ತಂದೆಯ ಜೊತೆ ಕೆಜಿಎಫ್ ಬೆಡಗಿಯ ಟೆಂಪಲ್ ರನ್… ನಟಿಯ ನ್ಯಾಚುರಲ್ ಬ್ಯೂಟಿಗೆ ಗಂಡು ಮಕ್ಳು ಫಿದಾ

Published : Sep 11, 2024, 04:15 PM ISTUpdated : Sep 11, 2024, 04:31 PM IST

ಕೆಜಿಎಫ್ ಸಿನಿಮಾ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ ಬ್ಯೂಟಿ ಶ್ರೀನಿಧಿ ಶೆಟ್ಟಿ ಸದ್ಯ ತಮ್ಮ ತಂದೆಯ ಜೊತೆಗೆ ಹಲವು ದೇಗುಲಗಳ ದರ್ಶನ ಮಾಡಿ ಬಂದಿದ್ದಾರೆ.   

PREV
110
ತಂದೆಯ ಜೊತೆ ಕೆಜಿಎಫ್ ಬೆಡಗಿಯ ಟೆಂಪಲ್ ರನ್… ನಟಿಯ ನ್ಯಾಚುರಲ್ ಬ್ಯೂಟಿಗೆ ಗಂಡು ಮಕ್ಳು ಫಿದಾ

ಕೆಜಿಎಫ್ (KGF) ಸಿನಿಮಾ ಮೂಲಕ ರೀನಾ ದೇಸಾಯಿ ಎಂಬ ಜಂಭದ ಹುಡುಗಿಯಾಗಿ ಮಿಂಚಿದ, ಕೆಜಿಎಫ್ 2 ಸಿನಿಮಾದಲ್ಲಿ ಮೆಹಬೂಬಾ ಆಗಿ ಕನ್ನಡಿಗರ ಮನಗೆದ್ದ ಬೆಡಗಿ ಶ್ರೀನಿಧಿ ಶೆಟ್ಟಿ. 
 

210

ಮಾಡೆಲ್ ಆಗಿ ತಮ್ಮ ಕರಿಯರ್ ಆರಂಭಿಸಿದ ಶ್ರೀನಿಧಿ ಶೆಟ್ಟಿ (Shrinishi Shetty), 2016ರಲ್ಲಿ ಮಿಸ್ ಸೂಪರ್ ನ್ಯಾಷನಲ್ ಕಿರೀಟವನ್ನು ಮುಡಿಗೇರಿಸೋ ಮೂಲಕ ಭಾರತಕ್ಕೆ ಗೌರವ ತಂದಿದ್ದರು. 
 

310

2018ರಲ್ಲಿ ಕೆಜಿಎಫ್ ಸಿನಿಮಾ ಮೂಲಕ ಸಿನಿ ಜಗತ್ತಿಗೆ ಎಂಟ್ರಿ ಕೊಟ್ಟ ಮಂಗಳೂರು ಬೆಡಗಿ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಆದರೂ ಇವರ ಪಾಪ್ಯುಲಾರಿಟಿ ಏನೂ ಕಡಿಮೆಯಾಗಿಲ್ಲ. 
 

410

ಕನ್ನಡದಲ್ಲಿ ಕೆಜಿಎಫ್ ಸಿನಿಮಾಗಳಲ್ಲಿ ಮಿಂಚಿದ ನಂತರ ಶ್ರೀನಿಧಿ ನೇರವಾಗಿ ತಮಿಳು ಸಿನಿಮಾ ಇಂಡಷ್ಟ್ರಿಗೆ ಹಾರಿದ್ದರು. ಅಲ್ಲಿ ಚಿಯಾನ್ ವಿಕ್ರಮ್ ಗೆ (Chiyan Vikram) ನಾಯಕಿಯಾಗಿ ಕೋಬ್ರಾ ಚಿತ್ರದಲ್ಲಿ ನಟಿಸಿದ್ದರು. 
 

510

ಕೋಬ್ರಾ ಸಿನಿಮಾ ಬಳಿಕ ಶ್ರೀನಿಧಿ ತೆಲುಗು ಸಿನಿಮಾಗೂ ಎಂಟ್ರಿ ಕೊಟ್ಟಿದ್ದು, ಖಂಡಿತವಾಗಿಯೂ ಶೆಟ್ಟಿ ರಶ್ಮಿಕಾ, ಶ್ರೀಲೀಲಾರನ್ನು ಹಿಂದಿಕ್ಕಲಿದ್ದಾರೆ ಎನ್ನುವ ಗುಸು ಗುಸು ಕೇಳಿ ಬಂದಿತ್ತು. ಆದ್ರೆ ಹಾಗೇ ಆಗಿಯೇ ಇಲ್ಲ. 
 

