ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇನ್ನು ಇತರರಿಗೆ ಸಿಕ್ಕ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸುತ್ತಲೇ ಎಲ್ಲರ ಅರೆಸ್ಟ್ ಆಗಿದೆ. ಇದೇ ವೇಳೆ ಕೋಡಿಮಠದ ಶ್ರೀಗಳ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು : ರೇಣುಕಾಸ್ವಾಮಿ ಭೀಕರ ಕೊ*ಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗಿದ್ದ ಪ್ರಮುಖ ಆರೋಪಿ ನಟ ದರ್ಶನ್ ಜಾಮೀನು ರದ್ದಾಗಿರೋ ಹಿನ್ನೆಲೆಯಲ್ಲಿ, ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇವರ ಜೊತೆ, ಎ1 ಆರೋಪಿ ಪವಿತ್ರಾ ಗೌಡ ಕೂಡ ಅರೆಸ್ಟ್ ಆಗಿದ್ದಾರೆ. ಜಾಮೀನು ರದ್ದಾಗುತ್ತಿದ್ದಂತೆಯೇ ದರ್ಶನ್ ಅವರು ಎಸ್ಕೇಪ್ ಆಗಿದ್ದರು. ಅವರನ್ನು ಬಂಧಿಸಲು ನೈಸ್ ರೋಡ್ ಬಳಿ ಪೊಲೀಸರು ಕಾದಿದ್ದರು.
27
ಪತ್ನಿಯ ಮನೆಯಲ್ಲಿ ಅವಿತಿದ್ದ ದರ್ಶನ್
ಆದರೆ ದರ್ಶನ್ ಪೊಲೀಸರ ಕಣ್ಣು ತಪ್ಪಿಸಿದ್ದರು. ಟೋಲ್ ಗೇಟ್ ಬಳಿಯೇ ಜೀಪ್ ಹಾಕಿಕೊಂಡು ಪೊಲೀಸರು ಕಾಯುತ್ತಿದ್ದರು. ಆದರೆ ದರ್ಶನ್ ಪೊಲೀಸರ ಕಣ್ಣು ತಪ್ಪಿಸಿ ಹೊಸಕರೆ ಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ಮನೆ ಸೇರಿದ್ದರು. ಕೊನೆಗೆ ಪತ್ನಿ ಮನೆಯಿಂದಲೇ ಪೊಲೀಸರು ದರ್ಶನ್ ಅವರನ್ನು ಅರೆಸ್ಟ್ ಮಾಡಿದ್ದಾರೆ. ಪ್ರಕರಣದಲ್ಲಿ ಈವರೆಗೆ ಬೆಂಗಳೂರಿನಲ್ಲಿ ಐದು ಜನರ ಬಂಧನವಾಗಿದೆ, ಮತ್ತಿಬ್ಬರ ಬಂಧನಕ್ಕೆ ಬೆಂಗಳೂರು ಪೊಲೀಸರು ಚಿತ್ರದುರ್ಗಕ್ಕೆ ತೆರಳಿದ್ದಾರೆ.
37
ಕೋಡಿಶ್ರೀ ಹೇಳಿದ್ದೇನು?
ಇದರ ನಡುವೆಯೇ, ಹಾಸನದ ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ಮಹಾ ಸ್ವಾಮೀಜಿಗಳು ಅರ್ಥಾತ್ ಕೋಡಿಶ್ರೀ ನುಡಿದಿರುವ ಭವಿಷ್ಯವಾಣಿಯೊಂದು ಇದೀಗ ಮತ್ತೆ ವೈರಲ್ ಆಗುತ್ತಿದೆ. ದರ್ಶನ್ ಅವರಿಗೆ ಜಾಮೀನು ಸಿಕ್ಕ ಸಂದರ್ಭದಲ್ಲಿ ಸ್ವಾಮೀಜಿ ಈ ಭವಿಷ್ಯವನ್ನು ನುಡಿದಿದ್ದರು. ದೇಶದ ಬಗ್ಗೆ, ಕರ್ನಾಟಕ ಸರ್ಕಾರದ ಬಗ್ಗೆ ಹೇಳುತ್ತಲೇ ದರ್ಶನ್ ಕುರಿತೂ ಸ್ವಾಮೀಜಿ ಹೇಳಿದ್ದರು. ಮಹಾಭಾರತದಲ್ಲಿ ಶ್ರೀ ಕೃಷ್ಣ ಇದ್ದ, ಹೀಗಾಗಿ ಭೀಮ ಗೆದ್ದ. ಈಗ ಶ್ರೀ ಕೃಷ್ಣ ಇಲ್ಲ ದುರ್ಯೋಧನ ಗೆಲ್ಲುತ್ತಾನೆ. ಆದರೆ, ಅದು ಕ್ಷಣಿಕ ಪಾಪದ ಪಾಷಣ ಕಳೆದ ಮೇಲೆ, ಪಾಪ ಮಾಡಿದವ ಶಿಕ್ಷೆ ಅನುಭವಿಸಲೇಬೇಕು ಎಂದಿದ್ದರು.
