ಕಪ್ಪು ಸೀರೆಯಲ್ಲಿ ಮಿಂಚಿದ UI, KD ಚೆಲುವೆ ರೀಷ್ಮಾ ನಾಣಯ್ಯ

First Published | Jan 11, 2024, 5:45 PM IST

ಕನ್ನಡದಲ್ಲಿ ಸದ್ಯಕ್ಕೆ ಸಾಲು ಸಾಲು ಚಿತ್ರಗಳಲ್ಲಿ ಮಿಂಚಿತ್ತಿರುವ ಕೊಡಗಿನ ಚೆಲುವೆ ರೀಷ್ಮಾ ನಾಣಯ್ಯ ಕಪ್ಪು ಸೀರೆಯುಟ್ಟ ಫೋಟೋಗಳನ್ನು ಶೇರ್ ಮಾಡಿದ್ದು, ಹೇಗಿದೆ ನೀವೇ ನೋಡಿ. 
 

ಕನ್ನಡ ಸಿನಿಮಾ ಲೋಕದಲ್ಲಿ ಕಳೆದೆರಡು ವರ್ಷದಿಂದ ಮಿಂಚುತ್ತಿರುವ ಚೆಲುವೆ ಅಂದ್ರೆ ಅದು ರೀಷ್ಮಾ ನಾಣಯ್ಯ (Reeshma Nanaiah). ಕೊಡಗಿನ ಈ ಬೆಡಗಿ ಸದ್ಯ ಸ್ಟಾರ್ ನಟರ ಸಿನಿಮಾಗಳಲ್ಲೂ ನಾಯಕಿಯಾಗಿ ಮಿಂಚುತ್ತಿದ್ದಾರೆ. 
 

ಈಗಷ್ಟೇ ಪಿಯುಸಿ ಮುಗಿಸಿರುವ ರೀಷ್ಮಾ ನಾಣಯ್ಯ ನಿರ್ದೇಶಕ ಪ್ರೇಮ್ ಅವರ ಏಕ್ ಲವ್ಯಾ ಸಿನಿಮಾ ಮೂಲಕ ಕನ್ನಡ ಸಿನಿಮಾ (Kannada Cinema) ಜಗತ್ತಿಗೆ ಎಂಟ್ರಿಕೊಟ್ಟರು, ಅದಾದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. 
 

Tap to resize

ಮಾಡೆಲಿಂಗ್ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ರೀಷ್ಮಾ, ಎಕ್ ಲವ್ಯಾ, ರಾಣಾ, ಸ್ಪೂಕಿ ಕಾಲೇಜ್, ಬಾನ ದಾರಿಯಲ್ಲಿ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೂ ಸ್ಕ್ರೀನ್ ಹಂಚಿಕೊಂಡಿದ್ದಾರೆ ಈ ಚೆಲುವೆ. 
 

ಇನ್ನು ಇನ್ನಷ್ಟೇ ಬಿಡುಗಡೆಯಾಗಬೇಕಿರುವ ಹೆಚ್ಚು ಕುತೂಹಲ ಹುಟ್ಟಿಸಿರುವ ವಾಮನ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಯುಐ, ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾದಲ್ಲಿ ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ ರೀಷ್ಮಾ. 

ಧ್ರುವ ಸರ್ಜಾ (Druva Sarja) ಅಭಿನಯದ ಬಹು ನಿರೀಕ್ಷಿತ ಕೆಡಿ ಸಿನಿಮಾದಲ್ಲಿ ಮಚ್ ಲಕ್ಷ್ಮೀ ಪಾತ್ರದಲ್ಲಿ ರೀಷ್ಮಾ ನಟಿಸುತ್ತಿದ್ದು, ಈ ಪಾತ್ರದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗುತ್ತಿದೆ. ಚಿತ್ರದಲ್ಲಿನ ಇವರ ಫೋಟೋ ಭಾರಿ ವೈರಲ್ ಆಗಿತ್ತು.

ರೀಷ್ಮಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದು, ಅಭಿಮಾನಿಗಳಂತೂ ಈ ಸಿಂಪಲ್ ಬ್ಯೂಟಿಯ ಅಂದಕ್ಕೆ ಮನಸೋತು ರಾಣಿ, ಅಂದಗಾರ್ತಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

ಕಪ್ಪು ಫ್ರಿಲ್ ಸೀರೆ ಜೊತೆಗೆ, ಗ್ಲಿಟರಿಂಗ್ ಬ್ಲ್ಯಾಕ್ ಬ್ಲೌಸ್ ಧರಿಸಿ, ಸಣ್ಣಗೆ ಸೆರಗು ಹಾಕಿರುವ ರೀಷ್ಮಾ ತಮ್ಮ ಮುದ್ದಾದ ನಗು ಚೆಲ್ಲುವ ಮೂಲಕ ಸಖತ್ತಾಗಿ ಪೋಸ್ ನೀಡಿದ್ದಾರೆ. 
 

ಇತ್ತೀಚೆಗಷ್ಟೇ ಯುಐ ಸಿನಿಮಾದ (UI cinema) ಟೀಸರ್ ರಿಲೀಸ್ ಆಗಿದ್ದು, ಈ ಕಾರ್ಯಕ್ರಮದಲ್ಲಿ ರೀಷ್ಮಾ ಕಪ್ಪು ಸೀರೆಯುಟ್ಟು ಮಿಂಚಿದ್ದಾರೆ. ಇನ್ನು ಉಪೇಂದ್ರ ಅವರ ಹೊಸ ಚಿತ್ರದ ಟೀಸರ್ ಸ್ಯಾಂಡಲ್ ವುಡ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಸಿನಿಮಾ ಯಾವಾಗ ಬರುತ್ತೆ ಎಂದು ಜನ ಕಾಯ್ತಿದ್ದಾರೆ. 

Latest Videos

click me!