ಕಿರೀಟಿ ರೆಡ್ಡಿ'ಜೂನಿಯರ್' ಚಿತ್ರಕ್ಕೆ ಬೆಸ್ಟ್ ಡೆಬ್ಯೂ 'ಸೈಮಾ' ಪ್ರಶಸ್ತಿ; ಅಪ್ಪ ಜನಾರ್ದನ ರೆಡ್ಡಿ ಹೇಳಿದ್ದೇನು?

Published : Nov 15, 2026, 11:10 PM IST

ನಟ ಕಿರೀಟಿ ರೆಡ್ಡಿ ತಮ್ಮ ಚೊಚ್ಚಲ 'ಜೂನಿಯರ್' ಚಿತ್ರಕ್ಕಾಗಿ ಪ್ರತಿಷ್ಠಿತ ಸೈಮಾ ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಪ್ರಶಸ್ತಿ ಸ್ವೀಕರಿಸುವ ಮುನ್ನ ಶಿವಣ್ಣ ದಂಪತಿಯ ಆಶೀರ್ವಾದ ಪಡೆದ ವಿಡಿಯೋ ವೈರಲ್ ಆಗಿದ್ದು, ತಂದೆ ಜನಾರ್ದನ ರೆಡ್ಡಿ ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ.

PREV
15

ಕನ್ನಡ ಚಿತ್ರರಂಗಕ್ಕೆ ಭರ್ಜರಿಯಾಗಿ ಪದಾರ್ಪಣೆ ಮಾಡಿ ಮೊದಲ ಚಿತ್ರದಲ್ಲೇ ಭರವಸೆಯ ನಾಯಕನಾಗಿ ಹೊರಹೊಮ್ಮಿದ್ದ ನಟ ಕಿರೀಟಿ ರೆಡ್ಡಿ (Kireeti Reddy) ಅವರ ಮುಡಿಗೀಗ ಪ್ರತಿಷ್ಠಿತ ಗರಿ ಮೂಡಿದೆ. ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ನಟನೆಯ ಚೊಚ್ಚಲ ಚಿತ್ರ ‘ಜೂನಿಯರ್’ (Junior Movie) ಗಾಗಿ ದೇಶದ ಪ್ರತಿಷ್ಠಿತ ‘ಸೈಮಾ ಅವಾರ್ಡ್ಸ್’ (SIIMA Awards) ಕಾರ್ಯಕ್ರಮದಲ್ಲಿ ‘ಅತ್ಯುತ್ತಮ ಚೊಚ್ಚಲ ನಟ’ (Best Debutant Actor - Kannada) ಪ್ರಶಸ್ತಿ ಒಲಿದುಬಂದಿದೆ.

25

ಶಿವಣ್ಣ-ಗೀತಾ ದಂಪತಿ ಕಾಲಿಗೆ ನಮಸ್ಕರಿಸಿದ ಕಿರೀಟಿ:

ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ತೆರಳುವ ಮುನ್ನ ಕಿರೀಟಿ ರೆಡ್ಡಿ ತೋರಿದ ಸಂಸ್ಕಾರ ಎಲ್ಲರ ಗಮನ ಸೆಳೆಯಿತು. ಸಮಾರಂಭದಲ್ಲಿ ಮುಂಚೂಣಿ ಸಾಲಿನಲ್ಲಿ ಹಾಜರಿದ್ದ ಸ್ಯಾಂಡಲ್‌ವುಡ್‌ನ ಹಿರಿಯ ನಟ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರ ಬಳಿ ತೆರಳಿ, ಭಕ್ತಿಯಿಂದ ಇಬ್ಬರ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದರು. ಶಿವಣ್ಣ ಮತ್ತು ಗೀತಾ ದಂಪತಿ ಕೂಡ ಕಿರೀಟಿಯನ್ನು ಪ್ರೀತಿಯಿಂದ ತಬ್ಬಿಕೊಂಡು ಶುಭ ಹಾರೈಸಿದರು. ಕಿರೀಟಿ ಅವರ ಈ ಹಿರಿಯರ ಮೇಲಿನ ಗೌರವ ಮತ್ತು ವಿನಯತೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿನಿಪ್ರಿಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

35

ಮಗನ ಸಾಧನೆಗೆ ತಂದೆ ಗಾಲಿ ಜನಾರ್ದನ ರೆಡ್ಡಿ ಭಾವುಕ ಪೋಸ್ಟ್:

ಪುತ್ರ ಕಿರೀಟಿಯ ಈ ಮಹತ್ವದ ಸಾಧನೆಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಅತ್ಯಂತ ಭಾವುಕರಾಗಿ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.

