ನನ್ನ ಇಷ್ಟು ವರ್ಷಗಳ ವೃತ್ತಿ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಎರಡು ತಿಂಗಳು ಬ್ರೇಕ್ ತೆಗೆದುಕೊಂಡಿದ್ದೇನೆ. ‘ತಲ್ವಾರ್ ಪೇಟೆ’ ಕನ್ನಡ ಸಿನಿಮಾ, ಇದರ ಜೊತೆಗೆ ತೆಲುಗು, ತಮಿಳು ಸಿನಿಮಾಗಳ ಒಂದಿಷ್ಟು ಕೆಲಸ ಪೆಂಡಿಂಗ್ ಇದೆ. ಅದನ್ನೆಲ್ಲ ಶೀಘ್ರ ಮುಗಿಸಬೇಕು. ಬ್ರೇಕ್ ಬಳಿಕ ಹೊಸ ಸಿನಿಮಾಗಳ ಕೆಲಸ ಶುರು ಹಚ್ಚಿಕೊಳ್ಳುತ್ತೇನೆ.