610

ಶ್ರೀನಿಧಿ ತಮ್ಮ ಅಮೋಘ ಅಭಿನಯದ ಮೂಲಕ ಜನ ಮನ ಗೆದ್ದರೂ ಸಹ ಹೆಚ್ಚಿನ ಅವಕಾಶ ಸಿಗಲೇ ಇಲ್ಲ. ಸದ್ಯ ನಟಿಯ ಕೈಯಲ್ಲಿ ಎರಡು ಸಿನಿಮಾಗಳಿವೆ. ಒಂದು ಕನ್ನಡ ಸಿನಿಮಾ, ಮತ್ತೊಂದು ತೆಲುಗು. ಶ್ರೀನಿಧಿ ತೆಲುಗಿನಲ್ಲಿ ತೆಲುಸು ಕಾದ ಸಿನಿಮಾದಲ್ಲಿ ಸಿದ್ಧು ಜೊನ್ನಲಗಡ್ಡ ಮತ್ತು ರಾಶಿ ಖನ್ನಾ ಜೊತೆ ನಟಿಸಲಿದ್ದಾರೆ. ಇನ್ನು ಕನ್ನಡದಲ್ಲಿ ಕಿಚ್ಚ ಸುದೀಪ್ ಸಿನಿಮಾ ಒಂದರಲ್ಲಿ ಶ್ರೀನಿಧಿ ನಟಿಸಲಿದ್ದಾರೆ. 
 

710

ಸೋಶಿಯಲ್ ಮೀಡಿಯಾದಲ್ಲೂ ಅಷ್ಟೊಂದು ಆಕ್ಟೀವ್ ಆಗಿರದ ಶ್ರೀನಿಧಿ, ಆಗೋಮ್ಮೆ ಈಗೊಮ್ಮೆ ತಮ್ಮ ಮುದ್ದಾದ ಫೋಟೊಗಳನ್ನು ಅಪ್ ಲೋಡ್ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ನಟಿಯ ಸಿಂಪಲ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. 
 

810

ಹೆಚ್ಚಾಗಿ ನ್ಯಾಚುರಲ್ ಆಗಿಯೇ ಕಾಣಿಸಿಕೊಳ್ಳುವ ಶ್ರೀನಿಧಿ, ಇದೀಗ ತಾವು ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿರುವ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಒಂದು ಚೂರು ಮೇಕಪ್ ಇಲ್ಲದೇ, ಸಲ್ವಾರ್ ಕಮೀಜ್ ಧರಿಸಿ, ಹಣೆ ಮೇಲೆ ದೇವರ ಪ್ರಸಾದ ಹಚ್ಚಿ ತೆಗೆಸಿಕೊಂಡಿರುವ ಒಂದಷ್ಟು ಫೋಟೊಗಳನ್ನು ಶ್ರೀನಿಧಿ ಹಂಚಿಕೊಂಡಿದ್ದಾರೆ.
 

910

ಹೆಚ್ಚಾಗಿ ತಮ್ಮ ಸಂಸ್ಕೃತಿ ಆಚರಣೆಯನ್ನು (culture) ಅನುಸರಿಸುತ್ತಾ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ಕುಡ್ಲದ ಹುಡುಗ ಶ್ರೀನಿಧಿ, ಈ ಬಾರಿ ತಂದೆಯ ಜೊತೆಗೆ ವಿವಿಧ ದೇಗುಲಗಳಿಗೆ ಭೇಟಿ ನೀಡಿದ್ದು, ಈ ಹತ್ತು ಫೋಟೊಗಳು ಶುದ್ಧ ಸಂತೋಷ, ಪ್ರೀತಿ, ನನ್ನ ದೇವರುಗಳು, ನನ್ನ ದೇವಾಲಯಗಳು, ನನ್ನ ಶಕ್ತಿಯ ಮೂಲವನ್ನು ತೋರಿಸುತ್ತೆ ಎಂದು ಕ್ಯಾಪ್ಶನ್ ಬರೆದಿದ್ದಾರೆ. 
 

1010

ತಮ್ಮ ನೆಚ್ಚಿನ ಬೆಡಗಿಯ ಸಿಂಪಲ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದು, ನೀವು ತುಂಬಾನೆ ಸಿಂಪಲ್ ಮತ್ತು ಬ್ಯೂಟಿಫುಲ್. ಕ್ರಶ್, ಡಾರ್ಲಿಂಗ್, ನ್ಯಾಚುರಲ್ ಬ್ಯೂಟಿ, ಡ್ಯಾಡಿಸ್ ಲಿಟಲ್ ಗರ್ಲ್, ಭಾರತೀಯ ಸಂಪ್ರದಾಯಿಕ ಉಡುಗೆಯಲ್ಲಿ ತುಂಬಾನೆ ಸುಂದರವಾಗಿ ಕಾಣಿಸ್ತೀರಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ ಜನ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories