ಅಡಿಯಿಂದ ಮುಡಿವೆರಗೂ ಪಿಂಕ್ ಬ್ಯೂಟಿಯಾದ ಅನು ಸಿರಿಮನೆ: ಲಿಪ್‌ಸ್ಟಿಕ್ ಸ್ವಲ್ಪ ಜಾಸ್ತಿ ಆಯ್ತೆಂದ ಫ್ಯಾನ್ಸ್

First Published | Aug 14, 2024, 8:51 PM IST

ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಆಗಾಗ ರೀಲ್ಸ್‌ ಮಾಡುವುದರ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಅಷ್ಟೇ ಅಲ್ಲದೇ ಹಲವು ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದು, ಇದೀಗ ಹೊಸ ಫೋಟೋಸ್ ಶೇರ್ ಮಾಡಿದ್ದಾರೆ.

ಕನ್ನಡ ಕಿರುತೆರೆ ಧಾರಾವಾಹಿ ಮೂಲಕ ಮನೆ ಮಾತಾಗಿರುವ 'ಅನು ಸಿರಿಮನೆ' ಎಂದೇ ಖ್ಯಾತರಾದ ನಟಿ ಮೇಘಾ ಶೆಟ್ಟಿ ಹಾಟ್ ಫೋಟೋ, ಫಿಟ್ನೆಸ್ ವಿಡಿಯೋ ಮೂಲಕ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಮೇಘಾ ಶೆಟ್ಟಿ ಇದೀಗ ಪಿಂಕ್ ಸೀರೆ ಲುಕ್‌ನಲ್ಲಿ ಅಭಿಮಾನಿಗಳ ಮುಂದೆ ಪ್ರತ್ಯಕ್ಷವಾಗಿದ್ದಾರೆ. ಜೊತೆಗೆ ಅವರು ತೊಟ್ಟ ಚಿನ್ನದ ಬಣ್ಣದ ಸ್ಲೀವ್‌ಲೇಸ್ ಬ್ಲೌಸ್‌, ಮುಡಿಗೆ ಮುಡಿದ ಗುಲಾಬಿ ಹೂ, ಅವರ ಮೇಕಪ್‌ ಸಖತ್ ಹೈಲೈಟ್ ಆಗಿದೆ.

Tap to resize

ಮೇಘಾ ಶೆಟ್ಟಿ ಪೋಸ್ಟ್‌ಗೆ 10 ಸಾವಿರಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ. ನೂರಾರು ಕಾಮೆಂಟ್‌ಗಳು ಬಂದಿವೆ. ಅನು ಬಂಗಾರ, ಮನದ ಅರಸಿ, ಸೌಂದರ್ಯದ ಅಪ್ಸರೆ, ಲಿಪ್‌ಸ್ಟಿಕ್ ಸ್ವಲ್ಪ ಜಾಸ್ತಿಯಾಯ್ತು ಅಂತೆಲ್ಲ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
 

ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ಮೇಘಾ ಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್ ಜತೆ ತ್ರಿಬಲ್ ರೈಡಿಂಗ್, ಡಾಲಿಂಗ್ ಕೃಷ್ಣ ಜೊತೆ ದಿಲ್ ಪಸಂದ್, ಧನ್ವಿರ್ ಜತೆ ಕೈವ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಪ್ರಜ್ವಲ್ ದೇವರಾಜ್ ನಟನೆಯ ಚೀತಾ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.
 

ಹಲವು ವರ್ಷಗಳ ಕಾಲ ಸಿನಿ ಪ್ರೇಕ್ಷಕರನ್ನು ರಂಜಿಸಿರುವ ಮೇಘಾ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಇವರ ನಟನೆಗೆ ಫ್ಯಾನ್ಸ್‌ ಸಖತ್ ಫಿದಾ ಆಗಿದ್ದರು. ಇತ್ತೀಚೆಗೆ ಮೇಘಾ ಮರಾಠಿ ಭಾಷೆಗೂ ಎಂಟ್ರಿ ಕೊಟ್ಟಿದ್ದಾರೆ.

ಸಿನಿಮಾ, ನಟನೆ, ಜಾಹೀರಾತು ಜೊತೆಗೆ ಆಗಾಗ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿರುವ ಮೇಘಾ ಇತ್ತೀಚೆಗೆ ಜಿಮ್‌ನಲ್ಲಿ ಬೆವರಿಳಿಸುವ ಫೋಟೋಗಳನ್ನು ಹಂಚಿಕೊಂಡಿದ್ದರು.
 

Latest Videos

click me!