ಬರ್ತ್‌ ಡೇಗೆ ಬಿಲ್ಲ ರಂಗ ಬಾಷಾನಾಗಿ ಬಂದ ಕಿಚ್ಚ ಸುದೀಪ್; ಫ್ಯಾನ್ಸ್‌ ಡಬಲ್ ಜಾಕ್‌ಪಾಟ್

Published : Sep 02, 2026, 08:17 AM IST

ಅಭಿನಯ ಚಕ್ರವರ್ತಿ ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ, 'ಬಿಲ್ಲ ರಂಗ ಬಾಷಾ: ಫಸ್ಟ್ ಬ್ಲಡ್' ಎಂಬ ಹೊಸ ಸಿನಿಮಾದ ಲುಕ್ ಬಿಡುಗಡೆ ಮಾಡಲಾಗಿದೆ. ವಿಕ್ರಾಂತ್ ರೋಣ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರ 2027ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

PREV
15
ಸುದೀಪ್ ಮುಂದಿನ ಚಿತ್ರದ ಪೋಸ್ಟರ್

ಇಂದು ಅಭಿನಯ ಚಕ್ರವರ್ತಿ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವೈಯಕ್ತಿಕ ಕಾರಣಗಳಿಂದ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುತ್ತಿಲ್ಲ ಎಂದು ಸುದೀಪ್ ಮುಂಚಿತವಾಗಿಯೇ ಮಾಹಿತಿ ನೀಡಿದ್ದಾರೆ. ಹುಟ್ಟುಹಬ್ಬದ ಹಿನ್ನೆಲೆ ಸುದೀಪ್ ಮುಂದಿನ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದರ ಜೊತೆಯಲ್ಲಿ ಸುದೀಪ್ ಅವರ ಹೊಸ ಸಿನಿಮಾ ಸಹ ಘೋಷಣೆಯಾಗಿದೆ.

25
ರಂಗ ಬಾಷಾ: ಫಸ್ಟ್ ಬ್ಲಡ್ ಸಿನಿಮಾ

ಮ್ಯಾಕ್ಸ್ ಬಳಿಕ ಸುದೀಪ್ ಅವರ ಯಾವ ಸಿನಿಮಾವೂ ಬಿಡುಗಡೆಯಾಗಿಲ್ಲ. ಇದೀಗ ಬಿಲ್ಲ ರಂಗ ಬಾಷಾ: ಫಸ್ಟ್ ಬ್ಲಡ್ ಸಿನಿಮಾ Poster ಬಿಡುಗಡೆಯಾಗಿದ್ದು, ಸ್ವಾತಿಮುತ್ತು ನಟನ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಮಧ್ಯರಾತ್ರಿ 12 ಗಂಟೆಯಿಂದಲೇ ಸುದೀಪ್ ಅಭಿಮಾನಿಗಳು ಬರ್ತ್ ಡೇ ಆಚರಿಸುತ್ತಿದ್ದಾರೆ. 2027ರ ಅಂತ್ಯಕ್ಕೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಗಳಿವೆ.

35
ಅನೂಪ್ ಭಂಡಾರಿ ನಿರ್ದೇಶನ

ಈ ಮೊದಲು ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾ ನಿರ್ದೇಶನ ಮಾಡಿದ್ದ ಅನೂಪ್ ಭಂಡಾರಿ ಅವರೇ ಬಿಲ್ಲ ರಂಗ ಬಾಷಾ: ಫಸ್ಟ್ ಬ್ಲಡ್ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. 2027ರ ಜುಲೈ ಅಥವಾ ಸೆಪ್ಟೆಂಬರ್ ವೇಳೆಗೆ ಸಿನಿಮಾ ಟೀಸರ್ ಮತ್ತು ಟ್ರೈಲರ್ ಬಿಡುಗಡೆ ಮಾಡಲಾಗುತ್ತದೆ ಎಂದು ಅನೂಪ್ ಭಂಡಾರಿ ಮಾಹಿತಿ ನೀಡಿದ್ದಾರೆ.

45
ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಮತ್ತು ಪೀಪಲ್ ಮೀಡಿಯಾ ಫಾಕ್ಟರಿ

ಸುದೀಪ್ ಅವರ ಹೊಸ ಸಿನಿಮಾವನ್ನು ಪ್ರಿಯಾ ಸುದೀಪ್ ನೇತೃತ್ವದ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಮತ್ತು ಪೀಪಲ್ ಮೀಡಿಯಾ ಫಾಕ್ಟರಿ ಜಂಟಿಯಾಗಿ ನಿರ್ಮಾಣ ಮಾಡಲಿದೆ. ಇತ್ತೀಚೆಗಷ್ಟೆ ಬಿಡುಗಡೆಯಾದ 'ಮ್ಯಾಂಗೋ ಪಚ್ಚ' ಎಂಬ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಇನ್ನು ಪೀಪಲ್ ಮೀಡಿಯಾ ಫಾಕ್ಟರಿ ಸಂಸ್ಥೆಯು ಮಿರಾಯ್, ಕಾರ್ತಿಕೇಯ-2 ಮತ್ತು ದಿ ರಾಜ್ ಸಾಬ್ ಅಂತಹ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಗೋಲ್ಡನ್ ಸ್ಟಾರ್‌ ಗಣೇಶ್ ಅವರ 'ಪಿನಾಕ' ಸಿನಿಮಾವನ್ನು ಸಹ ಪೀಪಲ್ ಮೀಡಿಯಾ ಫಾಕ್ಟರಿ ನಿರ್ಮಾಣ ಮಾಡಿದೆ.

55
ಬಿಲ್ಲ ರಂಗ ಭಾಷಾ ಸಿನಿಮಾ ಜೊತೆ ಬಿಗ್‌ ಬಾಸ್

ಬಿಲ್ಲ ರಂಗ ಭಾಷಾ ಸಿನಿಮಾ ಚಿತ್ರೀಕರಣದ ಜೊತೆಯಲ್ಲಿ ಸುದೀಪ್, ಈ ಬಾರಿಯ ಬಿಗ್‌ಬಾಸ್ ಕನ್ನಡ ಸೀಸನ್ 13 ರಿಯಾಲಿಟಿ ಶೋ ನಿರೂಪಣೆ ಮಾಡಲಿದ್ದಾರೆ. ಇದೇ ಸೆಪ್ಟೆಂಬರ್ 6ರಿಂದ ಬಿಗ್‌ಬಾಸ್ ಶೋ ಆರಂಭಗೊಳ್ಳಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories