ಜೇನಸ್ ಅನ್ನೋ ಗ್ರೀಕ್ ದೇವರಿಗೆ ಎರಡು ಮುಖ ಇದೆ. ಒಂದು ಮುಖ ಕಳೆದು ಹೋದ ವರ್ಷವನ್ನು ಇನ್ನೊಂದು ಮುಖ ಮುಂಬರುವ ವರ್ಷವನ್ನು ಪ್ರತಿನಿಧಿಸುತ್ತದೆ. ಈ ಮುಖಗಳಲ್ಲಿ ಒಂದು ನಗು ಮುಖ. ಇನ್ನೊಂದು ಉರಿ ಮುಖ, ಅಪನಂಬಿಕೆ ಹುಟ್ಟಿಸುವ ಮುಖ.
ನಾವು ಜನವರಿ ತಿಂಗಳಲ್ಲಿ ನಗುವ ಮುಖವನ್ನೇ ಆರಿಸಿಕೊಳ್ಳೋಣ. ನಮಗೆ ಏನೋ ಮಾಡಬೇಕು ಅನ್ನೋದಿರುತ್ತೆ. ನಗುವ ಮುಖ ಇದು ನಿನ್ನಿಂದಾಗುತ್ತೆ ಅನ್ನುತ್ತಿರುತ್ತೆ, ಉರಿ ಮುಖ ನಿನ್ನಿಂದಾಗಲ್ಲ ಅಂತ ಹೇಳುತ್ತೆ.
ನಾವು ಆಗುತ್ತೆ ಅಂದುಕೊಂಡು ನಗು ನಗುತ್ತಲೇ ಕೆಲಸ ಶುರು ಮಾಡೋಣ. ಫೆಬ್ರವರಿ ಬಿ ಪ್ರಿಪೇರ್ ಅನ್ನುತ್ತೆ. ಈ ತಿಂಗಳಲ್ಲಿ ನಾವು ಫುಲ್ ನಮ್ಮ ಕೆಲಸಕ್ಕೆ ಹೋಂ ವರ್ಕ್ ಮಾಡಿಕೊಳ್ಳೋಣ.
ಅದೇ ರೀತಿ ಮಾರ್ಚ್ ತಿಂಗಳಲ್ಲಿ ನುಗ್ಗಿ ಮುನ್ನಡೆಯೋಣ. ಕೆಲಸ ಶುರು ಮಾಡೋಣ. ಹೀಗೆ ಹನ್ನೆರಡು ತಿಂಗಳಿಗೂ ಒಂದೊಂದು ರೆಸೊಲ್ಯೂಶನ್ ಮಾಡಿಕೊಳ್ಳೋಣ. ಲೈಫ್ ಬೊಂಬಾಟ್ ಆಗಿರುತ್ತೆ.
ಇಂಥದ್ದೊಂದು ರೆಸೊಲ್ಯೂಶನ್ ಮಾಡಿದರೆ ಇಡೀ ವರ್ಷ ಬಹಳ ಪ್ರೊಡಕ್ಟಿವ್ ಆಗಿರುತ್ತದೆ. ಇನ್ನು ಹೂಡಿಕೆ ವಿಚಾರಕ್ಕೆ ಬಂದರೆ ನಾನು ಇಷ್ಟು ವರ್ಷ ಇನ್‌ವೆಸ್ಟ್‌ಮೆಂಟ್ ಕಡೆ ತಲೆ ಹಾಕಿರಲಿಲ್ಲ. ಈಗ ವೆಲ್ತ್ ಮ್ಯಾನೇಜರ್ ಸಿಕ್ಕಿದ್ದಾರೆ. ನನ್ನ ಮಗಳಿಗೂ ಇದರಲ್ಲಿ ಆಸಕ್ತಿ ಇದೆ. ನನಗೂ ಸಣ್ಣದಾಗಿ ಇಂಟರೆಸ್ಟ್ ಬಂದಿದೆ. ಏನಾದರೂ ಶುರು ಮಾಡಬೇಕು.
ಕೆಲಸದ ವಿಚಾರಕ್ಕೆ ಬಂದರೆ ಈಗಾಗಲೇ ಮೂರು ಸಿನಿಮಾಗಳ ಕೆಲಸ ನಡೀತಿದೆ. ‘ಕೆಡಿ’ ಸಿನಿಮಾ ಕೆಲಸ ಮುಗಿದು, ‘ಯುವರ್ ಸಿನ್ಸಿಯರ್ಲೀ ರಾಮ್’ ಮತ್ತು ‘ದೈಜಿ’ ಕೆಲಸ ನಡೀತಿದೆ. ಇದರಲ್ಲದೇ ನನ್ನ ನಿರ್ದೇಶನದ ಸ್ಕ್ರಿಪ್ಟ್ ಫೈನಲ್ ಆಗಿದೆ. ಆ ಸಿನಿಮಾ ಪ್ರಾಜೆಕ್ಟ್ ಈ ವರ್ಷ ಆರಂಭವಾಗಲಿದೆ.