಕಾರ್ತಿಯಾಗಿ 1980ನೇ ಕಾಲಘಟ್ಟವನ್ನು ಪ್ರತಿನಿಧಿಸುತ್ತೇನೆ. ನನ್ನ ಉಡುಗೆ, ಮ್ಯಾನರಿಸಂಗಳೆಲ್ಲ ಆ ಹಿನ್ನೆಲೆಯಲ್ಲೇ ಬಂದಿವೆ’ ಎಂದರು.
undefined
ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
undefined
ಶರಣ್ಯ ಶೆಟ್ಟಿ, ಶಂಕರ್ ಅಶ್ವತ್ಥ್, ರಮೇಶ್ ಪಂಡಿತ್ ಮತ್ತಿತರರು ನಟಿಸಿದ್ದಾರೆ.
undefined
ಆರ್‌ಕೆ ಪ್ರೊಡಕ್ಷನ್ಸ್ ಪೂಜಶ್ರೀ ಪ್ರೊಡಕ್ಷನ್ ಬಂಡವಾಳ ಹೂಡಿವೆ.
undefined