2024ರಲ್ಲಿ ಯಾರೂ ನೋಡಿರದ ಫೋಟೋಗಳನ್ನು ಹಂಚಿಕೊಂಡ ಮೇಘನಾ ರಾಜ್!

First Published | Jan 1, 2025, 6:50 PM IST

ವೈರಲ್ ಆಯ್ತು ಮೇಘನಾ ರಾಜ್‌ ಅಪರೂಪದ ಫೋಟೋಗಳು. ರಾಯನ್ ತುಂಟತನ ನೋಡಿ ಶಾಕ್ ಆದವರು ಒಬ್ಬಿಬ್ಬರಲ್ಲ.........

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ, ಕರ್ನಾಟಕದ ಮನೆ ಮಗಳು ಹಾಗೂ ಸರ್ಜಾ ಕುಟುಂಬದ ಹಿರಿಯ ಸೊಸೆ ಮೇಘನಾ ರಾಜ್‌ ಸರ್ಜಾ. 

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೇಘನಾ ರಾಜ್ ತಮ್ಮ ಜೀವನದ ಪ್ರತಿಯೊಂದು ಅದ್ಭುತ ಕ್ಷಣಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದರು. ಆದರೆ ಕೆಲವೊಂದು ಫೋಟೋಗಳನ್ನು ಅಪ್ಲೋಡ್ ಮಾಡಿರಲಿಲ್ಲ.

Tap to resize

ಹೀಗಾಗಿ 2024ರಲ್ಲಿ ಮೇಘನಾ ರಾಜ್ ಇದುವರೆಗೂ ಯಾರೂ ನೋಡಿರದ ಫ್ಯಾಮಿಲಿ ಫೋಟೋ, ಫ್ರೆಂಡ್ಸ್ ಜೊತೆಗಿರುವ ಫೋಟೋ ಹಾಗೂ ಟ್ರಿಪ್ ಹೋಗಿರುವ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

 '2024 ವರ್ಷ ನನಗೆ ತುಂಬಾ ಕೈಂಡ್ ಆಗಿದೆ..ಈ ವರ್ಷ ನಡೆದಿರುವ ಅದೆಷ್ಟೋ ಘಟನೆಗಳಿಗೆ ನಾನು ಋಣಿಯಾಗಿರುತ್ತೀನಿ. ಪ್ರಮುಖವಾಗಿ ನನ್ನ ಶಕ್ತಿ ಆಗಿ ನಿಂತಿದ್ದು ನನ್ನ ಫ್ಯಾಮಿಲಿ' ಎಂದು ಮೇಘನಾ ಬರೆದುಕೊಂಡಿದ್ದಾರೆ.

'ನನ್ನ ಸಪೋರ್ಟ್‌ ಸಿಸ್ಟಮ್ ಮತ್ತು ಗಾರ್ಡಿಯನ್ ಏಂಜಲ್‌ ನನ್ನ ಗಂಡ ಚಿರು. ಒಳ್ಳೆ ಸೂರು ಇರುವ ಮನೆಯಲ್ಲಿ ವಾಸಿಸುತ್ತಿರುವುದಕ್ಕೆ ಪುಣ್ಯ ಮಾಡಿದ್ದೆ. ಏನೇ ಸಮಸ್ಯೆ ಎದುರಾದರೂ ನನ್ನ ಪರ ಸ್ನೇಹಿತರು ನಿಂತಿದ್ದಾರೆ'

'ಒಳ್ಳೆ ಕೆಲಸಗಳು ನನ್ನನ್ನು ಹುಡುಕಿಕೊಂಡು ಬಂದು ನನಗೆ ಸಿಕ್ಕಿರುವುದಕ್ಕೆ ಪುಣ್ಯ ಮಾಡಿದ್ದೆ.ಈ ಅವಕಾಶಗಳು ನಾನು ಬೆಳೆಯುವುದಕ್ಕೆ ಸಹಾಯ ಮಾಡಿದೆ. ಆರ್ಥಿಕವಾಗಿ'

'ಪ್ರತಿ ದಿನ ನನ್ನ ತಟ್ಟೆಯಲ್ಲಿ ಊಟ ಇರುವುದಕ್ಕೆ ಪುಣ್ಯ ಮಾಡಿದ್ದೆ. ಈ ವರ್ಷದ ಜರ್ನಿಯಲ್ಲಿ ನನ್ನನ್ನು ಸಪೋರ್ಟ್ ಮಾಡಿರುವ ಅಭಿಮಾನಿಗಳಿಗೆ ವಂದನೆಗಳು'

'ನನಗೆ ಬೇಕಿರುವ ಶಕ್ತಿಯನ್ನು 2024 ಕೊಟ್ಟಿದ್ದಕ್ಕೆ ನಾನು ತುಂಬಾ ಪುಣ್ಯ ಮಾಡಿದ್ದೆ. ಹೀಗಾಗಿ ಥ್ಯಾಂಕ್‌ ಯು 2024' ಎಂದು ಮೇಘನಾ ರಾಜ್ ಹೇಳಿದ್ದಾರೆ.

Latest Videos

click me!