ನಿರ್ದೇಶಕ ಪವನ್ ಒಡೆಯರ್ ಹಾಗೂ ಪತ್ನಿ ಅಪೇಕ್ಷಾ ಪುತ್ರನ ನಾಮಕರಣ ಮಾಡಿದ್ದಾರೆ.
ಪವನ್ ಪ್ರತಿ ವಿಚಾರದಲ್ಲೂ ತುಂಬಾನೇ ಕ್ರಿಯೇಟಿವ್, ಪುತ್ರನಿಗೆ ಮಾಡಿಸಿರುವ ತೊಟ್ಟಿಲು ಅಲಂಕಾರ ಹೆಚ್ಚಿನ ಗಮನ ಸೆಳೆದಿದೆ.
ವಿಡಿಯೋ ರಿಲೀಸ್ ಮಾಡುವ ಮೂಲಕ ಪುತ್ರನ ಹೆಸರು ಶೌರ್ಯ ಎಂದು ರಿವೀಲ್ ಮಾಡಿದ್ದಾರೆ.
ಡಿಸೆಂಬರ್ 10ರಂದು ಜನಿಸಿದ ಶೌರ್ಯ ಈಗಾಗಲೇ ಸ್ಟಾರ್ ಕಿಡ್ ಪಟ್ಟದಲ್ಲಿದ್ದಾನೆ.
ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಾಗೂ ಕಲಾ ಬಂಧುಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ನಾಮಕರಣ ಕಾರ್ಯಕ್ರಮದಲ್ಲಿ ಆಪ್ತರು ಮಾತ್ರ ಭಾಗಿಯಾಗಿದ್ದರು.
ಪವನ್ ಪುತ್ರನನ್ನು ಮುದ್ದಾಡುತ್ತಿರುವ ಫೋಟೋ ತುಂಬಾನೇ ಸ್ಪೆಷಲ್ ಆಗಿದೆ.
Suvarna News