ಅಕ್ಕ ಚಿನ್ನ ಮಾರಿ ಹಣ ಕೊಟ್ಟರು, ಹೆಂಡತಿ 25 ಸಾವಿರ ಸಾಲ ಕೊಟ್ಟರು; ಕಷ್ಟದಲ್ಲಿದ್ದ ಸುದೀಪ್‌ ಕಥೆ

First Published | Jan 10, 2025, 12:12 PM IST

ಸಿನಿಮಾ ಜರ್ನಿ ಆರಂಭಿಸಿದ್ದಾಗ ಸುದೀಪ್ ಸಖತ್ ಕಷ್ಟದಲ್ಲಿ ಇದ್ದರು. ಆಗ ಪತ್ನಿ ಮತ್ತು ಅಕ್ಕ ಮಾಡಿರುವ ಸಹಾಯವನ್ನು ಮರೆತಿಲ್ಲ. 
 

ಕನ್ನಡ ಚಿತ್ರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಆರಂಭದಲ್ಲಿ ಸಖತ್ ಕಷ್ಟ ಪಟ್ಟಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ಶುರುವಾದ ಮೊದಲ ಸಿನಿಮಾದಿಂದ 100 ಕೋಟಿ ಬಜೆಟ್‌ ಸಿನಿಮಾ ಮಾಡುವವರೆಗೂ ಬೆಳೆದಿದ್ದಾರೆ. 

ಸುದೀಪ್ ಕಷ್ಟದಲ್ಲಿ ಇದ್ದಾಗ ಸಹಾಯಕ್ಕೆ ಬಂದಿದ್ದೇ ಪತ್ನಿ ಪ್ರಿಯಾ ಮತ್ತು ಅಕ್ಕ ಅಂತೆ. ನಟನನ್ನಾಗಿಸುವ ನಿಟ್ಟಿನಲ್ಲಿ ಕುಟುಂಬ ಪಾತ್ರ ಎಷ್ಟಿದೆ ಎಂದು ಪ್ರಶ್ನಿಸಿದ್ದಾಗ 'ಪ್ರತಿಯೊಬ್ಬರ ಪಾತ್ರವೂ ಇದೆ ಇಂಥವರದ್ದೇ ಅಂತ ಹೇಳಕ್ಕಾಗಲ್ಲ' ಅಂದಿದ್ದಾರೆ. 

Tap to resize

'ತುಂಬಾ ಕಡಿಮೆ ವೆಚ್ಚದಲ್ಲಿ ‘ಸ್ಪರ್ಶ’ ಚಿತ್ರ ಮಾಡೋದಿಕ್ಕೆ ಹೊರಟ್ವಿ. ಅಂದುಕೊಂಡಂತೆ ಆಗಲಿಲ್ಲ. ಬಜೆಟ್ ಹೆಚ್ಚಾಯಿತು. ಆಗ ನನ್ನ ಅಕ್ಕ ತಮ್ಮ ಬಳಿ ಇದ್ದ ಆಭರಣ ಮಾರಿ ಹಣ ಕೊಟ್ಟರು.'

' ಕೈಯಲ್ಲಿ ಒಂದು ಪೈಸೆ ಇರಲಿಲ್ಲ. ಬೇರೆ ಕಡೆ ಕೆಲಸ ಮಾಡುತ್ತಿದ್ದ ನನ್ನ ಪತ್ನಿ ಪ್ರಿಯಾ ಬಳಿ 25 ಸಾವಿರ ರುಪಾಯಿ ಸಾಲ ಕೇಳಿ ಪಡೆದುಕೊಂಡೆ. ಎಲ್ಲ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಬಂದಾಗ ಮತ್ತೆ ದುಡ್ಡು ಖಾಲಿ.'

'ಆಗ ಮಧು ಬಂಗಾರಪ್ಪ ಬಂದು 5 ಲಕ್ಷ ಸಾಲ ಕೊಟ್ಟರು. ಇದೆಲ್ಲವನ್ನು ಮರೆಯೋಕಾಗಲ್ಲ. ಇದರ ಜತೆಗೆ ‘ಹುಚ್ಚ’ ಸಿನಿಮಾ ತಂಡ. ಈ ಎಲ್ಲವೂ ಸೇರಿಯೇ ಸುದೀಪ್ ಹೀರೋ ಆಗಿದ್ದು. ಯಾರೋ ಒಬ್ಬರಿಂದಲ್ಲ' ಎಂದಿದ್ದಾರೆ. 

ಸಿನಿಮಾ ಕೆಲಸಗಳು ಶುರುವಾದಾಗ ಓಡಾಡಲು ಕಷ್ಟವಾಗುತ್ತಿತ್ತು ಎಂದು ಪತ್ನಿ ಪ್ರಿಯಾ ಆಗ ಬಳಸುತ್ತಿದ್ದ ಕೈನಟಿಕ್ ಹೋಂಡಾ ಗಾಡಿಯನ್ನು ಸುದೀಪ್ ಬಳಸುತ್ತಿದ್ದಂತೆ. ಪೆಟ್ರೋಲ್‌ ಕೂಡ ಪ್ರಿಯಾ ಹಾಕಿಸಿ ಕೊಡುತ್ತಿದ್ದರು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. 

ಇನ್ನು ಈಗ ಪ್ರಿಯಾ ಅವರೇ ನಿರ್ಮಾಣ ಸಂಸ್ಥೆ ತೆರೆದಿದ್ದಾರೆ. ಪತಿ ಸುದೀಪ್ ನಡೆದುಕೊಂಡು ಬರುತ್ತಿರುವ ಚಾರಿಟಿಗೆ ಸಪೋರ್ಟ್ ಆಗಿ ನಿಂತಿದ್ದಾರೆ. ಈ ಕುಟುಂಬ ಶಕ್ತಿ ಎಂದು ಹೇಳಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ನಡೆದ ಸರಿಗಮಪ ರಿಯಾಲಿಟ ಶೋನಲ್ಲಿ ಸುದೀಪ್ ಪತ್ನಿ ಪ್ರಿಯಾ ಹಾಗೂ ಪುತ್ರಿ ಸಾನ್ವಿ ಭಾಗಿಯಾಗಿದ್ದರು. ಸರ್ಪ್ರೈಸ್‌ ಆದ ಸುದೀಪ್ ಖುಷಿಯಿಂದ ಸಮಯ ಕಳೆದರು. 

Latest Videos

click me!