ಒಂದೇ ಚಿತ್ರದಲ್ಲಿ ಶಿವಣ್ಣ, ಪ್ರಜ್ವಲ್‌ ದೇವರಾಜ್‌: ನಿರ್ದೇಶಕ ಯಾರು ಗೊತ್ತಾ?

Published : Aug 13, 2025, 05:02 PM IST

ನಟ ಶಿವರಾಜ್‌ಕುಮಾರ್‌ ಹಾಗೂ ಪ್ರಜ್ವಲ್‌ ದೇವರಾಜ್‌ ಜೊತೆಯಾಗಿ ನಟಿಸುವ ಸುದ್ದಿ ಬಂದಿದೆ. ಆರ್ನಾ ಕ್ರಿಯೇಟಿವ್ಸ್‌ ನಿರ್ಮಾಣಕ್ಕೆ ಸಾಥ್‌ ನೀಡುತ್ತಿದೆ.

PREV
15

ನಟ ಶಿವರಾಜ್‌ಕುಮಾರ್‌ ಹಾಗೂ ಪ್ರಜ್ವಲ್‌ ದೇವರಾಜ್‌ ಜೊತೆಯಾಗಿ ನಟಿಸುವ ಸುದ್ದಿ ಬಂದಿದೆ. ಈ ಹೊಸ ಚಿತ್ರವನ್ನು ಪವನ್‌ ಒಡೆಯನ್‌ ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣಕ್ಕೂ ಮುಂದಾಗಿದ್ದಾರೆ.

25

ಪ್ರಮುಖ ಪಾತ್ರಕ್ಕಾಗಿ ಪ್ರಜ್ವಲ್ ದೇವರಾಜ್ ಅವರೊಂದಿಗೆ ನಿರ್ಮಾಪಕರು ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ನಿರ್ದೇಶಕರು ಈಗಾಗಲೇ ಭೇಟಿಯಾಗಿ ಆರಂಭಿಕ ಚರ್ಚೆ ನಡೆಸಿದ್ದಾರೆ.

35

ಆರ್ನಾ ಕ್ರಿಯೇಟಿವ್ಸ್‌ ನಿರ್ಮಾಣಕ್ಕೆ ಸಾಥ್‌ ನೀಡುತ್ತಿದೆ. ಸದ್ಯದಲ್ಲೇ ಈ ಚಿತ್ರಕ್ಕೆ ಶೂಟಿಂಗ್‌ ಪ್ರಾರಂಭವಾಗಲಿದ್ದು, ಚಿತ್ರದ ತಾರಾಗಣ ಹಾಗೂ ತಾಂತ್ರಿಕ ತಂಡವನ್ನು ಇನ್ನಷ್ಟೇ ಬಹಿರಂಗಗೊಳಿಸಬೇಕಿದೆ.

45

ಇನ್ನು ಕರಾವಳಿ ಹಾಗೂ ಗುರುದತ್ತ ಗಾಣಿಗ ನಿರ್ದೇಶನದ ಸಿನಿಮಾ ಹಾಗೂ ಚೀತಾ ಚಿತ್ರದಲ್ಲಿ ಪ್ರಜ್ವಲ್ ನಟಿಸುತ್ತಿದ್ದಾರೆ. ಮತ್ತು ಶಿವಣ್ಣ 45 ಮತ್ತು ಸರ್ವೈವರ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇನ್ನು ರಾಮ್ ಚರಣ್ ಜೊತೆ ಟಾಲಿವುಡ್‌ನ ಪೆದ್ದಿ ಚಿತ್ರೀಕರಣದಲ್ಲೂ ಶಿವಣ್ಣ ತೊಡಗಿಸಿಕೊಂಡಿದ್ದಾರೆ.

55

ಎಲ್ಲವೂ ಅಂದುಕೊಂಡಂತೆ ನಡೆದರೆ, ಪ್ರಜ್ವಲ್ ಹ್ಯಾಟ್ರಿಕ್ ಹೀರೋ ಶಿವಣ್ಣ ಜೊತೆ ಮೊದಲ ಬಾರಿಗೆ ಪರದೆ ಹಂಚಿಕೊಳ್ಳುತ್ತಾರೆ. ಇನ್ನು ಈ ಹೊಸ ಚಿತ್ರವು ಅಪೇಕ್ಷಾ ಪವನ್ ಒಡೆಯರ್ ಮತ್ತು ಪವನ್ ಒಡೆಯರ್ ತಮ್ಮ ಒಡೆಯರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಮೂಡಿಬರಲಿದೆ.

Read more Photos on
click me!

Recommended Stories