ನಟ ದಿಗಂತ್ ಎಡಗೈಯೇ ಅಪಘಾತಕ್ಕೆ ಕಾರಣ ಎಂದ ಕಿಚ್ಚ ಸುದೀಪ್: ಅಷ್ಟಕ್ಕೂ ಆಗಿದ್ದೇನು?

Published : Jun 09, 2025, 05:44 PM IST

ದಿಗಂತ್ ನಟನೆಯ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದ ಟ್ರೇಲರನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಚಿತ್ರರಂಗದ ಹಲವು ಘಟಾನುಘಟಿಗಳು ಮೆಚ್ಚಿಕೊಂಡಿದ್ದಾರೆ.

PREV
16

ಸಮರ್ಥ ಕಡಕೋಳ ನಿರ್ದೇಶನದ, ದಿಗಂತ್ ನಟನೆಯ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದ ಟ್ರೇಲರನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ.

26

‘ಸಿನಿಮಾ ವಿಶಿಷ್ಟವಾಗಿರುವುದಕ್ಕೆ ಪ್ರಯತ್ನ ಪಟ್ಟಾಗ ಆ ಸಿನಿಮಾ ವೀಕ್ಷಣೆಗೊಳಪಡುವ ಅರ್ಹತೆ ಗಳಿಸುತ್ತದೆ’ ಎಂದು ಈ ವೇಳೆ ಸುದೀಪ್ ಹೇಳಿದ್ದಾರೆ. ಈ ಚಿತ್ರ ಜೂ.13ರಂದು ಬಿಡುಗಡೆಯಾಗುತ್ತಿದೆ.

36

ಟ್ರೇಲರನ್ನು ರಿಷಬ್‌ ಶೆಟ್ಟಿ, ಶಿವರಾಜ್‌ ಕುಮಾರ್‌ ಸೇರಿದಂತೆ ಚಿತ್ರರಂಗದ ಹಲವು ಘಟಾನುಘಟಿಗಳು ಮೆಚ್ಚಿಕೊಂಡಿದ್ದಾರೆ. ಸಮರ್ಥ ಕಡಕೋಳ ಈ ಹಿಂದೆ ರಿಷಬ್ ನಟನೆಯ ‘ಆ್ಯಂಟಗನಿ ಶೆಟ್ಟಿ’ ಸಿನಿಮಾ ನಿರ್ದೇಶನ ಮಾಡಬೇಕಿತ್ತು.

46

ಆದರೆ ಈ ಸಿನಿಮಾ ಕಾರಣಾಂತರಗಳಿಂದ ಮುಂದೆ ಹೋಗಿದ್ದರಿಂದ ಸಮರ್ಥ್ ಎಡಗೈ ಬಳಸುವವರ ಕಷ್ಟ ಸುಖಗಳನ್ನು ಈ ವಿಶಿಷ್ಟ ಕಥಾ ಹಂದರದ ಸಿನಿಮಾ ಮೂಲಕ ಹೇಳಿದ್ದಾರೆ. ವಿಭಿನ್ನವಾಗಿ ಮೂಡಿ ಬಂದಿರುವ ಟ್ರೇಲರ್‌ಗೆ ಮೆಚ್ಚುಗೆ ಹರಿದು ಬರುತ್ತಿದೆ.

56

ಅಲ್ಲದೇ ಚಿತ್ರತಂಡ ಹಲವಾರು ಹೊಸ ರೀತಿಯ ಡಿಜಿಟಲ್ ಪ್ರಚಾರಗಳನ್ನು ಕೈಗೊಂಡಿದ್ದು, ಗಮನ ಸೆಳೆಯುತ್ತಿದೆ. ನಿಧಿ ಸುಬ್ಬಯ್ಯ ಮತ್ತು ಧನು ಹರ್ಷ ನಾಯಕಿಯರಾಗಿ ನಟಿಸಿದ್ದಾರೆ.

66

ಖ್ಯಾತ ನಿರ್ದೇಶಕ ಗುರುದತ್ ಗಾಣಿಗ, ಬ್ಲಿಂಕ್ ನಿರ್ಮಾಪಕ ರವಿಚಂದ್ರ ಮತ್ತು ಶಾಖಾಹಾರಿ ಸಿನಿಮಾದ ನಿರ್ಮಾಪಕ ರಾಜೇಶ್ ಕೀಳಂಬಿ ಸೇರಿಕೊಂಡು ಈ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ.

Read more Photos on
click me!

Recommended Stories