47
ಜೈಲಿನಿಂದ ಹೊರಬರುತ್ತಲೇ ಭವಿಷ್ಯವಾಣಿ
ದರ್ಶನ್, ಪವಿತ್ರಾ ಗೌಡ ಸೇರಿದಂತೆ ಕೆಲವರಿಗೆ ಜಾಮೀನು ಸಿಕ್ಕು ಹೊರಕ್ಕೆ ಬಂದ ಮೇಲೆ, ಅವರು ಮತ್ತೆ ಜೈಲು ಸೇರುವುದು ನಿಶ್ಚಿತ ಎನ್ನುವ ಅರ್ಥದಲ್ಲಿ ಕೋಡಿಶ್ರೀ ಹೇಳಿದ್ದು, ಅದೀಗ ನಿಜವಾಗಿದೆ. ಅವರು ಹೇಳಿದ್ದೇನೆಂದರೆ, ಮಾಡಿದ ಪಾಪವನ್ನು ಅನುಭವಿಸಲೇಬೇಕು. ಪುಣ್ಯದ ಕೆಲಸ ಮಾಡಲು ಭಯಪಡಬಾರದು, ಜನರು ಅದ್ಯಾಕೋ ಭಯಪಡುತ್ತಿದ್ದಾರೆ, ಪಾಪದ ಪಾಷಾಣ ಕಳೆಯಬೇಕು,ಪಾಪದ ಕೆಲಸ ಮಾಡುವ ಮುಂಚೇಯೇ ಹೆದರಬೇಕಿತ್ತು ಎಂದಿದ್ದರು.
57
ಕೋಡಿಮಠದ ಸ್ವಾಮೀಜಿ ಭವಿಷ್ಯ
ದೊಡ್ಡ ದೊಡ್ಡವರೆಲ್ಲ ಜೈಲಿಗೆ ಹೋಗ್ತಾರೆ ಅಂತ ನಾನು ಈ ಹಿಂದೆಯೇ ಹೇಳಿದ್ದೆ. ಮುಂದೆ ಮತ್ತಷ್ಟು ಗಂಡಾಂತರಗಳು ಕಾದಿದೆ. ಸದ್ಯಕ್ಕೆ ಅವುಗಳನ್ನು ನಾನು ಹೇಳುವುದಿಲ್ಲ ಎಂದು ಕೂಡ ಅವರು ನುಡಿದಿದ್ದರು.
67
ಪತ್ನಿ ಮನೆಯಿಂದ ದರ್ಶನ್ ಬಂಧನ
ಇನ್ನು ದರ್ಶನ್ ಜಾಮೀನಿನ ಕುರಿತು ಲೇಟೆಸ್ಟ್ ವರದಿಗಳ ಪ್ರಕಾರ, ಸದ್ಯ ವಿಜಯಲಕ್ಷ್ಮಿ ನಿವಾಸದಿಂದ ಬಂಧನವಾಗಿರುವ ದರ್ಶನ್ ನನ್ನು ಪೊಲೀಸರು ಅನ್ನಪೂರ್ಣೇಶ್ವರಿ ಠಾಣೆಗೆ ಕರೆತಂದಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳ ನಂತರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಿದ್ದಾರೆ. ಈಗಾಗಲೇ ಎ1 ಆರೋಪಿ ಪವಿತ್ರಾ ಗೌಡ ಪೊಲೀಸ್ ಠಾಣೆಯಲ್ಲಿದ್ದು, ಈಕೆಯ ಜೊತೆಗೆ ಲಕ್ಷ್ಮಣ್, ಪ್ರದೋಷ್, ನಾಗಾರಾಜ್ ಬಂಧನವಾಗಿದೆ.
77
ಚಿತ್ರದುರ್ಗಕ್ಕೆ ಪೊಲೀಸರು
ಚಿತ್ರದುರ್ಗದ ಇಬ್ಬರು ಆರೋಪಿಗಳಾದ ಎ6 ಅನುಕುಮಾರ್, ಎ7 ಜಗದೀಶ್ ಅನ್ನು ವಶಕ್ಕೆ ಪಡೆಯಲು ಕಾಮಾಕ್ಷಿಪಾಳ್ಯ ಠಾಣೆ ಎಸ್ ಐ ವಿನಾಯಕ ನೇತೃತ್ವದ ಟೀಮ್ ಚಿತ್ರದುರ್ಗಕ್ಕೆ ತೆರಳಿದೆ. ಆರೋಪಿಗಳ ಮೆಡಿಕಲ್ ಚೆಕಪ್ ಮಾಡಿಸಲು ವೈದ್ಯರನ್ನು ಪೊಲೀಸರು ಠಾಣೆಗೆ ಕರೆಸಿದ್ದಾರೆ.