ಅಧಿಪತ್ರ ಕಂಟೆಂಟ್ ಪ್ರಧಾನ ಸಿನಿಮಾ, ಬಿಲ್ಡಪ್‌ಗಿಂತ ಕಥೆಗೆ ಪ್ರಾಧಾನ್ಯತೆ ಇದೆ: ಬಿಗ್‌ಬಾಸ್ ರೂಪೇಶ್ ಶೆಟ್ಟಿ

Published : Feb 06, 2025, 11:33 AM IST

ಒಬ್ಬ ಪ್ರೇಕ್ಷಕನಾಗಿ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದೇನೆ. ಇದೊಂದು ಕಂಟೆಂಟ್ ಪ್ರಧಾನ ಸಿನಿಮಾ. ಅಬ್ಬರ, ಆ್ಯಕ್ಷನ್, ಬಿಲ್ಡಪ್‌ಗಿಂತ ಕಥೆಗೆ ಪ್ರಾಧಾನ್ಯತೆ ಇದೆ ಎಂದರು ರೂಪೇಶ್ ಶೆಟ್ಟಿ.

PREV
16
ಅಧಿಪತ್ರ ಕಂಟೆಂಟ್ ಪ್ರಧಾನ ಸಿನಿಮಾ, ಬಿಲ್ಡಪ್‌ಗಿಂತ ಕಥೆಗೆ ಪ್ರಾಧಾನ್ಯತೆ ಇದೆ: ಬಿಗ್‌ಬಾಸ್ ರೂಪೇಶ್ ಶೆಟ್ಟಿ

ರೂಪೇಶ್ ಶೆಟ್ಟಿ ಹಾಗೂ ಜಾಹ್ನವಿ ನಾಯಕ, ನಾಯಕಿಯಾಗಿ ಅಭಿನಯಿಸಿರುವ ‘ಅಧಿಪತ್ರ’ ಸಿನಿಮಾ ಫೆಬ್ರವರಿ 7ಕ್ಕೆ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಪ್ರೀ ರಿಲೀಸ್‌ ಈವೆಂಟ್‌ನಲ್ಲಿ ಮಾತನಾಡಿದ ರೂಪೇಶ್‌ ಶೆಟ್ಟಿ, ಚಯನ್ ಶೆಟ್ಟಿ ಹೇಳಿದ ಕಥೆ ಕೇಳಿ ನಾನು ಅಧಿಪತ್ರ ಸಿನಿಮಾ ಒಪ್ಪಿಕೊಂಡೆ. 

26

ಒಬ್ಬ ಪ್ರೇಕ್ಷಕನಾಗಿ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದೇನೆ. ಇದೊಂದು ಕಂಟೆಂಟ್ ಪ್ರಧಾನ ಸಿನಿಮಾ. ಅಬ್ಬರ, ಆ್ಯಕ್ಷನ್, ಬಿಲ್ಡಪ್‌ಗಿಂತ ಕಥೆಗೆ ಪ್ರಾಧಾನ್ಯತೆ ಇದೆ ಎಂದರು. ನಾಯಕಿ ಜಾಹ್ನವಿ, ‘ಅನುಭವಿ ಕಲಾವಿದರಿರುವ ಸಿನಿಮಾದಲ್ಲಿ ನಟಿಸಿರುವುದು ಉತ್ತಮ ಅನುಭವ’ ಎಂದರು. 
 

36

ನಿರ್ದೇಶಕ ಚಯನ್ ಶೆಟ್ಟಿ, ‘ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಕರಾವಳಿಯ ಆಟಿ ಕಳಂಜ ಆಚರಣೆಯನ್ನು ಹೈಲೈಟ್‌ ಮಾಡಿದ್ದೇವೆ’ ಎಂದು ಹೇಳಿದರು. ದಿವ್ಯಾ ನಾರಾಯಣ್, ಕುಲದೀಪ್ ರಾಘವ್, ಲಕ್ಷ್ಮಿ ಗೌಡ ನಿರ್ಮಾಪಕರು.

46

ಕರಾವಳಿ ಭಾಗದ ಕತೆಯನ್ನು ಒಳಗೊಂಡ ಈ ಚಿತ್ರದಲ್ಲಿ ರೂಪೇಶ್‌ ಶೆಟ್ಟಿ ಅವರು ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರೂಪಕಿ ಜಾಹ್ನವಿ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. 

56

ಕರಾವಳಿ ಭಾಗದ ವಿಶೇಷ ಆಚರಣೆಗಳಾದ ಆಟಿ ಕಳಂಜಾ, ಯಕ್ಷಗಾನ, ಹುಲಿ ಕುಣಿತ ಈ ಚಿತ್ರದ ಹೈಲೈಟ್‌. ಚಯನ್‌ ಶೆಟ್ಟಿ ನಿರ್ದೇಶನದ, ದಿವ್ಯಾ ನಾರಾಯಣ್, ಕುಲದೀಪ್ ರಾಘವ್‌ ಲಕ್ಷ್ಮೀ ಗೌಡ ಅವರು ನಿರ್ಮಾಣದ ಚಿತ್ರ. 

66

ಎಂ.ಕೆ.ಮಠ, ಪ್ರಕಾಶ್‌ ತುಮಿನಾಡು, ರಘು ಪಾಂಡೇಶ್ವರ್‌, ದೀಪಕ್ ರೈ, ಕಾರ್ತಿಕ್‌ ಭಟ್‌, ಅನಿಲ್‌ ಉಪ್ಪಾಲ್‌, ಪ್ರಶಾಂತ್‌ ಮುಂತಾದವರು ಚಿತ್ರದ ಮುಖ್ಯ ಪಾತ್ರಧಾರಿಗಳು. ನೈಜ ಘಟನೆಯಿಂದ ಸ್ಫೂರ್ತಿ ಪಡೆದು ನಿರ್ಮಿಸುತ್ತಿರುವ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಚಿತ್ರವಿದು.

Read more Photos on
click me!

Recommended Stories