ತುಂಡುಡುಗೆ ತೊಟ್ಟು ಬಾಲಿಯಲ್ಲಿ ಮೋಜು ಮಸ್ತಿ ಮಾಡಿದ ಕಿರಿಕ್ ಬಾಲೆ ಸಂಯುಕ್ತಾ

Published : Jul 19, 2024, 04:11 PM IST

ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತಾ ಹೆಗ್ಡೆ ತುಂಡುಡುಗೆ ತೊಟ್ಟು ಬಾಲಿಯಲ್ಲಿ ಸಖತ್ ಎಂಜಾಯ್ ಮಾಡ್ತಿದ್ದು ಫೋಟೋಗಳನ್ನು ಶೇರ್ ಮಾಡಿದ್ದಾರೆ.   

PREV
17
ತುಂಡುಡುಗೆ ತೊಟ್ಟು ಬಾಲಿಯಲ್ಲಿ ಮೋಜು ಮಸ್ತಿ ಮಾಡಿದ ಕಿರಿಕ್ ಬಾಲೆ ಸಂಯುಕ್ತಾ

ಕಿರಿಕ್ ಪಾರ್ಟಿ ಮೂಲಕ ಮೋಡಿ ಮಾಡಿದ ಬೆಡಗಿ ಸಂಯುಕ್ತಾ ಹೆಗ್ಡೆ (Samyuktha Hegde) ಯಾವಾಗ್ಲೂ ತಮ್ಮ ಬೋಲ್ಡ್ ಅವತಾರಗಳಿಂದ ಸದ್ದು ಮಾಡ್ತಿರ್ತಾರೆ. ಇದೀಗ ಮತ್ತೊಮ್ಮೆ ತುಂಡುಡುಗೆಯಲ್ಲಿ ಪೋಸ್ ಕೊಟ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

27

ಸಂಯುಕ್ತಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಬಾಲಿ ಫೋಟೋಗಳನ್ನ (Bali travel photo) ಶೇರ್ ಮಾಡಿದ್ದು, ತಮ್ಮ ಸೂಟ್ ಕೇಸ್ ಫುಲ್ ಕ್ಯೂಟೆಸ್ಟ್ ಬಟ್ಟೆಗಳೇ ಇದ್ದವು ಎಂದು ಹೇಳುತ್ತಾ ಮಿನಿ ಡ್ರೆಸ್ಸಿನಲ್ಲಿ ಮಿಂಚಿದ ಫೋಟೋಗಳನ್ನು ಶೇರ್ ಮಾಡಿದ್ದಾರೆ. 
 

37

ಕೆಲವು ದಿನಗಳ ಹಿಂದಷ್ಟೇ ಸಂಯುಕ್ತಾ ಬಾಲಿಗೆ ಸೋಲೋ ಟ್ರಿಪ್ ಮಾಡಿ ಬಂದಿದ್ದು, ವಾರಗಳಿಂದ ಅಲ್ಲಿನ ತಾವು ಮಾಡಿರೋ ಮೋಜು, ಮಸ್ತಿ ಯೋಗಗಳ ಫೋಟೋಗಳನ್ನ ಶೇರ್ ಮಾಡಿದ್ದಾರೆ. 
 

47

ಅದರ ಜೊತೆಗೆ ಇದೀಗ ಅಲ್ಲಿ ತಾವು ಯಾವೆಲ್ಲಾ ಉಡುಗೆಯಲ್ಲಿ ಮಿಂಚಿದ್ದಾರೆ ಅನ್ನೋದನ್ನ ತೋರಿಸೋದಕ್ಕೆಂದೇ ಇನ್‌ಸ್ಟಾಗ್ರಾಂ ಪೋಸ್ಟ್ ಮಾಡಿದ್ದು, ಮಿನಿ ಸ್ಕರ್ಟ್, ಕ್ರಾಪ್ ಟಾಪ್, ಮಿನಿ ಡ್ರೆಸಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. 
 

57

ಈ ಮುದ್ದಾದ ಉಡುಗೆಗಳಿಂದಲೇ ಬಾಲಿ ಟ್ರಿಪ್ (Bali Trip) ಮತ್ತಷ್ಟು ಎಕ್ಸೈಟ್‌ಮೆಂಟ್ ಆಗಿದ್ದು ಎಂದಿರುವ ಸಂಯುಕ್ತಾ ಫೋಟೋಗಳಿಗೆ ಅಭಿಮಾನಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಸ್ಟೈಲ್ ತುಂಬಾ ಚೆನ್ನಾಗಿದೆ, ಸೆಕ್ಸಿ, ಹಾಟಿ, ಬ್ಯೂಟಿಫುಲ್, ಗಾರ್ಜಿಯಸ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

67

ತಮ್ಮ ಕಿರಿಕ್ ಸ್ವಭಾವದಿಂದಲೇ ಸದಾ ಸುದ್ದಿಯಲ್ಲಿರುವ ಸಂಯುಕ್ತಾ ಹೆಗ್ಡೆ ಎಂಟಿವಿ ರೋಡೀಸ್ 15 (MTV roadies 15) , ಬಿಗ್ ಬಾಸ್ ಕನ್ನಡ ಸೀಸನ್ 5, ಎಂಟಿವಿ, ಸ್ಪ್ಲಿಟ್ ವಿಲ್ಲಾ 11, ಪಂಚ್ ಬೀಟ್ 2 ಮೊದಲಾದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸೋ ಮೂಲಕ ದೇಶಾದ್ಯಂತ ಪ್ರಸಿದ್ಧಿ ಪಡೆದರು. 
 

77

ಇನ್ನು ಕಿರಿಕ್ ಪಾರ್ಟಿ (Kirik Party) ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಂಯುಕ್ತಾ, ತೆಲುಗು, ತಮಿಳು ಸೇರಿ, ಹತ್ತು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಎರಡು ವರ್ಷಗಳ ಬಳಿಕ ಕ್ರೀಂ ಚಿತ್ರದಲ್ಲಿ ನಟಿಸುತ್ತಿದ್ದು, ಅದರಲ್ಲಿ ವೇಶ್ಯೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸಂಯುಕ್ತಾ ಒಳ್ಳೆಯ ಡ್ಯಾನ್ಸರ್, ಜಿಮ್ನಾಸ್ಟಿಕ್ ಪ್ಲೇಯರ್, ಯೋಗಪಟು ಕೂಡ ಹೌದು. 
 

Read more Photos on
click me!

Recommended Stories