ಜನಾರ್ದನ ರೆಡ್ಡಿ ಅವರ ಪೋಸ್ಟ್ ಹೀಗಿದೆ:

"ನಮ್ಮ ಕುಟುಂಬಕ್ಕೆ ಅತ್ಯಂತ ಹೆಮ್ಮೆಯ ಹಾಗೂ ಸಂತಸದ ಕ್ಷಣ! ನನ್ನ ಪುತ್ರ ಕಿರೀಟಿ ಅಭಿನಯದ ಮೊದಲ ಸಿನಿಮಾ ‘ಜೂನಿಯರ್’ ಚಿತ್ರಕ್ಕೆ, ದೇಶದ ಹೆಮ್ಮೆಯ ಹಾಗೂ ಪ್ರತಿಷ್ಠಿತ ಸೈಮಾ ಅವಾರ್ಡ್ಸ್‌ನಲ್ಲಿ 'ಅತ್ಯುತ್ತಮ ಚೊಚ್ಚಲ ನಟ (ಕನ್ನಡ)' ಪ್ರಶಸ್ತಿ ದೊರೆತಿರುವುದು ತಂದೆ-ತಾಯಿಯಾಗಿ ನಮಗೆ ಅಪಾರ ಸಂತೋಷ ಮತ್ತು ಹೆಮ್ಮೆ ತಂದಿದೆ."

“ಕಿರೀಟಿಯ ಮೊದಲ ಹೆಜ್ಜೆಯನ್ನೇ ಇಷ್ಟೊಂದು ಪ್ರೀತಿಯಿಂದ ಸ್ವೀಕರಿಸಿ, ತಮ್ಮ ಅಮೂಲ್ಯ ಬೆಂಬಲ ಮತ್ತು ಆಶೀರ್ವಾದವನ್ನು ನೀಡಿದ ಕನ್ನಡದ ಚಿತ್ರಪ್ರೇಮಿಗಳಿಗೆ ಹೃದಯಪೂರ್ವಕ ಧನ್ಯವಾದಗಳು. ಈ ಯಶಸ್ಸಿನ ಹಿಂದೆ ಶ್ರಮಿಸಿದ 'ಜೂನಿಯರ್' ಚಿತ್ರದ ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಹಾಗೂ ಪ್ರತಿಯೊಬ್ಬ ತಂತ್ರಜ್ಞರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ನಿಮ್ಮ ಪರಿಶ್ರಮ, ಪ್ರತಿಭೆ ಮತ್ತು ಸಮರ್ಪಣೆಯೇ ಈ ಚಿತ್ರದ ಯಶಸ್ಸಿನ ಶಕ್ತಿ.”

45

"ಕಿರೀಟಿಯ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿದ ಸೈಮಾ ತೀರ್ಪುಗಾರರಿಗೂ ಹಾಗೂ ಕುಟುಂಬಕ್ಕೂ ವಿಶೇಷ ಧನ್ಯವಾದಗಳು. ಇದು ಕಿರೀಟಿಯ ಪಯಣದ ಆರಂಭವಷ್ಟೇ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನ ಗೆಲ್ಲಲಿ ಎಂಬುದು ನನ್ನ ಹಾರೈಕೆ. ಇದೇ ರೀತಿಯ ಪ್ರೀತಿ, ಆಶೀರ್ವಾದ ಮತ್ತು ಬೆಂಬಲವನ್ನು ನನ್ನ ಪುತ್ರ ಕಿರೀಟಿಯ ಮುಂದಿನ ಎಲ್ಲಾ ಚಿತ್ರಗಳಿಗೂ ನಾಡಿನ ಜನತೆ ಸದಾ ನೀಡಲಿ ಎಂದು ಹಾರೈಸುತ್ತೇನೆ. ಕಿರೀಟಿ, ನಿನ್ನ ಈ ಸಾಧನೆಗೆ ತಂದೆ-ತಾಯಿಯಾಗಿ ಅಪಾರ ಹೆಮ್ಮೆಪಡುತ್ತೇವೆ. ಇನ್ನಷ್ಟು ಎತ್ತರದ ಯಶಸ್ಸು ನಿನ್ನದಾಗಲಿ ಮಗನೆ..." ಎಂದು ರೆಡ್ಡಿ ಹಾರೈಸಿದ್ದಾರೆ.

55

'ಜೂನಿಯರ್' ಚಿತ್ರದಲ್ಲಿ ಅಬ್ಬರಿಸಿದ್ದ ಕಿರೀಟಿ:

'ಜೂನಿಯರ್' ಸಿನಿಮಾದಲ್ಲಿ ಅದ್ಭುತ ನೃತ್ಯ, ಸಾಹಸ ಹಾಗೂ ಭಾವನಾತ್ಮಕ ಅಭಿನಯದ ಮೂಲಕ ಕಿರೀಟಿ ರೆಡ್ಡಿ ಮೊದಲ ಚಿತ್ರದಲ್ಲೇ ಪ್ರೇಕ್ಷಕರ ಮತ್ತು ವಿಮರ್ಶಕರ ಗಮನ ಸೆಳೆದಿದ್ದರು. ಇದೀಗ ಮೊದಲ ಚಿತ್ರಕ್ಕೇ ಪ್ರತಿಷ್ಠಿತ ಸೈಮಾ ಪ್ರಶಸ್ತಿ ಪಡೆದಿರುವುದು ಅವರ ಮುಂದಿನ ಸಿನಿಪಯಣಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories